ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಒಬಿಸಿ (OBC) ಅಂದರೆ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಪರಿಹಾರ ನೀಡಿದೆ.ಹಿಂದುಳಿದ ವರ್ಗಗಳ ಮೀಸಲಾತಿ ಸೌಲಭ್ಯ ಪಡೆಯುವಲ್ಲಿ ‘ಕೆನೆಪದರ’ (Creamy Layer) ಎಂಬ ನಿಯಮ ಮುಖ್ಗವಾದದ್ದು.OBC ಮೀಸಲಾತಿ ಪಡೆಯುವಾಗ ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವು ₹8 ಲಕ್ಷಕ್ಕಿಂತ ಹೆಚ್ಚಿದ್ದರೆ ಅವರು ಕೆನೆಪದರಕ್ಕೆ (Creamy Layer) ಒಳಪಡುತ್ತಾರೆ. ಆದರೆ, ಸುಪ್ರೀಂ ಕೋರ್ಟ್ ಈ ವಿಚಾರವಾಗಿ ಕೆಲವೊಂದು ಪ್ರಮುಖ ವಿನಾಯಿತಿಗಳನ್ನು ನೀಡಿದೆ.

ವಾರ್ಷಿಕ ಕುಟುಂಬ ಆದಾಯ 8 ಲಕ್ಷ ರೂಪಾಯಿಗಿಂತ ಹೆಚ್ಚು ಇದ್ದರೂ, ಪೋಷಕರು ಕೆಳಮಟ್ಟದ ಸರ್ಕಾರಿ ಉದ್ಯೋಗಗಳಲ್ಲಿ (Government Job) ಇದ್ದರೆ ಅವರನ್ನು ಸ್ವಯಂ ಕೆನೆಪದರದಲ್ಲಿ ಸೇರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ತೀರ್ಪು ಕಾರಣದಿಂದ ಹಿಂದೆ ಯುಪಿಎಸ್ಸಿ ಪರೀಕ್ಷೆಯಿಂದ (UPSC Exam) ಹೊರಗಿಡಲ್ಪಟ್ಟ ಹಲವು ಅಭ್ಯರ್ಥಿಗಳಿಗೆ ಮತ್ತೆ ಅವಕಾಶ ದೊರೆಯುವ ಸಾಧ್ಯತೆ ಇದೆ.

ಸುಪ್ರೀಂ ಕೋರ್ಟ್ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು 2004ರಲ್ಲಿ ಹೊರಡಿಸಿದ್ದ ಪತ್ರದ ಪ್ಯಾರಾಗ್ರಾಫ್ 9 ಅನ್ನು ಅಮಾನ್ಯ ಎಂದು ಘೋಷಿಸಿದೆ. ಆ ನಿಯಮದ ಪ್ರಕಾರ ಕೆಲ ಸಂದರ್ಭಗಳಲ್ಲಿ ಸಂಬಳದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಕೆನೆಪದರಕ್ಕೆ ಸೇರಿಸಲಾಗುತ್ತಿತ್ತು. ನ್ಯಾಯಾಲಯದ ತೀರ್ಪಿನ ನಂತರ ಈ ವಿಧಾನವನ್ನು ರದ್ದುಪಡಿಸಲಾಗಿದೆ.

ವಿನಾಯಿತಿ ನಿಯಮಗಳು ಹೀಗಿದೆ:
ಸರ್ಕಾರಿ ನೌಕರರ ವಿಷಯದಲ್ಲಿ ಅವರ ವಾರ್ಷಿಕ ವೇತನವನ್ನು (Salary) ₹8 ಲಕ್ಷದ ಲೆಕ್ಕಾಚಾರಕ್ಕೆ ಬಳಸುವುದಿಲ್ಲ. ಬದಲಾಗಿ ಅವರ ಹುದ್ದೆಯ ಶ್ರೇಣಿಯನ್ನು (Post/Designation) ನೋಡಲಾಗುತ್ತದೆ. ಅಂದರೆ, ಪೋಷಕರು ಗ್ರೂಪ್ ‘ಎ’ ಅಥವಾ ಗ್ರೂಪ್ ‘ಬಿ’ ಅಧಿಕಾರಿಗಳಾಗಿದ್ದರೆ ಮಾತ್ರ ಕೆನೆಪದರಕ್ಕೆ ಸೇರುತ್ತಾರೆ. ಆದರೆ, ಗ್ರೂಪ್ ‘ಸಿ’ ಅಥವಾ ‘ಡಿ’ ನೌಕರರ ಸಂಬಳ ಎಷ್ಟೇ ಇದ್ದರೂ ಅವರು ಕೆನೆಪದರಕ್ಕೆ ಒಳಪಡುವುದಿಲ್ಲ. ಈ ತೀರ್ಪನ್ನು ಜಾರಿಗೆ ತರಲು ಕೇಂದ್ರ ಸರ್ಕಾರದ ಸಿಬ್ಬಂದಿ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಆರು ತಿಂಗಳ ಕಾಲಾವಕಾಶ ನೀಡಿದೆ.

ಕೆನೆಪದರವನ್ನು ನಿರ್ಧರಿಸುವಾಗ ಕೃಷಿ ಭೂಮಿಯಿಂದ ಬರುವ ಆದಾಯವನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಕೇವಲ ಕೃಷಿಯನ್ನೇ ಅವಲಂಬಿಸಿರುವ ಕುಟುಂಬದ ಆದಾಯ ಎಷ್ಟೇ ಇದ್ದರೂ ಅವರು ‘ಕೆನೆಪದರ ರಹಿತ’ (Non-Creamy Layer) ವರ್ಗಕ್ಕೆ ಸೇರುತ್ತಾರೆ.ಇದರೊಂದಿಗೆ, ಕುಟುಂಬದ ಆದಾಯವು ಸತತವಾಗಿ ಮೂರು ವರ್ಷಗಳ ಕಾಲ ₹8 ಲಕ್ಷಕ್ಕಿಂತ ಹೆಚ್ಚಿರಬೇಕು. ಒಂದು ವೇಳೆ ಕೇವಲ ಒಂದು ವರ್ಷ ಮಾತ್ರ ಹೆಚ್ಚಿದ್ದು, ಉಳಿದ ವರ್ಷಗಳಲ್ಲಿ ಕಡಿಮೆಯಿದ್ದರೆ ಅವರು ಕೆನೆಪದರಕ್ಕೆ ಸೇರುವುದಿಲ್ಲ.






