ತಲೆನೋವು ನಾನ ಕಾರಣಗಳಿಗೆ ಬರುತ್ತದೆ. ಜ್ವರ ಬಂದಾಗ ಹಲ್ಲು ನೋವಾದಾಗ, ಟೆನ್ಶನ್ ಹೆಚ್ಚಾದಾಗ, ಊಟ ಬಿಟ್ಟಾಗ ಈ ಎಲ್ಲಾ ಕಾರಣಕ್ಕು ತಲೆನೋವು ಬರುವುದು ಕಾಮನ್.ತಲೆನೋವು ಅಲ್ಲಿ ಮೈಗ್ರೇನ್ ಕೂಡ ಒಂದು. ಮೈಗ್ರೇನ್ ಬಂದಾಗ ಅಬ್ಬಬ್ಬ ಆ ನೋವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಮೈಗ್ರೇನ್ ಅಂದ್ರೆ ಅರ್ಧ ತಲೆ ನೋವು ಕಾಣಿಸಿಕೊಳ್ಳುತ್ತದೆ. ಮೈಗ್ರೇನ್ ಹೆಚ್ಚಾದಾಗ ಯಾವುದರಲ್ಲೂ ಕೂಡ ಆಸಕ್ತಿ ಇರುವುದಿಲ್ಲ ಊಟ ತಿಂಡಿ ಸರಿಯಾಗಿ ಸೇರುವುದಿಲ್ಲ ಸುಸ್ತು ವಾಕರಿಕೆ ಇವೆಲ್ಲವೂ ಕೂಡ ಕಾಡುತ್ತದೆ. ಈ ಸಿಂಪಲ್ ರೆಮಿಡಿಯಿಂದ ಮೈಗ್ರೇನ್ ಸಮಸ್ಯೆಯಿಂದ ರಿಲ್ಯಾಕ್ಸ್ ಆಗಬಹುದು.!

ಐಸ್ ಪ್ಯಾಕ್
ಒಂದು ಮಟ್ಟಿಗೆ ಐಸ್ ಕ್ಯೂಬ್ ಗಳನ್ನ ಹಾಕಿ ಕವರ್ ಮಾಡಿ ನಂತರ ಆ ಬಟ್ಟೆಯನ್ನ ಕುತ್ತಿಗೆ, ಹೆಗಲು ಹಾಗೂ ಹಣೆಯ ಭಾಗದಲ್ಲಿ ಕೆಲ ನಿಮಿಷಗಳ ಕಾಲ ಇಡಿ. ಇದರಿಂದ ಟೆನ್ಸ್ ಮಜಲ್ ಗಳು ರಿಲ್ಯಾಕ್ಸ್ ಆಗುತ್ತದೆ ಹಾಗೂ ಬ್ಲಡ್ ಫ್ಲೋ ಸರಿಯಾಗಿ ಆಗುತ್ತದೆ ಇದರಿಂದ ಅರ್ಧ ತಲೆನೋವು ಕಡಿಮೆಯಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಬಟ್ಟೆ ಇಲ್ಲದೆ ಡೈರೆಕ್ಟ್ ಐಸ್ಅನ್ನು ಇಡಬೇಡಿ.

ಶುಂಠಿ
ಹೆಚ್ಚು ಜನ ಮೈಗ್ರೇನ್ ಕಾಣಿಸಿಕೊಂಡ ಟೀ ಅಥವಾ ಕಾಫಿಯನ್ನು ಕುಡಿಯುತ್ತಾರೆ.ಆದ್ರೆ ಇವುಗಳ ಬದಲಿಗೆ ,ಶುಂಠಿ ಟೀ ಅಥವಾ ನಿಮ್ಮ ಆಹಾರದಲ್ಲಿ ಶುಂಠಿಯನ್ನು ಬೆರೆಸಿ ಸೇವಿಸುವುದರಿಂದ ಒಳ್ಳೇದು.ಇದು ಮೈಗ್ರೇನ್ ಸಿಂಪ್ಟಮ್ಸ್ ಗೆ ಬೆಸ್ಟ್.

ಹೈಡ್ರೇಟ್ ಆಗಿರಿ
ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗಲೂ ಅರ್ಧ ತಲೆನೋವು ಕಾಣಿಸಿಕೊಳ್ಳುತ್ತದೆ ಹಾಗಾಗಿ ದಿನಕ್ಕೆ ಎರಡರಿಂದ ಮೂರು ಲೀಟರ್ ಅಷ್ಟು ನೀರನ್ನ ಕುಡಿಯುವುದರಿಂದ ಅರ್ಧ ತಲೆ ನೋವುಗೆ ಗುಡ್ ಬೈ ಹೇಳಬಹುದು.

ಆಪಲ್ ಸೈಡರ್ ವಿನಿಗರ್
ಒಂದು ಲೋಟ ಬೆಚ್ಚಗಿನ ನೀರಿಗೆ ಒಂದೆರಡು ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವಿನಿಗರನ್ನ ಬೆರೆಸಿ ಟಾನಿಕ್ ರೂಪದಲ್ಲಿ ಸೇವಿಸುವುದರಿಂದ ಮೈಗ್ರೇನ್ ತಕ್ಷಣಕ್ಕೆ ಕಡಿಮೆಯಾಗುತ್ತದೆ.