ದೇಶದ್ರೋಹ ಕಾಯ್ದೆ ಅಡಿ ಈಗಾಗಲೇ ಪ್ರಕರಣ ದಾಖಲಾಗಿರುವವರು ಮತ್ತು ಭವಿಷ್ಯದಲ್ಲಿನ ಪ್ರಕರಣಗಳಲ್ಲಿ ಜನರ ಹಿತಾಸಕ್ತಿ ಕಾಪಾಡಲು, ಕಾನೂನು ಮರು ಪರಿಶೀಲನೆ ಮುಗಿಯುವವರೆಗೂ ಈ ಪ್ರಕರಣಗಳನ್ನು ರದ್ದುಗೊಳಿಸಲು ಸಾಧ್ಯವೇ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಹೌದು, ಬ್ರಿಟಿಷರ ಕಾಲದಲ್ಲಿ ಜಾರಿಯಾದ ದೇಶದ್ರೋಹ ಕಾನೂನಿನ ಪ್ರಸ್ತುತತೆಯ ಪರಾಮರ್ಶೆ ನಡೆಸುವ ಸಂದರ್ಭದಲ್ಲಿ ಅದನ್ನು ತಡೆ ಹಿಡಿಯಲು ಸಾಧ್ಯವೇ ಮತ್ತು ಅದರ ಅಡಿ ಆರೋಪ ಹೊತ್ತಿರುವ ಜನರಿಗೆ ರಕ್ಷಣೆ ನೀಡಬಹುದೇ / ಬಾಕಿ ಉಳಿದಿರುವ ದೇಶದ್ರೋಹ ಪ್ರಕರಣಗಳ ಬಗ್ಗೆ ತನ್ನ ನಿಲುವನ್ನು ನಾಳೆ (ಬುಧವಾರ) ಸ್ಪಷ್ಟಪಡಿಸುವಂತೆ ಎಸ್ಸಿ ಕೇಂದ್ರವನ್ನು ಕೇಳಿದೆ.
ಸಿಜೆಐ ರಮಣ ನೇತೃತ್ವದ ತ್ರಿಸದಸ್ಯ ಪೀಠದ ಪ್ರಶ್ನೆಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಉತ್ತರಿಸಿದ್ದು, ಕೇಂದ್ರವು ದೇಶದ್ರೋಹ ಕಾನೂನನ್ನು ಮರುಪರಿಶೀಲಿಸುವ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದ್ದಾರೆ.
ಮುಂದುವರೆದು, “ಸಮಯ ಚೌಕಟ್ಟಿನೊಳಗೆ ಉತ್ತರಿಸುವುದು ಕಷ್ಟ. ಆದರೆ ಪ್ರಕ್ರಿಯೆ ಪ್ರಾರಂಭವಾಗಿದೆ. ಎಂದು ಹೇಳಿದಕ್ಕೆ ಉತ್ತರಿಸಿದ ಸಿಜೆಐ ರಮಣ, ತಾವು ಮರು ಪರಿಶೀಲನೆ ನಡೆಸುತ್ತಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ನಾವು ವಿಚಾರಹೀನರಾಗಿ ಇರಲು ಸಾಧ್ಯವಿಲ್ಲ. ಎಷ್ಟು ಸಮಯ ನೀಡಬೇಕು ಎಂದು ನಾವು ನಿರ್ಧರಿಸುತ್ತೇವೆ” ಎಂದು ತರಾಟೆ ತೆಗೆದುಕೊಂಡರು. ನಾಳೆ (ಬುಧವಾರ) ಸ್ಪಷ್ಟಪಡಿಸುವಂತೆ ಎಸ್ಸಿ ಕೇಂದ್ರವನ್ನು ಕೇಳಿದೆ.