ಬಾಂಗ್ಲಾದೇಶದದಲ್ಲಿ (Bangladesh) ಹಿಂದೂ ಆಧ್ಯಾತ್ಮಿಕ ಚಿಂತಕ ಚಿನ್ಮಯ್ ಕೃಷ್ಣ ದಾಸ್ (Chinami krishna das) ಅವರ ಬಂಧನವನ್ನು ಖಂಡಿಸಿ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheik haseena) ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಶೇಖ್ ಹಸೀನಾ ದೇಶದ್ರೋಹದ ಆರೋಪದ ಮೇಲೆ ಚಿನ್ಮಯ್ ದಾಸ್ ಅವರನ್ನು ಬಂಧಿಸಲಾಗಿದೆ. ಸನಾತನ ಧಾರ್ಮಿಕ (Hindu culture) ಸಮುದಾಯದ ಹಿರಿಯ ನಾಯಕನನ್ನು ಬಮಧಿಸಿರುವುದು ಖಂಡನೀಯ ಎಂದಿದ್ದಾರೆ.
ಈ ಕೂಡಲೇ ಹಿಂದೂಗಳ ಭಾವನೆಗೆ ಬೆಲೆಕೊಟ್ಟು, ಕಾನೂನಾತ್ಮಕವಾಗಿ ಅವರನ್ನು ನಡೆಸಿಕೊಳ್ಳಬೇಕು. ಮತ್ತು ಕೂಡಲೇ ಅವರನ್ನು ಬಂಧನದಿಂದ ಬಿಡುಗಡೆ ಮಾಡಬೇಕೆಂದು ಶೇಖ್ ಹಸೀನಾ ಆಗ್ರಹಿಸಿದ್ದಾರೆ.