ನವದೆಹಲಿ : ಇರಾನ್‌ನಿಂದ ದಾಳಿಗೊಳಗಾದ ಗಲ್ಫ್ ರಾಷ್ಟ್ರಗಳ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಸಂಭಾಷಣೆಯ ಮೂಲಕ ಭಾರತದ ಬೆಂಬಲವನ್ನು ತಿಳಿಸಿದ್ದಾರೆ. ಕುವೈತ್, ಕತಾರ್, ಒಮಾನ್, ಸೇರಿದಂತೆ ಹಲವು ದೇಶಗಳ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದಾರೆ.

ಭಾರತವು ಕುವೈತ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗಿರುವುದನ್ನು ಖಂಡಿಸುತ್ತದೆ.ಅಲ್ಲದೆ ಈ ಕಷ್ಟದ ಸಮಯದಲ್ಲಿ ನಿಮ್ಮ ಜನರೊಂದಿಗೆ ನಿಲ್ಲುತ್ತದೆ ಎಂದು ಮೋದಿ ಕುವೈತ್‌ನ ಕ್ರೌನ್ ಪ್ರಿನ್ಸ್ ಎಚ್.ಎಚ್. ಶೇಖ್ ಸಬಾಹ್ ಅಲ್-ಖಾಲೀದ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾಹ್ ಅವರಿಗೆ ತಿಳಿಸಿದ್ದಾರೆ.
ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವಲ್ಲಿ ಹಾಗೂ ರಾಜತಾಂತ್ರಿಕತೆಯ ಮಹತ್ವವನ್ನು ನಾವು ಒತ್ತಿಹೇಳಿದ್ದೇವೆ. ಕುವೈತ್‌ನಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಅವರ ಯೋಗಕ್ಷೇಮದ ವಿಚಾರದಲ್ಲಿ ಕುವೈತ್ ನಾಯಕತ್ವ ಭಾರತೀಯರಿಗೆ ನೀಡಿರುವ ಬೆಂಬಲವನ್ನು ಮೋದಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ: ನಂತರ ಆದದ್ದೇನು ?
ಇನ್ನೂ ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಒಮಾನ್‌ನ ಸಾರ್ವಭೌಮತ್ವ ಮತ್ತು ಇರಾನ್ ದಾಳಿಯನ್ನು ಮೋದಿ ಖಂಡಿಸಿದ್ದಾರೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಆರಂಭಿಕ ಪುನಃಸ್ಥಾಪನೆಗೆ ನಿರಂತರ ರಾಜತಾಂತ್ರಿಕ ನಿಲುವು ಅತ್ಯಗತ್ಯ ಎಂದು ಪರಸ್ಪರ ಒಪ್ಪಿಕೊಂಡಿದ್ದೇವೆ. ಒಮಾನ್‌ನಲ್ಲಿರುವ ಭಾರತೀಯರಿಗೆ ಅಲ್ಲಿನ ಸುಲ್ತಾನ ಹೈಥಮ್ ಬಿನ್ ತಾರಿಕ್ ಆಡಳಿತ ನೀಡುತ್ತಿರುವ ಸಹಕಾರವನ್ನು ಪ್ರಧಾನಿ ಮೋದಿ ಸ್ಮರಿಸುವ ಮೂಲಕ ಧನ್ಯವಾದಗಳನ್ನು ಹೇಳಿದ್ದಾರೆ.

ಓಮನ್ ಸುಲ್ತಾನರ ಸಾರ್ವಭೌಮತ್ವ ಮತ್ತು ಅದರ ಪ್ರದೇಶಗಳ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ. ಪ್ರಾದೇಶಿಕವಾಗಿ ಶಾಂತಿ ನೆಲೆಸಬೇಕು, ಹಾಗೂ ಮೂಲ ಸ್ಥಿತಿಯನ್ನು ಪುನಃಸ್ಥಾಪಿಸಲು ರಾಜತಾಂತ್ರಿಕ ಮಾತುಕತೆಗಳು ಬಹಳಷ್ಟು ಮುಖ್ಯವಾಗಿವೆ ಎಂದು ನಾವಿಬ್ಬರೂ ಅರಿತಿದ್ದೇವೆ. ಹೀಗಾಗಿ ಅಲ್ಲಿನ ಭಾರತೀಯ ಸಮುದಾಯಕ್ಕೆ ಓಮನ್ ಸುಲ್ತಾನರು ನೀಡುತ್ತಿರುವ ನಿರಂತರ ಬೆಂಬಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತುಂಬು ಹೃದಯದ ಕೃತಜ್ಞತೆಗಳನ್ನು ತಿಳಿಸಿದ್ದಾರೆ.
ನಾವು ಕತಾರ್‌ನೊಂದಿಗೆ ಒಗ್ಗಟ್ಟಿನ ಜೊತೆಯಾಗಿ ಗಟ್ಟಿ ನಿಲುವನ್ನು ಹೊಂದಿದ್ದೇವೆ. ದೇಶದ ಸಮಗ್ರತೆ ಹಾಗೂ ಆ ಪ್ರದೇಶಗಳ ಏಕತೆಯ ಮೇಲಿನ ದಾಳಿಯನ್ನು ಭಾರತ ವಿರೋಧಿಸುತ್ತದೆ. ಮಾತುಕತೆ ಹಾಗೂ ರಾಜತಾಂತ್ರಿಕತೆಯ ಪ್ರಕ್ರಿಯೆಗಳ ಮೂಲಕ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ತುರ್ತು ಅಗತ್ಯವನ್ನು ನಾನು ನನ್ನ ಸಹೋದರ ಕತಾರ್ ರಾಜ್ಯದ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರಿಗೆ ಒತ್ತಿ ಹೇಳಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಈ ಕಠಿಣ ಸಂದರ್ಭಗಳಲ್ಲಿ ಕತಾರ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ಅಲ್ಲಿನ ಆಡಳಿತ ನೀಡುತ್ತಿರುವ ಸಹಾಯ ಹಾಗೂ ಬೆಂಬಲಕ್ಕೆ ಭಾರತೀಯರ ಪರವಾಗಿ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಹೀಗೆ ಇರಾನ್‌ನಿಂದ ದಾಳಿಗೆ ಸಿಲುಕಿರುವ ಕೊಲ್ಲಿ ರಾಷ್ಟ್ರಗಳ ಮುಖ್ಯಸ್ಥರು ಹಾಗೂ ರಾಜರೊಂದಿಗೆ ಮಾತನಾಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಮೂಲಕ ಮೋದಿ ಭಾರತದ ರಾಜತಾಂತ್ರಿಕತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.






