ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಆರಂಭವಾಗಿದ್ದು, ಮೊನ್ನೆ ಹಾಗೂ ನೆನ್ನೆ ಕಾರ್ಯಕ್ರಮದ ಫಸ್ಟ್ ಎಪಿಸೋಡ್‌ಅನ್ನ ಪ್ರಸಾರ ಮಾಡಲಾಯ್ತು. ಕಾರ್ಯಕ್ರಮದ ಮೊದಲ ಅತಿಥಿಯಾಗಿ ಸ್ಯಾಂಡಲ್ ಕ್ವೀನ್ ರಮ್ಯಾ ಭಾಗಿಯಾಗಿದ್ರು. ಆದರೆ ರಮ್ಯಾ ಅವರ ಎಪಿಸೋಡ್‌ನಿಂದ ವೀಕ್ಷಕರಿಗೆ ಕೊಂಚ ನಿರಾಸೆಯಾಗಿದೆ. ಕಾರಣ ರಮ್ಯಾ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಇಂಗ್ಲೀಷ್ ಪದ ಬಳಕೆ ಮಾಡಿರುವುದು. ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಕಾರ್ಯಕ್ರಮದಲ್ಲಿ ರಮ್ಯಾ ಸೀರೆಯುಟ್ಟು ಸ್ಟೇಜ್ ಮೇಲೆ ಬರ್ತಿದ್ದಂತೆ ಫ್ಯಾನ್ಸ್ ಫಿದಾ ಆಗಿದ್ರು. ಇತ್ತ ಕಿರುತೆರೆ ವೀಕ್ಷಕರು, ರಮ್ಯಾ ಬದುಕು, ಅವರು ನಡೆದುಬಂದ ಹಾದಿ ಬಗ್ಗೆ ತಿಳಿದುಕೊಳ್ಳೋಕೆ ಕಾತುರದಿಂದ ಕಾಯ್ತಿದ್ರು. ಆದರೆ ಕಾರ್ಯಕ್ರಮ ಶುರುವಾದ ಸ್ವಲ್ಪ ಹೊತ್ತಲ್ಲೇ ವೀಕ್ಷಕರು ಕಿರಿಕಿರಿ ಅನುಭವಿಸಿದ್ರು. ಕಾರಣ ಇಷ್ಟೇ.. ರಮ್ಯಾ ಅವರ ಇಂಗ್ಲೀಷ್.
ರಮ್ಯಾ ಇಡೀ ಕಾರ್ಯಕ್ರಮದಲ್ಲಿ ಕನ್ನಡ ಬಳಸಿದ್ದು ಕಡಿಮೆ ಅನ್ನೋದು ನೆಟ್ಟಿಗರ ವಾದ. ಇದಂತೂ ಕನ್ನಡ ಕಾರ್ಯಕ್ರಮದಂತೆ ಇರ್ಲಿಲ್ಲ. ಯಾವುದೋ ಕಂಗ್ಲಿಷ್ ಕಾರ್ಯಕ್ರಮದಂತೆ ಇತ್ತು ಅಂತ ನೆಟ್ಟಿಗರು ಪದ್ಮಾವತಿಯನ್ನ ಸಿಕ್ಕಾಪಟ್ಟೆ ಟ್ರೋಲ್ ಮಾಡ್ತಿದ್ದಾರೆ. ಇದು ಕನ್ನಡ ಕಾರ್ಯಕ್ರಮನಾ? ಅಥವಾ ಇಂಗ್ಲೀಷ್ ಕಾರ್ಯಕ್ರಮನಾ? ಅಂತ ನೆಟ್ಟಿಗರು ಪಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ.. ಇತ್ತೀಚೆಗೆ ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಯೂಟ್ಯೂಬರ್ ಡಾ.ಬ್ರೋ ಅವರನ್ನ ಶೋಗೆ ಕರೆಸೋಕೆ ಆಗಲ್ಲ ಎಂದಿದ್ರು.. ಈ ಬಗ್ಗೆ ಪ್ರಶ್ನೆ ಕೇಳಿದ್ದ ಪತ್ರಕರ್ತನಿಗೆ ಡಾ.ಬ್ರೋ ಯಾರು ಅಂತ ನಿಮಗೆ ಗೊತ್ತು. ನನಿಗ್ ಗೊತ್ತು.. ನಿಮ್ಮ ಅಜ್ಜಿ, ಅಮ್ಮನಿಗೆ ಗೊತ್ತಿಲ್ಲ ಎಂದಿದ್ರು. ರಮ್ಯಾ ಎಪಿಸೋಡ್ ನೋಡಿದ್ಮೇಲೆ ʼನಮ್ಮ ಅಮ್ಮ, ಅಜ್ಜಿಗೆ ಇಂಗ್ಲೀಷ್ ಬರಲ್ಲ.. ಯಾವಾಗ ಶೋ ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡ್ತೀರಾ ಹೇಳಿʼ ಅಂತ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.