ಕನ್ನಡ ಚಿತ್ರರಂಗದ ಪಾಲಿಗೆ ರಾಜ್ ಬಿ ಶೆಟ್ಟಿ ಸದ್ಯ ಓಡುವ ಕುದುರೆಗಳ ಪೈಕಿ ಒಬ್ಬರು . ಗರುಡ ಗಮನ ವೃಷಭ ವಾಹನ ಗ್ರ್ಯಾಂಡ್ ಸಕ್ಸಸ್ ಬಳಿಕ ಇದೀಗ ಸಿನಿಪ್ರಿಯರನ್ನು ರಂಜಿಸೋಕೆ ಟೋಬಿ ಸಿನಿಮಾದ ಮೂಲಕ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ .
ಟೋಬಿ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿರುವ ರಾಜ್ ಬಿ ಶೆಟ್ಟಿ ಇದಕ್ಕೆ ಮಾರಿ,, ಮಾರಿ ಮಾರಿಗೆ ದಾರಿ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಅಂದಹಾಗೆ ಈ ಸಿನಿಮಾ ಆಗಸ್ಟ್ 25ರಂದು ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ, ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್ ಸೇರಿದಂತೆ ಇನ್ನೂ ಹಲವರು ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಮತ್ತೊಂದು ಮಾಸ್ ಸಿನಿಮಾಗೆ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.