ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ(Bigg Boss Kannada season 12 )ಈ ವಾರ ಟಾಸ್ಕ್‌ಗಳಿಗೆ ಬ್ರೇಕ್ ಕೊಟ್ಟು ಸ್ಪರ್ಧಿಗಳು ಬಹು ದಿನಗಳಿಂದ ಕಾದಿದ್ದ, ಫ್ಯಾಮಿಲಿ ವೀಕ್(Family Week) ನಡೆಸಲಾಗುತ್ತಿದೆ. ಮೊದಲು ರಾಶಿಕ ತಮ್ಮ ಹಾಗೂ ಅಮ್ಮ ಬಿಗ್ ಬಾಸ್ ಮನೆಯೊಳಗೆ ಬಂದರೆ, ಬಳಿಕ ಸೂರಜ್ ಅವರ ಅಮ್ಮ ಹಾಗೂ ಅಕ್ಕ ಎಂಟ್ರಿ ಕೊಟ್ಟಿದ್ದರು. ಅದಾದ ಬಳಿಕ ಧುನುಷ್ ಅಮ್ಮ ಹಾಗೂ ಪತ್ನಿ, ರಕ್ಷಿತಾ ಅಮ್ಮ, ಅಶ್ವಿನಿ ಗೌಡ ಅವರ ಅಮ್ಮ ಹಾಗೂ ಮಗ ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾರೆ.

ಇನ್ನು ಇಂದಿನ ಸಂಚಿಕೆಯಲ್ಲಿ ಗಿಲ್ಲಿ ನಟ ತಂದೆ-ತಾಯಿ ಹಾಗೂ ಧ್ರುವಂತ್ ಕುಟುಂಬದವರು ಬಿಗ್ ಬಾಸ್ ಮನೆಯೊಳಗೆ ಬರಲಿದ್ದಾರೆ. ಫ್ಯಾಮಿಲಿ ವೀಕ್ ನಡೆಯುತ್ತಿರುವ ಕಾರಣದ ಒಂದೆಡೆ ಮನೆ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದರೆ, ಮತ್ತೊಂದೆಡೆ ಮನೆಯಲ್ಲಿ ನಗುವಿನ ಹೊಳೆ ಹರಿಯುತ್ತಿದೆ. ಈ ಬಾರಿ ಬೇರೆ ಟಾಸ್ಕ್ ಇರದ ಕಾರಣ ಪಾಸ್ ಮತ್ತು ಪ್ಲೇ ಆಟವನ್ನೇ ಆಡಿಸಲಾಗುತ್ತಿದೆ. ಇದನ್ನೇ ಉಪಯೋಗಿಸಿಕೊಂಡಿರುವ ಸ್ಪರ್ಧಿಗಳು ಪಾಸ್ ಆದ ಸ್ಪರ್ಧಿಗೆ ಮನಬಂದಂತೆ ಮೇಕಪ್ ಮಾಡುತ್ತಿದ್ದಾರೆ.

ಈ ಪೈಕಿ ರಕ್ಷಿತಾ ಶೆಟ್ಟಿ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಮನೆಯ ಇತರ ಸದಸ್ಯರು ರಕ್ಷಿತಾಳನ್ನು ಚಿತ್ರ ವಿಚಿತ್ರವಾಗಿ ರೆಡಿ ಮಾಡಿದ್ದಾರೆ. ಮುಖಕ್ಕೆ ಮೆಕಪ್, ಬಣ್ಣ ಬಣ್ಣದ ಹೂವಿನ ಮಾಲೆ, ಕಪ್ಪು ಕೋಟ್ ಹಾಗೂ ಗುಲಾಬಿ ಬಣ್ಣದ ಟೋಪಿ ಹಾಕಿ ವೇಷಭೂಷಣ ಮಾಡಲಾಗಿದ್ದು, ರಕ್ಷಿತಾ ಸಕತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸೂರಜ್ ಹಾಗೂ ಗಿಲ್ಲಿ ನಟ ರಕ್ಷಿತಾ ಅವರನ್ನು ಗೊಂಬೆಯಂತೆ ಎತ್ತಿಕೊಂಡು ಮನೆ ಸುತ್ತಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.











