ಮುಡಾ(MUDA) ಹಾಗೂ ವಾಲ್ಮೀಕಿ ನಿಗಮದ ಹಗರಣ (valmiki board scam) ಸಿಎಂ, ಡಿಸಿಎಂ ಬುಡಕ್ಕೆ ಸುತ್ತಿಕೊಳ್ಳಲಿದೆ ಎಂಬ ಬಿಜೆಪಿ (BJP) ನಾಯಕರ ಆರೋಪಕ್ಕೆ ಡಿಸಿಎಂ (Dcm) ಡಿಕೆಶಿ ತಿರುಗೇಟು ನೀಡಿದ್ದಾರೆ. ಯಾರ ಯಾರ ಬುಡಕ್ಕೆ ಬರುತ್ತೆ ನೋಡೋಣ ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

ನಾವು ಏನು ಮಾಡಬಾರದ್ದು ಮಾಡಿದ್ದೀವಿ, ಹಾಗಿದ್ರೆ ನಾವು ಏನು ಭಾಗಿಯಾಗಿದ್ದೀವಾ ? ನಮಗೆ ಇದರಲ್ಲಿ 10 ರೂಪಾಯಿ ಏನಾದ್ರೂ ಸಿಕ್ಕಿದೀಯಾ.ಯಾರೋ ಆಫೀಸರ್ಸ್ ಅಯೋಗ್ಯ ನನ್ನ ಮಕ್ಕಳು ಮಾಡಿದ್ದಾರೆ.ಅದಕ್ಕೆ ಶಿಕ್ಷೆ ಆಗಬೇಕು ಅಂತ ಅರೆಸ್ಟ್ ಮಾಡಿದ್ದೀವಿ ಎಂದಿದ್ದಾರೆ.

ನಾವು ಈ ಹಗರಣಗಳ ತನಿಖೆಯಲ್ಲಿ ಮಧ್ಯಪ್ರವೇಶ ಮಾಡಿಲ್ಲ. ಈಗಾಗಲೇ ಎಸ್‌ಐಟಿ (SIT) ಕೋಟ್ಯಾಂತರ ರೂಪಾಯಿ ರಿಕವರಿ ಮಾಡಿದ್ದಾರೆ.ಬಿಜೆಪಿ ಕಾಲದಲ್ಲಿ ಎಷ್ಟು ಎಷ್ಟು ನಿಗಮದಲ್ಲಿ ಅಕ್ರಮ ಆಗಿದೆ ಆ ಎಲ್ಲವನ್ನೂ ಬಯಲಿಗೆ ಎಳಿತೀವಿ. ಅದಕ್ಕೆ ನಮ್ಮನ್ನ ಉತ್ತರ ಕೊಡೋಕೆ ಬಿಡ್ತಾ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.