• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

SC-ST ಜನರಿಗೆ ಬಜೆಟ್ ನಲ್ಲಿ ನ್ಯಾಯಯುತ ಅನುದಾನ ಒದಗಿಸಿ : ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ

Any Mind by Any Mind
February 28, 2022
in ಕರ್ನಾಟಕ
0
SC-ST ಜನರಿಗೆ ಬಜೆಟ್ ನಲ್ಲಿ ನ್ಯಾಯಯುತ ಅನುದಾನ ಒದಗಿಸಿ : ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ
Share on WhatsAppShare on FacebookShare on Telegram

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddramaiah) ಅವರು ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಅವರಿಗೆ ಬಜೆಟ್ ವಿಚಾರವಾಗಿ ಪತ್ರ ಬರೆದಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (scheduled caste, scheduled tribe) ಜನರಿಗೆ ಬಜೆಟ್ ನಲ್ಲಿ ನ್ಯಾಯಯುತ ಅನುದಾನ ಒದಗಿಸಿಲು ಮನವಿ ಮಾಡಿದ್ದಾರೆ.

ADVERTISEMENT

ಶ್ರೀ ಬಸವರಾಜ ಬೊಮ್ಮಾಯಿ ರವರೆ,

2011 ರ ಜನಗಣತಿಯಂತೆ ಶೇ.24.1 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ನಮ್ಮ ರಾಜ್ಯದಲ್ಲಿದ್ದಾರೆ. ಒಟ್ಟಾರೆ ಜನಸಂಖ್ಯೆಯ ಕಾಲು ಭಾಗದಷ್ಟಿರುವ ಈ ದಮನಿತ ವರ್ಗಗಳ ಕಲ್ಯಾಣಕ್ಕಾಗಿ 2013 ರಲ್ಲಿ ನಮ್ಮ ಸರ್ಕಾರ ಇದ್ದಾಗ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಅಧಿನಿಯಮ-2013 ಅನ್ನು ಜಾರಿಗೆ ತಂದೆವು. ಜನಸಂಖ್ಯೆಗನುಗುಣವಾಗಿ ಅನುದಾನವನ್ನು ಒದಗಿಸಿ, ಅದೇ ವರ್ಷ ಖರ್ಚು ಮಾಡುವ ಶಾಸನಬದ್ಧ ಅನಿವಾರ್ಯತೆಯನ್ನು ಈ ಕಾನೂನಿನ ಮೂಲಕ ರೂಪಿಸಿದೆವು. ಈ ಕಾನೂನನ್ನು ಜಾರಿಗೆ ತಂದದ್ದರ ಪರಿಣಾಮವಾಗಿ ಪರಿಶಿಷ್ಟ ಜಾತಿ, ಪಂಗಡಗಳ ಮಕ್ಕಳಿಗೆ ಉತ್ತಮ ಶಿಕ್ಷಣ, ಯುವಕರಿಗೆ ಉದ್ಯೋಗ, ವಾಸಿಸುವ ಪ್ರದೇಶಗಳಿಗೆ ಮೂಲಭೂತ ಸೌಕರ್ಯ, ಕೃಷಿಕರಿಗೆ ನೆರವು, ಉದ್ಯಮಿಗಳಿಗೆ, ಗುತ್ತಿಗೆದಾರರಿಗೆ ಉತ್ತೇಜನ ಮುಂತಾದ ಯೋಜನೆಗಳು ಸಮರ್ಥವಾಗಿ ಜಾರಿಯಾಗಿದ್ದವು.

ಶಿಕ್ಷಣದ ವಿಚಾರದಲ್ಲಿ ನಮ್ಮ ಸರ್ಕಾರ ಸಾಕಷ್ಟು ಆಸ್ಥೆ ವಹಿಸಿತ್ತು. ನಮ್ಮ ಅವಧಿಯಲ್ಲಿ 2013 ರಿಂದ 2017-18 ರವರೆಗೆ ಸುಮಾರು 1100 ವಸತಿ ಶಾಲೆಗಳನ್ನು ಹಾಗೂ ಹಾಸ್ಟೆಲ್ಗಳನ್ನು ಪ್ರಾರಂಭಿಸಿದೆವು. 2012-13 ರಲ್ಲಿ ವಿದ್ಯಾರ್ಥಿನಿಲಯಗಳಲ್ಲಿ ಕಲಿಯುತ್ತಿದ್ದ ಮಕ್ಕಳ ಊಟದ ವೆಚ್ಚವನ್ನು ತಿಂಗಳಿಗೆ ರೂ.750 ಗಳನ್ನು ನೀಡಲಾಗುತ್ತಿತ್ತು, ಅದನ್ನು ನಾವು ರೂ.1500 ಗಳವರೆಗೆ ಏರಿಸಿದ್ದೆವು. ಇದರಿಂದಾಗಿ 3 ಲಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಕ್ಕಳಿಗೆ ಅನುಕೂಲವಾಯಿತು. ವಿದ್ಯಾರ್ಥಿ ವೇತನವನ್ನು ಕನಿಷ್ಠ ರೂ.400 ಗಳಿಂದ ರೂ.1100 ಗಳವರೆಗೆ ಏರಿಸಿದ್ದೆವು. ವಿಶ್ವವಿದ್ಯಾಲಯಗಳಲ್ಲಿ ಹೊಸ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದ್ದೆವು. ಇದರಿಂದ 10,000 ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಉನ್ನತ ಶಿಕ್ಷಣ ಮಾಡುವ ಈ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ವಾಪಸಾತಿ ಮಾಡುವ ಯೋಜನೆಯನ್ನು ಜಾರಿಗೆ ತಂದಿದ್ದೆವು.

ಮಕ್ಕಳು ಶಿಕ್ಷಣವನ್ನು ಪಡೆದ ನಂತರ ಯುವಜನರಿಗೆ ಉದ್ಯೋಗ ಸಿಗಲಿ ಎಂಬ ಕಾರಣಕ್ಕಾಗಿ 2017 ರ ಬಜೆಟ್ನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ಸ್ಥಾಪಿಸಿ, ರಾಜ್ಯದ 5 ಲಕ್ಷ ಯುವಕ-ಯುವತಿಯರಿಗೆ ತರಬೇತಿಯನ್ನು ಕೊಡಿಸಿದ್ದೆವು. ಇವರಲ್ಲಿ ಒಂದು ಲಕ್ಷ ಜನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಯುವಕ, ಯುವತಿಯರಿದ್ದರು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಎಲ್ಲ ವಿಚಾರಗಳನ್ನು ಕಡೆಗಣಿಸಿದೆ.

2008 ರಿಂದ 2013 ರವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ 10 ಯೋಜನೆಗಳನ್ನು ಜಾರಿಗೆ ತಂದಿತ್ತು. ಅದರಲ್ಲಿ 7 ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಕೇವಲ ರೂ.100 ಗಳಷ್ಟು ವಿದ್ಯಾರ್ಥಿ ವೇತನ ಹೆಚ್ಚಿಸುವ ಉದ್ದೇಶ ಹೊಂದಿದ್ದವು. ಮತ್ತೊಂದು, ಕರಾವಳಿಯ ಕೊರಗ ಜನಾಂಗಕ್ಕಾಗಿ ವಿಶೇಷ ಅಭಿವೃದ್ಧಿ ಕಾರ್ಯಕ್ರಮವನ್ನು 2008-09 ರಲ್ಲಿ ಘೋಷಿಸಲಾಗಿತ್ತು. ಆ ಯೋಜನೆ ಇದುವರೆಗೂ ಜಾರಿಯಾಗಿಲ್ಲ.

ಆದರೆ ನಮ್ಮ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ಈ ವರ್ಗಗಳಿಗಾಗಿ 40 ಕಾರ್ಯಕ್ರಮಗಳನ್ನು ನೀಡಿದ್ದೆವು ಮತ್ತು ಆ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದೆವು.
 
ಆದರೆ 2019 ರಲ್ಲಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕೇವಲ 7 ಕಾರ್ಯಕ್ರಮಗಳನ್ನು ಮಾತ್ರ ಈ ವರ್ಗಗಳ ಜನರಿಗಾಗಿ ರೂಪಿಸಿದೆ. ಈ 7 ಕಾರ್ಯಕ್ರಮಗಳಲ್ಲಿ ಪರಿಶಿಷ್ಟ ಪಂಗಡದ ಆಶ್ರಮ ಶಾಲೆಗಳನ್ನು ವಾಲ್ಮೀಕಿ ಆಶ್ರಮ ಶಾಲೆ ಎಂದು ನಾಮಕರಣ ಮಾಡಿದ್ದೂ ಒಂದು. ಎಲ್ಲ ಜಾತಿಗಳ 30 ಸಂಯುಕ್ತ ಹಾಸ್ಟೆಲ್ಗಳನ್ನು ಸ್ಥಾಪಿಸಲಾಗುವುದೆಂದು 2019 ರಲ್ಲಿ ಘೋಷಣೆ ಮಾಡಿದಿರಿ ಅದು ಈವರೆಗೂ ಅನುಷ್ಠಾನವಾಗಲಿಲ್ಲ. ನಿಮ್ಮ 7 ಕಾರ್ಯಕ್ರಮಗಳಲ್ಲಿ ಅನುಷ್ಠಾನ ಮಾಡಿರುವುದು ಒಂದೇ ಒಂದು ಕಾರ್ಯಕ್ರಮ ಮಾತ್ರ. ಉಳಿದ ಯೋಜನೆಗಳೆಲ್ಲ ಪ್ರಸ್ತಾವನೆಗಳಲ್ಲೆ ಇವೆ ಎಂದು ಸಮಾಜ ಕಲ್ಯಾಣ ಇಲಾಖೆಯೆ ನನಗೆ ಮಾಹಿತಿ ನೀಡಿದೆ.

ನಮ್ಮ ಸರ್ಕಾರದ ಅವಧಿಯಲ್ಲಿ ಭೂ ಒಡೆತನ ಯೋಜನೆಯಡಿ ಒಟ್ಟು 6914 ಎಕರೆ ಭೂಮಿಯನ್ನು ಪ.ವರ್ಗ, ಪ.ಪಂಗಡಗಳÀ ಜನರಿಗಾಗಿ ಖರೀದಿಸಿ ಕೊಟ್ಟಿದ್ದೆವು. ಹಿಂದೆ ಕಾಂಗ್ರೆಸ್ ಸರ್ಕಾರವು ಬಗರ್ ಹುಕುಂ ಯೋಜನೆಯನ್ನು ಆದ್ಯತೆಯ ಕಾರ್ಯಕ್ರಮವಾಗಿ ರೂಪಿಸಿತ್ತು. ಇದರ ಫಲವಾಗಿ 373225 ಎಕರೆ ಭೂಮಿಯನ್ನು 189918 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಮಂಜೂರು ಮಾಡಲಾಗಿತ್ತು. ಈ ಭೂಮಿಗಳೆಲ್ಲಾ ಬಹುಪಾಲು ನೀರಾವರಿ ಸೌಲಭ್ಯ ಇಲ್ಲದ ಭೂಮಿಗಳು. ಈ ಭೂಮಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಪ್ರತಿವರ್ಷ ರೂ.430 ಕೋಟಿಗಳವರೆಗೂ ಅನುದಾನವನ್ನು ನೀಡುತ್ತಿದ್ದೆವು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ 2020-21 ರಲ್ಲಿ ರೂ.100 ಕೋಟಿ, 2021-22 ರಲ್ಲಿ ಕೇವಲ ರೂ.50 ಕೋಟಿಗಳನ್ನು ಮಾತ್ರ ನೀಡಿದೆ. ಕೃಷಿ ಭಾಗ್ಯ ಯೋಜನೆಯಲ್ಲಿ ನಾವು ವರ್ಷಕ್ಕೆ ರೂ.166 ಕೋಟಿವರೆಗೂ ಅನುದಾನವನ್ನು ನೀಡಿದ್ದೆವು. ಆದರೆ ಕಳೆದ ವರ್ಷ ಕೇವಲ ರೂ.11.24 ಕೋಟಿಯನ್ನು ನೀಡಿದ್ದೀರಿ. ಈ ವರ್ಷ ಒಂದು ರೂಪಾಯಿಯನ್ನೂ ನೀಡಿಲ್ಲ. ಎಸ್ಸಿಪಿ ಮತ್ತು ಟಿಎಸ್ಪಿಗೆ ಸಂಬಂಧಿಸಿದಂತೆ 2008 ರಿಂದ 2013 ರವರೆಗೆ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರ 22261 ರೂಪಾಯಿಗಳನ್ನು ಮಾತ್ರ ಖರ್ಚು ಮಾಡಿತ್ತು. ಆದರೆ 2013-14 ರಿಂದ 2017-18 ರ ವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ 88395 ಕೋಟಿ ರೂಗಳನ್ನು ಖರ್ಚು ಮಾಡಿದ್ದೆವು. 2018 ರ ಬಜೆಟ್ನಲ್ಲಿ 29691.6 ಕೋಟಿ ರೂಪಾಯಿಗಳನ್ನು ಈ ಯೋಜನೆಗಾಗಿ ಮೀಸಲಿರಿಸಿದ್ದೆವು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವರ್ಷದಿಂದ ವರ್ಷಕ್ಕೆ ಅನುದಾನ ಕಡಿಮೆಯಾಗುತ್ತಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ವಸತಿ ಯೋಜನೆಗಳಿಗೂ ಈ ಸರ್ಕಾರವು ಅನುದಾನ ಕಡಿಮೆ ಮಾಡಿದೆ. ಸ್ವಯಂ ಉದ್ಯೋಗಕ್ಕಾಗಿ ಕೊಡಬೇಕಾದ ಮಹತ್ವವನ್ನು ಕೊಡುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ನೀಡುವ ಸವಲತ್ತುಗಳನ್ನು ಕಡಿಮೆ ಮಾಡಲಾಗಿದೆ. ವಸತಿ ಶಾಲೆಗಳಲ್ಲಿ, ಆಶ್ರಮ ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ಕಲಿಯುತ್ತಿರುವ ಮಕ್ಕಳ ಭೋಜನ ವೆಚ್ಚವನ್ನು ಬೆಲೆಯೇರಿಕೆಗೆ ಅನುಗುಣವಾಗಿ ಏರಿಕೆ ಮಾಡಿಲ್ಲ. “ವಾಸಿಸುವವರೆ ನೆಲದ ಒಡೆಯ” ಎಂಬ ಯೋಜನೆಯನ್ನು ಜಾರಿಗೆ ತಂದಿದ್ದೆವು. ಮಜರೆ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಯೋಜನೆ ಚಾಲನೆÉ ನೀಡಿದ್ದೆವು. ಬಿಜೆಪಿ ಸರ್ಕಾರ ಬಂದು 3 ವರ್ಷಗಳಾದರೂ ಈ ಯೋಜನೆಗಳು ನಿಂತಲ್ಲೇ ಇವೆ. ಬಗರ್ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಫಾರಂ-57 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಅರ್ಜಿಗಳು ವಿಲೇವಾರಿಯಾಗದೆ ಬಾಕಿಯಾಗಿವೆ.

ಖಾಲಿ ಇರುವ ಸರ್ಕಾರಿ ಉದ್ಯೋಗಗಳನ್ನೂ ಭರ್ತಿ ಮಾಡುತ್ತಿಲ್ಲ, ಬ್ಯಾಕ್ಲಾಗ್ ಹುದ್ದೆಗಳನ್ನೂ ಭರ್ತಿ ಮಾಡುತ್ತಿಲ್ಲ. ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ರಾಜ್ಯ ಸರ್ಕಾರವಷ್ಟೆ ಅಲ್ಲ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವೂ ಯುವ ನಿರುದ್ಯೋಗಿಗಳ ವಿರುದ್ಧವಾದ ನಿಲುವು ತಾಳಿದೆ. ಕೇಂದ್ರ ಸರ್ಕಾರದ 10 ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಯುವಕರನ್ನು ಬ್ಯಾಕ್ಲಾಗ್ ಮೂಲಕ ತುಂಬಬೇಕಾಗಿತ್ತು. ಆದರೆ ಕಳೆದ 7 ವರ್ಷಗಳಲ್ಲಿ ಒಂದೇ ಒಂದು ಹುದ್ದೆಯನ್ನೂ ಭರ್ತಿ ಮಾಡಿಲ್ಲ ಎಂದು ಸಂಸತ್ತಿನ ಸ್ಥಾಯಿ ಸಮಿತಿ ವರದಿ ಸಲ್ಲಿಸಿದೆ. ಸರ್ಕಾರಿ ಕಂಪೆನಿಗಳನ್ನು ಖಾಸಗೀಕರಿಸಲಾಗುತ್ತಿದೆ. ಇದರಿಂದಾಗಿ ಸರ್ಕಾರಿ ಉದ್ಯೋಗಗಳೆಲ್ಲ ಕೈ ಬಿಟ್ಟು ಹೋಗುತ್ತಿವೆ. ಸರ್ಕಾರಿ ಉದ್ಯೋಗಗಳು ಇಲ್ಲವೆಂದರೆ ಮೀಸಲಾತಿಯೂ ಇಲ್ಲವೆಂದು ಅರ್ಥ. ಇದರಿಂದಾಗಿ ವಿದ್ಯಾವಂತ ಯುವಜನರಿಗೆ ಉದ್ಯೋಗಗಳು ಸಿಗುತ್ತಿಲ್ಲ. ಸ್ವಯಂ ಉದ್ಯೋಗ ಮಾಡುವವರಿಗೆ ಆದ್ಯತೆಗಳು ಸಿಗುತ್ತಿಲ್ಲ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳಿಗೆ ಬಿಡುಗಡೆ ಮಾಡುವ ಅನುದಾನ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗೆ ರೂ.5000 ಕೋಟಿಗಳವರೆಗೆ ಅನುದಾನವನ್ನು ಒದಗಿಸುತ್ತಿದ್ದೆವು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2020-21 ರಲ್ಲಿ ರೂ.3119 ಕೋಟಿ ಮತ್ತು 2021-22 ರಲ್ಲಿ ರೂ.3762 ಕೋಟಿಗಳನ್ನು ಮಾತ್ರ ಒದಗಿಸಿದೆ. ಹಾಗೆಯೆ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ರೂ.1650 ಕೋಟಿಗಳವರೆಗೆ ಅನುದಾನವನ್ನು ಒದಗಿಸುತ್ತಿದ್ದೆವು. ಈಗ ರೂ.1350 ಕೋಟಿಗಳಿಗೆ ಇಳಿದಿದೆ.

ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ನಿಗಮ, ಮಂಡಳಿಗಳಿಗೂ ಸಹ ಗಣನೀಯ ಪ್ರಮಾಣದಲ್ಲಿ ಅನುದಾನವನ್ನು ಕಡಿಮೆ ಮಾಡಲಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ನಮ್ಮ ಸರ್ಕಾರ ನೀಡುತ್ತಿದ್ದ ಅನುದಾನದಲ್ಲಿ ಹತ್ತನೇ ಒಂದು ಭಾಗದಷ್ಟು ಅನುದಾನವನ್ನೂ ನೀಡುತ್ತಿಲ್ಲ. ತಾಂಡಾ, ಭೋವಿ, ಆದಿಜಾಂಬವ ಅಭಿವೃದ್ಧಿ ನಿಗಮ, ಡಾ. ಬಾಬು ಜಗಜೀವನ್ ರಾಮ್ ಅಭಿವೃದ್ಧಿ ನಿಗಮ ಮುಂತಾದವುಗಳಿಗೂ ಭಾರಿ ಪ್ರಮಾಣದಲ್ಲಿ ಅನುದಾನವನ್ನು ಕಡಿಮೆ ಮಾಡಲಾಗಿದೆ. ಮತ್ತು ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನವನ್ನು ಇತರೆ ಯೋಜನೆಗಳಿಗೆ ಬಳಸಿಕೊಳ್ಳುವ ಕೆಟ್ಟ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂಬ ದೂರುಗಳು ಬರುತ್ತಿವೆ.

ಕಾಮಗಾರಿಗಳ ಗುತ್ತಿಗೆಗಳಲ್ಲಿ ರೂ.50 ಲಕ್ಷದ ಕಾಮಗಾರಿಗಳಿಗೆ ಮೀಸಲಾತಿಯನ್ನು ಜಾರಿಗೆ ತಂದಿದ್ದೆವು. ಆದರೆ ಬಿಜೆಪಿ ಸರ್ಕಾರ ಕುತಂತ್ರ ಮಾಡಿ ರೂ.2 ಕೋಟಿಗಳವರೆಗೆ ಟೆಂಡರ್ ಕರೆಯದೆ ಕಾಮಗಾರಿ ನಡೆಸುವ ನಿಯಮಗಳನ್ನು ಮಾಡಿಕೊಂಡಿದೆ. ಇದರಿಂದಾಗಿ ಗುತ್ತಿಗೆಗಳಲ್ಲಿ ಈ ವರ್ಗಗಳ ಯುವಕರಿಗೆ ಅವಕಾಶ ಸಿಗುತ್ತಿಲ್ಲ. ಇಂಧನ ಇಲಾಖೆಯಲ್ಲಿ ಈವರೆವಿಗೂ ಗುತ್ತಿಗೆಯಲ್ಲಿ ಮೀಸಲಾತಿಯನ್ನೆ ನೀಡುತ್ತಿಲ್ಲವೆಂದು ಆರೋಪಗಳಿವೆ. ನಮ್ಮ ಸರ್ಕಾರದ ಕಡೆಯ ಬಜೆಟ್ನಲ್ಲಿ ರೂ.50 ಲಕ್ಷಗಳ ಮಿತಿಯನ್ನು ರೂ.1 ಕೋಟಿಗೆ ಏರಿಸುವ ಕುರಿತು ಪ್ರಸ್ತಾಪಿಸಿದ್ದೆವು. ಅದೂ ಸಹ ನೆನೆಗುದಿಗೆ ಬಿದ್ದಿದೆ. ಆದ್ದರಿಂದ ಟೆಂಡರ್ ಕರೆಯದೆ ಕಾಮಗಾರಿಗಳನ್ನು ನಡೆಸುವುದನ್ನು ಮೊದಲು ನಿಲ್ಲಿಸಬೇಕು ಮತ್ತು ಕಾಮಗಾರಿಗಳ ಮೀಸಲಾತಿಯ ಮೊತ್ತವನ್ನು ಕನಿಷ್ಠ ರೂ.2 ಕೋಟಿಗಳವರೆಗೆ ಏರಿಸಬೇಕು.

ಶತಮಾನಗಳಿಂದ ದಮನಕ್ಕೆ ಒಳಗಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಕಲ್ಯಾಣವನ್ನು ಬಿಜೆಪಿ ಸರ್ಕಾರ ಅತ್ಯಂತ ವ್ಯವಸ್ಥಿತವಾಗಿ ತುಳಿದು ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಭಾವನೆ ಜನರಲ್ಲಿ ದಟ್ಟೈಸುತ್ತಿದೆ.

ಸಮಾಜದ ಅಂಚಿನಲ್ಲಿರುವ ಜನರ ಕಲ್ಯಾಣ ಸಾಧ್ಯವಾಗದೆ ಯಾವುದೆ ರಾಜ್ಯವಾಗಲಿ, ಯಾವುದೆ ದೇಶವಾಗಲಿ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಅರ್ಥ ಮಾಡಿಕೊಂಡು ಈ ವರ್ಷದ ಬಜೆಟ್ನಲ್ಲಿ ನ್ಯಾಯಯುತವಾಗಿ ಅನುದಾನಗಳನ್ನು ಒದಗಿಸಬೇಕು ಹಾಗೂ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯೋಗ, ಕೃಷಿ, ವ್ಯಾಪಾರ, ಮೂಲಭೂತ ಸೌಕರ್ಯ ಮುಂತಾದ ಯೋಜನೆಗಳಿಗೆ ನ್ಯಾಯಯುತವಾಗಿ ಅನುದಾನಗಳನ್ನು ಒದಗಿಸಬೇಕು ಹಾಗೂ ಈ ವರ್ಗಗಳಿಗಾಗಿ ಮೀಸಲಿಡುವ ಅನುದಾನವನ್ನು ಇತರೆ ಯಾವುದೆ ಯೋಜನೆಗಳಿಗೆ ಪರಿವರ್ತನೆ ಮಾಡಬಾರದೆಂದು ಆಗ್ರಹಿಸುತ್ತೇನೆ. ದಮನಿತ ವರ್ಗಗಳ ಕಲ್ಯಾಣವನ್ನು ಈ ಬಜೆಟ್ನಲ್ಲಿಯೂ ನಿರ್ಲಕ್ಷಿಸಿದ್ದೆ ಆದರೆ ಸರ್ಕಾರದ ವಿರುದ್ಧ ತೀವ್ರ ಹೋರಾಟವನ್ನು ರೂಪಿಸಬೇಕಾಗುತ್ತದೆಂದು ತಮಗೆ ತಿಳಿಸ ಬಯಸುತ್ತೇನೆ.

Tags: Basavaraj BommaiScheduled Castescheduled tribeSiddramaiah
Previous Post

ಶಿವರಾತ್ರಿ ಸಪ್ತಾಹದಲ್ಲಿ ಪಾಲ್ಗೊಂಡು ಭಜನೆ ಮಾಡಿದ ಶಾಸಕ ರಾಜೀವ್‌

Next Post

Dwarka Declaration | ‘ದ್ವಾರಕಾ ಘೋಷಣೆ’ ಮೂಲಕ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ ಕಾಂಗ್ರೆಸ್

Related Posts

ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು
Top Story

ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು

by ಪ್ರತಿಧ್ವನಿ
November 3, 2025
0

ಗದಗ, ನವೆಂಬರ್‌ ೦೩: ಹೋಟೆಲ್‌ವೊಂದರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಲಕ್ಷಾಂತರ ರೂಪಾಯಿ ಹಣ ಸುಟ್ಟು ಕರಕಲಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ಲಕ್ಷ್ಮೇಶ್ವರ ಪಟ್ಟಣದ...

Read moreDetails
ಬಿಹಾರ- ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ- ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

November 3, 2025
Darshan Case: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್‌ಗೆ ಇಂದು ಬಿಗ್‌ ಡೇ..

Darshan Case: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್‌ಗೆ ಇಂದು ಬಿಗ್‌ ಡೇ..

November 3, 2025
ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

November 2, 2025
ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

November 2, 2025
Next Post
Dwarka Declaration | ‘ದ್ವಾರಕಾ ಘೋಷಣೆ’ ಮೂಲಕ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ ಕಾಂಗ್ರೆಸ್

Dwarka Declaration | 'ದ್ವಾರಕಾ ಘೋಷಣೆ' ಮೂಲಕ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ ಕಾಂಗ್ರೆಸ್

Please login to join discussion

Recent News

ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ʼಮಾರ್ಕ್ʼ ವೀಕೆಂಡ್‌ ಕಿಕ್‌..!
Top Story

ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ʼಮಾರ್ಕ್ʼ ವೀಕೆಂಡ್‌ ಕಿಕ್‌..!

by ಪ್ರತಿಧ್ವನಿ
November 3, 2025
ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು
Top Story

ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು

by ಪ್ರತಿಧ್ವನಿ
November 3, 2025
ICC Women’s World Cup: ಇತಿಹಾಸ ನಿರ್ಮಿಸಿದ ಭಾರತೀಯ ಸಿಂಹಿಣಿಯರು
Top Story

ICC Women’s World Cup: ಇತಿಹಾಸ ನಿರ್ಮಿಸಿದ ಭಾರತೀಯ ಸಿಂಹಿಣಿಯರು

by ಪ್ರತಿಧ್ವನಿ
November 3, 2025
Top Story

by ಪ್ರತಿಧ್ವನಿ
November 3, 2025
Darshan Case: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್‌ಗೆ ಇಂದು ಬಿಗ್‌ ಡೇ..
Top Story

Darshan Case: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್‌ಗೆ ಇಂದು ಬಿಗ್‌ ಡೇ..

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ʼಮಾರ್ಕ್ʼ ವೀಕೆಂಡ್‌ ಕಿಕ್‌..!

ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ʼಮಾರ್ಕ್ʼ ವೀಕೆಂಡ್‌ ಕಿಕ್‌..!

November 3, 2025
ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು

ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada