ವಕ್ಸ್ ಬೋರ್ಡ್ (Waqf board) ಆಟಾಟೋಪದ ಬಗ್ಗೆ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ (Prathap simha) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ (Mysuru) ಹುಣಸೂರಿನಲ್ಲಿ ಗಣೇಶ ದೇವಾಲಯದ 17 ಏಕರೆ ನಮ್ಮದ್ದು ಅಂತಾ ವಕ್ಸ್ ಬೋರ್ಡ್ ಕೂತಿದೆ ಎಂದು ಕಿಡಿಕಾರಿದ್ದಾರೆ.

ಈ ರೀತಿ ಆಗ್ರಹಿಸಲು ಪ್ರತ್ಯೇಕ ಆಸ್ತಿ ಮುಸ್ಲಿಂರಿಗೆ ಎಲ್ಲಿಂದ ಬಂತು ಅಂತಾ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ರು. ಈ ಬಗ್ಗೆ ಮೈಸೂರಲ್ಲಿ ಮಾತನಾಡಿದ ಅವರು ಚಿಕ್ಕಮಗಳೂರು (Chikkamagalur) ಇದೇ ಕಥೆ ಆಗಿದೆ ಎಂದರು.ವಕ್ಸ್ ಬೋರ್ಡ್ ಜಮೀನಿನಲ್ಲಿ ಮುಸ್ಲಿಂ ರಿಗೆ ಉಳುಮೆ ಮಾಡಲು ಅವಕಾಶ ಕೊಟ್ಟಿದ್ದಿರಾ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಹಿಂದೂ ಧರ್ಮದ (Hindu relegion) ಮಠಗಳಲ್ಲಿ ಅನ್ನದಾನ ಮಾಡುವಂತೆ ಎಲ್ಲಯಾದ್ರೂ,ಯಾವತ್ತಾದರೂ ಮಸೀದಿ (Masjid) ಅಥವಾ ಚರ್ಚ್ (Church) ಗಳಲ್ಲಿ ಹಿಡಿ ಅನ್ನ ಯಾರಿಗಾದ್ರೂ ದಾನ ಮಾಡಿದ್ದೀರಾ..? ಸಿಎಂ ಗೆ ಕಷ್ಟ ಬಂದಾಗ ಅವರ ಸಹಾಯಕ್ಕೆ ಬರುವುದು ನಮ್ಮ ಹಿಂದೂ ಧರ್ಮದ ದೇವಾನುದೇವತೆಗಳೆ ಹೊರತು ಬೇರೆ ಧರ್ಮದವರಲ್ಲ ಎಂದು ಹೇಳಿದ್ದಾರೆ.





