2023ರ ಕರ್ನಾಟಕ ವಿಧಾನಸಭಾ ಚುನಾವಣೆ ಇದೇ ಮೇ 10ರಂದು ನಡೆಯಲಿದೆ. ರಾಜ್ಯದಲ್ಲಂತೂ ಚುನಾವಣೆಯ ರಣಕಹಳೆ ಮೊಳಗಿದ್ದು, ಈಗಾಗಲೇ ಪಕ್ಷದ ನಾಯಕರು, ಮುಖಂಡರು ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಬಿಜೆಪಿ ಪರ ಮತಯಾಚಿಸಲು ಮತ್ತೆ ಪ್ರಧಾನಿ ನರೇಂದ್ರ ಮೋದಿ ಸಿಲಿಕಾನ್ ಸಿಟಿಗೆ ಭೇಟಿ ನೀಡಲಿದ್ದಾರೆ. ಹೌದು.. ಇದೇ ಮೇ 6ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು, ಮೆಗಾ ರೋಡ್ ಶೋ ನಡೆಸಲಿದ್ದಾರೆ. ಮೇ 6ರಂದು ಬೆಳಗ್ಗೆ ಮತ್ತು ಸಂಜೆ ರೋಡ್ ಶೋ ನಡೆಸಲು ಬಿಜೆಪಿ ಪ್ಲ್ಯಾನ್ ಮಾಡಿದೆ ಎನ್ನಲಾಗ್ತಿದೆ. ಅಂದು ಬೆಳಗ್ಗೆ 8 ಕಿ.ಮೀ. ಮತ್ತು ಸಂಜೆ 28 ಕಿ.ಮೀ. ರೋಡ್ಶೋ ನಡೆಯಲಿದೆ.
![](https://pratidhvani.com/wp-content/uploads/2023/05/pm-modi-interacts-with-agniveers-1024x768.webp)
ಬೆಂಗಳೂರು ವ್ಯಾಪ್ತಿಯ ಒಟ್ಟು 23 ಕ್ಷೇತ್ರಗಳಲ್ಲಿ ನಡೆಯುವ ಈ ರೋಡ್ಶೋ ಮೂಲಕ ಬೆಂಗಳೂರು ನಗರ ವ್ಯಾಪ್ತಿಯ ಬಿಜೆಪಿ ಅಭ್ಯರ್ಥಿಗಳ ಪರ ಮೋದಿ ಮತಬೇಟೆ ನಡೆಸಲಿದ್ದಾರೆ. ಮೇ 6ರ ಬೆಳಗ್ಗೆ ಸಿ.ವಿ.ರಾಮನ್ನಗರದಿಂದ ಆರಂಭವಾಗಲಿರುವ ರೋಡ್ ಶೋ ಬ್ರಿಗೇಡ್ ರಸ್ತೆವರೆಗೆ ಸಾಗಲಿದೆ. ಸಂಜೆ ರೋಡ್ ಶೋ ಕೋಣನಕುಂಟೆಯಿಂದ ಆರಂಭವಾಗಿ ಸರ್ಕಲ್ ಮಾರಮ್ಮ ದೇವಸ್ಥಾನದವರೆಗೆ ಅಂತ್ಯವಾಗುವ ಸಾಧ್ಯತೆ ಇದೆ. ಸಂಜೆ ರೋಡ್ ಶೋ ಕೋಣನಕುಂಟೆಯಿಂದ ಆರಂಭವಾಗಿ ಜಯನಗರ, ಗಾಂಧಿ ಬಜಾರ್, ಶಾಂತಿನಗರ, ಬಿನ್ನಿಮಿಲ್, ಮಾಗಡಿ ರಸ್ತೆ, ಟೋಲ್ಗೇಟ್, ದಾಸರಹಳ್ಳಿ, ಹೌಸಿಂಗ್ ಬೋರ್ಡ್, ಬಸವೇಶ್ವರ ನಗರ, ನವರಂಗ್, ಮಲ್ಲೇಶ್ವರ, ಸಂಪಿಗೆ ರಸ್ತೆ ಮಾರ್ಗವಾಗಿ ಸರ್ಕಲ್ ಮಾರಮ್ಮ ದೇವಸ್ಥಾನದವರೆಗೆ ರೋಡ್ಶೋ ನಡೆಯಲಿದೆ.
![](https://pratidhvani.com/wp-content/uploads/2023/05/97017981-1024x576.jpg)
![](https://pratidhvani.com/wp-content/uploads/2023/05/48f35854-65b1-4c4e-8c2d-9e4348c5debb-5-1024x143.jpg)