ಉಗ್ರಂ ಹಾಗೂ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿರುವ ಬಹು ನಿರೀಕ್ಷಿತ ಚಿತ್ರ ‘ಸಲಾರ್’ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ನಿರೀಕ್ಷೆಯಂತೆ ದೃಶ್ಯ ವೈಭವವೇ ಕಾಣಸಿಗುತ್ತದೆ.
ಪ್ರಭಾಸ್ ದೇವನಾಗಿ ಮತ್ತು ಪೃಥ್ವಿರಾಜ್ ವರದನಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಮಕ್ಕಳಿದ್ದಾಗಿನ ಸ್ನೇಹವನ್ನು ವಿವರಿಸುವ ದೃಶ್ಯದೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಇಡೀ ಕಥೆಯನ್ನು ಅವರಿಬ್ಬರ ಸ್ನೇಹದ ನಂಟಿನಿಂದ ಕಟ್ಟಲಾಗಿದ್ದು, ದೇವ ವರದನಿಗಾಗಿ ಏನನ್ನು ಬೇಕಾದರು ಮಾಡಲು ಸಿದ್ದಸಿರುತ್ತಾನೆ.
ಇಬ್ಬರೂ ಸ್ನೇಹಿತರು ಮತ್ತವರ ಪೋಷಕರು ಇರುವುದು ಖಾನ್ಸಾರ್ ಎಂಬ ಪ್ರದೇಶದಲ್ಲಿ ಒಂದು ಘಟೆಯಿಂದಾಗಿ ದೇವ ( ಪ್ರಭಾಸ್) ಮತ್ತವನ ತಾಯಿ ಊರು ಬಿಟ್ಟು ಹಾಗೂ ಪ್ರಾಣ ಸ್ನೇಹಿತ ವರದನನ್ನು ಬಿಟ್ಟು ಹೊರಡುತ್ತಾನೆ. ಹೊರಡುವ ಮುನ್ನ ನೀನು ಯಾವಾಗ ಬೇಕಾದರು ಕರಿ ನಾನು ಬರ್ತಿನಿ ಎಂಬ ಮಾತನ್ನು ಸಹ ಕೊಟ್ಟು ಹೋಗ್ತಾನೆ.
ಅದರಂತೆ ವರದನ ಕೋರಿಕೆ ಮೇಲೆ ಇಪ್ಪತ್ತೈದು ವರ್ಷಗಳ ನಂತರ ಖಾನ್ಸಾರ್ಗೆ ಬರುವ ದೇವನಿಗೆ ಖಾನ್ಸಾರ್ನಲ್ಲಿ ಇರುವ ಎಲ್ಲರೂ ಕಳ್ಳರಂತೆ ಕಾಣಿಸಿಕೊಳ್ಳುತ್ತಾರೆ. ಕೆಟ್ಟ ವ್ಯವಸ್ಥೆಯ ವಿರುದ್ದ ನಿಲ್ಲುತ್ತಾನೆ. ಸ್ನೇಹಿತ ವಿರುದ್ಧ ನಿಲ್ಲುವವರನ್ನು ತುಂಡು ತುಂಡಾಗಿ ಕತ್ತರಿಸುತ್ತಾನೆ.
ಜನರಿಗೆ ಇಷ್ಟವಾಗುವಂತಹಾ ತಾಯಿ-ಮಗನ ಕಥೆ, ಸ್ನೇಹಿತರ ನಂಟಿನ ಕತೆ, ಹೊಡೆದು ಹಾಳುವ ಕತೆ, ಶೋಷಣೆಯನ್ನು ಮೆಟ್ಟಿ ನಿಲ್ಲುವ ಕತೆಗಳಿಂದ ಕೂಡಿ ಖಾನ್ಸಾರ್ ಕೋಟೆಯಲ್ಲಿ ರಕ್ತಚರಿತ್ರೆ ಸೃಷ್ಟಿಯಾಗುತ್ತದೆ.
ಕತೆ,ಚಿತ್ರಕತೆ, ನಿರ್ದೇಶಕದಲ್ಲಿ ಪ್ರಶಾಂತ್ ನೀಲ್ ಗೆದಿದ್ದಾರೆ. ಪ್ರಭಸ್ಗೆ ತೆಲುಗು ಅಲ್ಲದೇ ಬೇರೆ ಬೇರೆ ಇಂಡಸ್ಟ್ರಿಯಲ್ಲಿ ಮರುಜೀವ ಸಿಕ್ಕಂತಾಗಿದೆ. ಪೃಥ್ವಿರಾಜ್ ಅವರ ಅಭಿನಯಕ್ಕೆ ಹಾಗೂ ಕನ್ನಡಕ್ಕೆ ನನ್ನಿಂದ ಫುಲ್ ಮಾರ್ಕ್ಸ್. ಕನ್ನಡದ ನಟರನ್ನು ಪ್ರಶಾಂತ್ ನೀಲ್ ಬಳಸಿಕೊಂಡಿದ್ದು, ನಾಯಕಿ ತಂದೆಯಾಗಿ ರವಿ ಭಟ್. ಪಂಡಿತ್ ಆಗಿ ನಟ ನವೀನ್ ಶಂಕರ್, ಪೃಥ್ವಿ ತಮ್ಮನಾಗಿ ನಟ ಪ್ರಮೋದ್ ಮೆಚ್ಯೂರ್ ಆಕ್ಟ್ ಮಾಡಿದ್ದಾರೆ. ದೇವರಾಜ್, ಮಧು ಗುರುಸ್ವಾಮಿ, ‘ಗರುಡ’ ರಾಮ್ ತಮಗೆ ಸಿಕ್ಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ದೃಶ್ಯಗಳಲ್ಲಿ ಛಾಯಾಚಿತ್ರಗ್ರಾಹಕ ಭುವನ್ಗೌಡ ತಮ್ಮ ಕೈಚಳಕ ತೋರಿಸಿದ್ದಾರೆ. ಸಿನಿಮಾಗೆ ರವಿ ಬಸ್ರೂರ್ ಅವರ ಸಂಗೀತವಿದ್ದು, ಚಿತ್ರದುದ್ದಕ್ಕೂ ಒಳ್ಳೆ ಬಿಜಿಎಂ ಕೊಟ್ಟಿದ್ದಾರೆ.
ಮೊದಲರ್ಧ ‘ಉಗ್ರಂ’ನ ಛಾಯೆ ಕಾಣಿಸಿದ್ದಾದರೂ ವಿರಾಮದ ನಂತರ ಕಥೆ ಬೇರೆಡೆಗೆ ಹೊರಳಿಕೊಳ್ಳುತ್ತದೆ. ಚಿತ್ರಮಂದಿರಗಳಿಂದ ಹೊರಬಂದ ಪ್ರೇಕ್ಷಕರು ಉಗ್ರಂ ತರ ಇದ್ದರೂ ಇದು ಉಗ್ರಂ ಅಲ್ಲ ಮತ್ತೊಂದು ಮೈಲಿಗಲ್ಲಿನ ಚಿತ್ರವಿದು ಎಂದು ಹೇಳುತ್ತಿದ್ದಾರೆ.