ಲೆಕ್ಸ್ ಫ್ರೀಡ್ ಮ್ಯಾನ್ (Lex fridman) ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ (Podcast) ಪ್ರಧಾನಿ ನರೇಂದ್ರ ಮೋದಿ (Pm modi) ಶತ್ರು ರಾಷ್ಟ್ರ ಪಾಕಿಸ್ತಾನದ (Pakistan) ವಿರುದ್ಧ ಕಠಿಣ ಪದಗಳ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ.ಪಾಕಿಸ್ತಾನ ಒಂದು ಟೆರರ್ ಹಬ್ (Terror hub) ಆಗಿದೆ ಎಂದು ನಮೋ ವ್ಯಾಖ್ಯಾನಿಸಿದ್ದಾರೆ.

ನಾವು..ಅಂದ್ರೆ ಭಾರತ ಪಾಕಿಸ್ತಾನದ ಜೊತೆಗೆ ಶಾಂತಿ ಬಯಸಿದ್ದೆವು.ಆದ್ರೆ ಪಾಕಿಸ್ತಾನದ ಉಗ್ರಗಾಮಿ ಮನಸ್ಥಿತಿ ಅಶಾಂತಿಗೆ ಕಾರಣವಾಗಿದೆ. ಈಗ ವಿಶ್ವದಲ್ಲಿ ಎಲ್ಲೇ ಭಯೋತ್ಪಾದಕ ದಾಳಿ ನಡೆದಿರಲಿ, ಅದರ ಜಾಡು ಹಿಡಿದು ಹೊರಟರೆ ಪಾಕಿಸ್ತಾನದ ಪಾತ್ರ ಕಾಣುತ್ತದೆ ಎಂದಿದ್ದಾರೆ.
WTC ಮೇಲಿನ ಸೆಪ್ಟೆಂಬರ್ 11ರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು ಒಸಾಮ ಬಿನ್ ಲಾಡನ್. ಆತ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ. ಭಯೋತ್ಪಾದನೆ ಮತ್ತು ಭಯೋತ್ಪಾದಕ ಮನೋಭಾವ ಪಾಕಿಸ್ತಾನದಲ್ಲಿ ಆಳವಾಗಿ ಬೇರು ಬಿಟ್ಟಿರುವುದನ್ನು ಇಡೀ ಜಗತ್ತು ಒಪ್ಪಿಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಪಾಕ್ ವಿರುದ್ಧ ಕಿಡಿಕಾರಿದ್ದಾರೆ.












