• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, November 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರಶ್ನೆ ಪತ್ರಿಕೆ ಸೋರಿಕೆಗೆ ಶಾಶ್ವತ ಬ್ರೇಕ್‌? ಮೋದಿ ಸರ್ಕಾರದ ಹೊಸ ಕಾನೂನಿಗೆ ತೇಜಸ್ವಿ ಸೂರ್ಯ ಹೇಳಿದ್ದೇನು

ಪ್ರತಿಧ್ವನಿ by ಪ್ರತಿಧ್ವನಿ
July 29, 2026
in Top Story
0
ಪ್ರಶ್ನೆ ಪತ್ರಿಕೆ ಸೋರಿಕೆಗೆ ಶಾಶ್ವತ ಬ್ರೇಕ್‌? ಮೋದಿ ಸರ್ಕಾರದ ಹೊಸ ಕಾನೂನಿಗೆ ತೇಜಸ್ವಿ ಸೂರ್ಯ ಹೇಳಿದ್ದೇನು
Share on WhatsAppShare on FacebookShare on Telegram

ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪರೀಕ್ಷಾ ವ್ಯವಸ್ಥೆಯನ್ನು ಪಾರದರ್ಶಕ ಹಾಗೂ ವಿಶ್ವಾಸಾರ್ಹವಾಗಿಸಲು ಬದ್ಧವಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ADVERTISEMENT

 

ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆ) ತಿದ್ದುಪಡಿ ಮಸೂದೆ–2026 ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಹಿಂದಿನ ಸರ್ಕಾರಗಳ ವೈಫಲ್ಯದ ಬಗ್ಗೆ ಆಸಕ್ತಿ ಇಲ್ಲ. ಭವಿಷ್ಯದಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಯಾರು ಸುಧಾರಿಸುತ್ತಾರೆ ಎಂಬುದೇ ಅವರ ಪ್ರಮುಖ ಚಿಂತೆಯಾಗಿದೆ ಎಂದು ಹೇಳಿದರು.

Tejasvi Surya : ಕರ್ನಾಟಕ ಪ್ರಶ್ನೆ ಪತ್ರಿಕೆ ಸೋರಿಕೆ ಉಲ್ಲೇಖಿಸಿ ವಾಗ್ದಾಳಿ ನಡೆಸಿ ಬಿಜೆಪಿ ಸಂಸದ..! #pratidhvani

“ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಪರೀಕ್ಷಾ ವ್ಯವಸ್ಥೆಯಲ್ಲಿ ಶಾಶ್ವತ ಸುಧಾರಣೆಗಳನ್ನು ತರಲು ಬದ್ಧವಾಗಿದೆ ಎಂಬ ವಿಶ್ವಾಸ ಯುವಜನತೆಯಲ್ಲಿದೆ,” ಎಂದು ತೇಜಸ್ವಿ ಸೂರ್ಯ ಹೇಳಿದರು.

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯುವಜನತೆ ಪ್ರತಿಪಕ್ಷಗಳ ಬೆಂಬಲದಲ್ಲಿದೆ ಎಂದು ಭಾವಿಸುವುದು ದೊಡ್ಡ ಭ್ರಮೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2010ರಲ್ಲೇ ಇಂತಹ ಕಾನೂನು ತರದ ಕಾರಣ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು.

Anti Question Paper Bill Discussion In Parliament: ಕೇಂದ್ರದ ಶಿಕ್ಷಣ ಸಮಿತಿ ಬಗ್ಗೆ ಮಾತನಾಡುತ್ತಾ ಹಾಸ್ಯ

“ವಿದ್ಯಾರ್ಥಿಗಳಿಗೆ ರಾಜಕೀಯ ಘೋಷಣೆಗಳು ಬೇಡ, ನ್ಯಾಯಯುತ ಪರಿಹಾರ ಬೇಕು. ಈ ಮಸೂದೆ ಅದಕ್ಕೆ ಉತ್ತರ ನೀಡಲಿದೆ. ಸುಮಾರು ಮೂರು ದಶಕಗಳ ಬಳಿಕ ದೇಶದಲ್ಲಿ ಮೊದಲ ಬಾರಿಗೆ ಪರೀಕ್ಷಾ ಅಕ್ರಮಗಳನ್ನು ತಡೆಯುವ ಸಮಗ್ರ ಕಾನೂನು ಜಾರಿಯಾಗುತ್ತಿದೆ,” ಎಂದು ಅವರು ಹೇಳಿದರು.ಈ ವೇಳೆ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ಕೂಡ ಮಾತನಾಡಿ, ಪರೀಕ್ಷಾ ಅಕ್ರಮಗಳ ವಿರುದ್ಧ ಕಾನೂನುಬದ್ಧ ಪರಿಹಾರವನ್ನು ಮೋದಿ ಸರ್ಕಾರ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟರು.

 

ಇತ್ತೀಚೆಗೆ ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಬಳಿಕ ಕೇಂದ್ರ ಸರ್ಕಾರ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ಮಸೂದೆಯ ಪ್ರಕಾರ, ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ, ₹10 ಕೋಟಿವರೆಗೆ ದಂಡ, ಆಸ್ತಿ ಜಪ್ತಿ ಹಾಗೂ ಮೂರು ತಿಂಗಳೊಳಗೆ ಪ್ರಕರಣದ ತೀರ್ಪು ನೀಡುವಂತಹ ಕಠಿಣ ನಿಯಮಗಳನ್ನು ಒಳಗೊಂಡಿದೆ.”ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಜಾತಿ, ಕುಟುಂಬದ ಹಿನ್ನೆಲೆ ಅಥವಾ ಆರ್ಥಿಕ ಸ್ಥಿತಿ ಅಲ್ಲ, ಪ್ರತಿಭೆ ಮತ್ತು ಪರಿಶ್ರಮವೇ ಮುಖ್ಯ. ಪ್ರಶ್ನೆ ಪತ್ರಿಕೆ ಸೋರಿಕೆ ಎನ್ನುವುದು ಕೇವಲ ಆಡಳಿತ ವೈಫಲ್ಯವಲ್ಲ, ಅದು ಲಕ್ಷಾಂತರ ವಿದ್ಯಾರ್ಥಿಗಳ ನಂಬಿಕೆಗೆ ಮಾಡುವ ದೊಡ್ಡ ಅನ್ಯಾಯ,” ಎಂದು ತೇಜಸ್ವಿ ಸೂರ್ಯ ಹೇಳಿದರು.

Tags: Bansuri SwarajBJPBreaking NewsCompetitive Examseducation newseducation policyExam Paper LeakExam Reformsindia newslatest newsLok SabhaNarendra Modi governmentNEET Paper LeakParliamentPM Narendra ModiPublic Examinations ActPublic Examinations Bill 2026Question Paper LeakStudent NewsTejasvi Surya
Previous Post

ಸ್ವ-ವಿಮರ್ಶೆಯ ಹಾದಿಯಲ್ಲಿ ಸಣ್ಣ ಬೆಳಕಿಂಡಿ-ಭಾಗ 2

Next Post

ಪ್ರವಾಸಿಗರಿಗೆ ಗುಡ್ ನ್ಯೂಸ್..! ಕರ್ನಾಟಕದಲ್ಲಿ ಹೊಸ ವಸತಿ ನೀತಿ ಜಾರಿ..!

Related Posts

Possibility of another change to the 60-day advance railway ticket booking rule? Here are the full details.
Top Story

60 ದಿನಗಳ ಮುಂಗಡ ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲಿ ಮತ್ತೆ ಬದಲಾವಣೆ ಸಾಧ್ಯತೆ? ಇಲ್ಲಿದೆ ಸಂಪೂರ್ಣ ಮಾಹಿತಿ

by Shivakumar
November 15, 2026
0

ನವದೆಹಲಿ :  ಭಾರತೀಯ ರೈಲ್ವೆಯು (Indian Railways) ಪ್ರಸ್ತುತ ಇರುವ 60 ದಿನಗಳ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ (Booking) ನಿಯಮವನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಇದರಲ್ಲಿ ಮತ್ತಷ್ಟು ಬದಲಾವಣೆ...

Read moreDetails
RashiPhala

ಇಂದಿನ ರಾಶಿಭವಿಷ್ಯ: ನವೆಂಬರ್ 15ರಂದು ಈ ರಾಶಿಯವರಿಗೆ ಹೊಸ ಅವಕಾಶಗಳ ಸುರಿಮಳೆ! ಪ್ರೀತಿ, ಉದ್ಯೋಗದಲ್ಲಿ ಮಹತ್ವದ ಬದಲಾವಣೆ

November 15, 2026
Competition in politics, cooperation in development: CM DK Shivakumar's statement regarding his discussion with PM Modi

ರಾಜಕಾರಣದಲ್ಲಿ ಪೈಪೋಟಿ, ಅಭಿವೃದ್ಧಿಯಲ್ಲಿ ಸಹಕಾರ: ಪ್ರಧಾನಿ ಮೋದಿ ಜೊತೆಗಿನ ಮಾತುಕತೆ ಬಗ್ಗೆ ಸಿಎಂ ಡಿಕೆಶಿ ಹೇಳಿಕೆ

November 14, 2026
Be Careful When Shopping Online: Here Are 8 Tactics Used to Deceive Consumers; Know About Them Before You Buy

ಆನ್‌ಲೈನ್ ಶಾಪಿಂಗ್ ಮಾಡುವಾಗ ಎಚ್ಚರ : ಗ್ರಾಹಕರನ್ನು ವಂಚಿಸುವ 8 ತಂತ್ರಗಳಿವು; ಖರೀದಿಗೂ ಮುನ್ನ ತಿಳಿದುಕೊಳ್ಳಿ

November 14, 2026
Microsoft services resume: Outlook and Teams available after a 36-hour global disruption

ಮೈಕ್ರೋಸಾಫ್ಟ್ ಸೇವೆಗಳು ಪುನರಾರಂಭ: 36 ಗಂಟೆಗಳ ಜಾಗತಿಕ ವ್ಯತ್ಯಯದ ಬಳಿಕ ಔಟ್‌ಲುಕ್ ಮತ್ತು ಟೀಮ್ಸ್ ಲಭ್ಯ

November 14, 2026
Next Post
ಪ್ರವಾಸಿಗರಿಗೆ ಗುಡ್ ನ್ಯೂಸ್..! ಕರ್ನಾಟಕದಲ್ಲಿ ಹೊಸ ವಸತಿ ನೀತಿ ಜಾರಿ..!

ಪ್ರವಾಸಿಗರಿಗೆ ಗುಡ್ ನ್ಯೂಸ್..! ಕರ್ನಾಟಕದಲ್ಲಿ ಹೊಸ ವಸತಿ ನೀತಿ ಜಾರಿ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada