2024 ರ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಸದ್ದಿಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪರೇಷನ್ ಶುರು ಮಾಡಿದ್ದಾರೆ. ಬಿಜೆಪಿಯ ವಿಧಾನಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ಅವರ ನಿವಾಸಕ್ಕೆ ಇಂದು ಬೆಳ್ಳಂಬೆಳಿಗ್ಗೆ ತೆರಳಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸೌಹಾರ್ದಯುತ ಭೇಟಿ ಎಂದು ಮಾತ್ರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದ್ರೆ, ಬೆಳಿಗ್ಗೆ ಉಪಾಹಾರವನ್ನು ಕೆ.ಪಿ. ನಂಜುಂಡಿ ಅವರ ನಿವಾಸದಲ್ಲಿಯೇ ಸೇವಿಸಿ, ಕುಟುಂಬಸ್ಥರ ಜೊತೆಗೆ ಮಾತುಕತೆ ಮಾಡಿದ್ದು, ನಂಜುಂಡಿಗೆ ಡಿಕೆಶಿ ಗಾಳ ಹಾಕುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಈಗಾಗಲೇ ಕಾಂಗ್ರೆಸ್‌ನಿಂದಲೇ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದ ಕೆ.ಪಿ. ನಂಜುಂಡಿ, ತಮಗೆ ಅಲ್ಲಿ ನ್ಯಾಯ ಸಿಗಲಿಲ್ಲ ಎಂದು ಯಡಿಯೂರಪ್ಪರ ನೇತೃತ್ವದಲ್ಲಿ ಬಿಜೆಪಿಗೆ ಬಂದಿದ್ರು. ಸದ್ಯ ಬಿಜೆಪಿಯಲ್ಲೂ ಅವರ ಕಡೆಗಣನೆ ಆಗಿದ್ದು, ಮತ್ತೆ ಘರ್‌ವಾಪ್ಸಿ ಆಗ್ತಾರಾ ಕೆ.ಪಿ. ನಂಜುಂಡಿ ಎಂಬುದನ್ನು ಕಾದು ನೋಡಬೇಕಿದೆ.