RCB ಮಹಿಳೆಯರ ತಂಡದುಂಡ ಕನ್ನಡತಿ ಹೊರಬಂದ್ರಾ..? ಇಂಥದ್ದೊಂದು ವಿಚಾರ ಆರ್ಸಿಬಿ (RCB) ಅಭಿಮಾನಿಗಳ ಪಾಲಿಗೆ ನಿರಾಸೆ ತರಿಸುವಂತೆ ಮಾಡಿದೆ. ಆದ್ರೆ ಈ ವಿಚಾರ ಇನ್ನಷ್ಟೇ ಅಧಿಕೃತವಾಗಿ ಹೊರ ಬೀಳಬೇಕಿದೆ.

ಹೌದು, 2025ರ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ (Women’s premier league) ಗೆಲುವಿನ ಮೂಲಕ ಅದ್ಭುತ ಆರಂಭ ಪಡೆದಿದ್ದ ಆರ್‌ಸಿಬಿ ತಂಡಕ್ಕೆ ಈಗ ಆಘಾತ ಎದುರಾಗಿದೆ. RCB ತಂಡದ ಸ್ಟಾರ್ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಗಾಯದಿಂದ ಬಳಲುತ್ತಿದ್ದು, ಈ ಬಾರಿಯ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
ಹೀಗಾಗಿ ಶ್ರೇಯಾಂಕ ಪಾಟೀಲ್ ಅವರ ಬದಲಾಗಿ RCB ಅನುಭವಿ ಆಲ್‌ರೌಂಡರ್ ಸ್ನೇಹ್ ರಾಣಾ (Sneha rana) ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಸ್ನೇಹ್ ರಾಣಾರನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ. ಹೀಗಾಗಿ ಅವರನ್ನು RCB ಖರೀದಿಸಲಿದೆ.


