ಪವನ್ ಶೆರಾವತ್ ನೇತೃತ್ವದ ಬೆಂಗಳೂರು ಬುಲ್ಸ್ ತಂಡ 8ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ನಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾದರೂ ಕಳೆದ ಕೆಲ ಪಂದ್ಯಗಳಲ್ಲಿ ಸೋಲಿನ ನೇಲೆ ಸೋಲು ಕಂಡಿದೆ. ಹಾಗಾಗಿ, ಇಂದಿನ ಪಂದ್ಯ ಬೆಂಗಳೂರು ಬುಲ್ಸ್ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆದ್ದರೆ ಪ್ಲೇ-ಆಫ್ ಗೇರುವ ಆಸೆ ಜೀವಂತವಾಗಿರಲಿದೆ.
8ನೇ ಆವೃತ್ತಿ ಕಬಡ್ಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್ ತಂಡ ಇಲ್ಲಿಯವರೆಗೆ 19 ಪಂದ್ಯಗಳನ್ನಾಡಿದ್ದು, ಈ ಪೈಕಿ 9 ಪಂದ್ಯಗಳಲ್ಲಿ ಗೆಲುವು ಕಂಡಿದೆ, 8 ಪಂದ್ಯಗಳಲ್ಲಿ ಸೋಲು ಹಾಗೂ ಎರಡು ಪಂದ್ಯಗಳಲ್ಲಿ ಡ್ರಾಗಳೊಂದಿಗೆ ಒಟ್ಟು 55 ಪಾಯಿಂಟ್ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಇಂದಿನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ, ಜೈಪುರ್ ಪಿಂಕ್ ಫ್ಯಾಂಥರ್ಸ್ ತಂಡ ಮುಖಾಮುಖಿಯಾಗಲಿವೆ. ಗೆದ್ದರಷ್ಟೇ ಪ್ಲೇ ಆಪ್ ಇಲ್ಲ ಸೀದಾ ಬೆಂಗಳೂರಿನತ್ತ ಮುಖ ಮಾಡಬೇಕಿದೆ.