ರಶ್ಮಿಕಾ ಹಾಗು ವಿಜಯ್ ದೇವರಕೊಂಡ ಮದುವೆ ಸುದ್ದಿ ಕಳೆದ ಕೆಲ ತಿಂಗಳುಗಳಿಂದಲೂ ಹರಿದಾಡುತ್ತಲೇ ಇದೆ. ಇತ್ತೀಚೆಗಷ್ಟೆ ಇವರ ಮದುವೆ ರಿಸೆಪ್ಷನ್ನ ಆಮಂತ್ರಣ ಪತ್ರಿಕೆಯ ವಿಡಿಯೋ ಸಹ ವೈರಲ್ ಆಗಿತ್ತು. ಆದರೆ ರಶ್ಮಿಕಾ ಈ ಕುರಿತು ಏನನ್ನೂ ಹೇಳದೆ ಮೌನವಾಗೇ ಇದ್ದರು. ಈಗ ರಶ್ಮಿಕಾ ಮೊದಲ ಬಾರಿಗೆ ತಮ್ಮ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ಮದವೆಗೆ ಹೆಸರೊಂದನ್ನು ಇಟ್ಟಿದ್ದಾರೆ. ಆ ಹೆಸರನ್ನು ಸೂಚಿಸಿರುವುದು ಅವರ ಅಭಿಮಾನಿಗಳೇ ! ರಶ್ಮಿಕಾ ಅವರು ತಮ್ಮ ಹಾಗೂ ವಿಜಯ್ ದೇವಕರೊಂಡ ಮದುವೆಗೆ ‘ದಿ ವೆಡ್ಡಿಂಗ್ ಆಫ್ ವಿರೋಷ್’ ಎಂದು ಹೆಸರಿಟ್ಟಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಒಟ್ಟಿಗೆ ‘ವಿರೋಷ್’ ಎಂದು ಅವರ ಅಭಿಮಾನಿಗಳು ಕರೆಯುತ್ತಿದ್ದರು.

ಅಭಿಮಾನಿಗಳ ಮೇಲಿನ ಪ್ರೀತಿಯ ಕಾರಣಕ್ಕೆ ತಮ್ಮ ಮದುವೆಗೆ ಇದೀಗ ‘ದಿ ವೆಡ್ಡಿಂಗ್ ಆಫ್ ವಿರೋಷ್’ ಎಂದು ರಶ್ಮಿಕಾ ಹೆಸರಿಟ್ಟಿದ್ದಾರೆ. ಹಾಗೂ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಎಷ್ಟೊಂದು ಪ್ರೀತಿಯಿಂದ, ನೀವು ನಮಗೆ ಒಂದು ಹೆಸರನ್ನು ನೀಡಿದ್ದೀರಿ. ನೀವು ನಮ್ಮನ್ನು ‘ವಿರೋಶ್’ ಎಂದು ಕರೆದಿದ್ದೀರಿ.ಆದ್ದರಿಂದ ಇಂದು ಪೂರ್ಣ ಹೃದಯದಿಂದ, ನಿಮ್ಮ ಗೌರವಾರ್ಥವಾಗಿ, ನಮ್ಮ ಒಗ್ಗೂಡುವಿಕೆಗೆ ಹೆಸರಿಸುತ್ತಿದ್ದೇವೆ.ಇಷ್ಟೊಂದು ಪ್ರೀತಿಯಿಂದ ನಮ್ಮನ್ನು ಪ್ರೀತಿಸಿದ್ದಾಕ್ಕಾಗಿ ಧನ್ಯವಾದಗಳು. ನೀವು ನಮ್ಮ ಒಂದುಭಾಗ. ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.






