ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ(Renukaswamy Murder Case) ಸಂಬಂಧ ಇಂದು ಸಾಕ್ಷ್ಯ ವಿಚಾರಣೆ ಶುರುವಾಗಿದೆ. ನಗರದ 57 ನೇ ಸಿಸಿಹೆಚ್ ಕೋರ್ಟ್ ನಲ್ಲಿ ಮಧ್ಯಾಹ್ನ 12 ಗಂಟೆಯಿಂದ ವಿಚಾರಣೆ ನಡೆಯುತ್ತಿದ್ದು, ದರ್ಶನ್(Darshan) ಸೇರಿ 7 ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಉಳಿದ ಆರೋಪಿಗಳು ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಸಾಕ್ಷ್ಯ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ಹಾಜರಾಗಿದ್ದರೆ, ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಜರಾಗಿದ್ದಾರೆ.

ಇನ್ನು ಸಾಕ್ಷ್ಯ ವಿಚಾರಣೆಯ ಮೊದಲ ಹಂತವಾಗಿ ರೇಣುಕಾಸ್ವಾಮಿ ತಂದೆ -ತಾಯಿ ಕೋರ್ಟ್ ಗೆ ಹಾಜರಾಗಿದ್ದಾರೆ. ಇಬ್ಬರು ತಮ್ಮ ಮಗನ ಕಿಡ್ನಾಪ್, ಕೊಲೆ ಸಂಬಂಧ ತಮಗೆ ತಿಳಿದಿರುವ ಮಾಹಿತಿಯನ್ನ ಕೋರ್ಟ್ ಗೆ ತಿಳಿಸಲಿದ್ದಾರೆ. ಹಾಗೆ ಇಬ್ಬರು ಸಾಕ್ಷ್ಯಗಳನ್ನ ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿ ವಕೀಲರು ಕೆಲವು ಪ್ರಶ್ನೆಗಳನ್ನ ಕೇಳಿ ಉತ್ತರ ಪಡೆಯಲಿದ್ದಾರೆ.

ಸದ್ಯ ಇಬ್ಬರ ಸಾಕ್ಷ್ಯ ವಿಚಾರಣೆ ಪ್ರಕ್ರಿಯೆಯನ್ನ ಮುಚ್ಚಿದ ಕೋರ್ಟ್ ಹಾಲ್ ನಲ್ಲಿ ನಡೆಸಬೇಕೆಂದುದರ್ಶನ್ ಪರ ವಕೀಲರ ಮನವಿ ಮಾಡಿದ ಹಿನ್ನೆಲೆ ಅದೇ ರೀತಿ ವಿಚಾರಣೆ ನಡೆಸಲು ಕೋರ್ಟ್ ನಿರ್ಧರಿಸಿದೆ. ಹೀಗಾಗಿ ಕೋರ್ಟ್ ಹಾಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ವಕೀಲರು ಆರೋಪಿಗಳು ಮಾತ್ರ ಹಾಜರಿದ್ದಾರೆ.











