ರಿಯಲ್ ಸ್ಟಾರ್ ಉಪೇಂದ್ರ ಮತ್ತು ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ `ಐ ಆ್ಯಮ್ ಆರ್’ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ.
ಕಿಚ್ಚ ಸುದೀಪ್ ಶನಿವಾರ ಬೆಂಗಳೂರಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎ ಸ್ವ್ಕೇರ್ ಪ್ರೋಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಐ ಆ್ಯಮ್ ಆರ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ನಿರ್ದೇಶಕ ರಾಮ್ಗೋಪಾಲ್ ವರ್ಮಾ ಭೂಗತಲೋಕದ ಕಥೆ ಹೇಳಲು ಹೊರಟಿದ್ದಾರೆ. ಭಾರತದ ಕ್ರಿಮಿನಲ್ ಇತಿಹಾಸದಲ್ಲಿ ವಿಸ್ಮಯಕಾರಿ ಹಾಗೂ ವಿಶಿಷ್ಟ ದರೋಡೆಕೋರ ಎನಿಸಿಕೊಂಡಿರುವ ವ್ಯಕ್ತಿಯ ಜೀವನ ಆಧರಿಸಿ ಈ ಸಿನಿಮಾ ಮೂಡಿಬರಲಿದೆ.

ಚಿತ್ರದಲ್ಲಿ ಉಪೇಂದ್ರ ಅವರು ಬೆಂಗಳೂರಿನಲ್ಲಿ ಮಾತ್ರವಲ್ಲದೇ ಮುಂಬೈನ ಮಾಫಿಯಾ ಮತ್ತು ದುಬೈನ ಡಿ ಕಂಪನಿಯನ್ನು ಹೆದರಿಸುವ ಭಯಾನಕ ಗ್ಯಾಂಗ್ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆರ್ಜಿವಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ `ಐ ಆ್ಯಮ್ ಆರ್’ ಚಿತ್ರದ ಗ್ಲಿಂಪ್ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ವಿಡಿಯೋದಲ್ಲಿ ಖಡಕ್ ಲುಕ್ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.