ಕಾಂಗ್ರೆಸ್(congress) ನವರು ಮೀಸಲಾತಿ ಪಡೆಯುವವರನ್ನು ಭಿಕ್ಷುಕರು ಎನ್ನುತ್ತಾರೆ. ಎಸ್ಸಿ, ಎಸ್ಟಿ, ಒಬಿಸಿ,(SC, ST, OBC) ಲಿಂಗಾಯತರು ಭಿಕ್ಷುಕರಾ? ಕಾಂಗ್ರೆಸ್ ನವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಇಂದು ಸಿರಗುಪ್ಪದಲ್ಲಿ ಬಿಜೆಪಿ ಅಭ್ಯರ್ಥಿ(BJP candidate) ಎಂ.ಎಸ್. ಸೋಮಲಿಂಗಪ್ಪ ಪರ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದ ಅವರು, ʻಸೋಮಲಿಂಗಪ್ಪ(somalingappa) ಅವರು ಈ ಕ್ಷೇತ್ರ ಅಭಿವೃದ್ಧಿಯನ್ನು ವೇಗವಾಗಿ ಮಾಡಿದ್ದಾರೆ. ಅವರ ಕೆಲಸ ನೋಡಿದರೆ ಅವರಂತೆ ನಾನೂ ಅಭಿವೃದ್ಧಿ ಮಾಡಬೇಕೆಂದುಕೊಂಡಿದ್ದೇನೆ. ಕಾಲೇಜು, ಕನದಾಸರ ಭವನ ಎಲ್ಲ ಅಭಿವೃದ್ಧಿ ಮಾಡಿದ್ದಾರೆ. ಅವರು ಇಷ್ಟೆಲ್ಲ ಅಭಿವೃದ್ಧಿ ಮಾಡಲು ಬಿಜೆಪಿ ಸರ್ಕಾರ(BJP government) ಕಾರಣ. ನಮ್ಮ ಡಬಲ್ ಎಂಜಿನ್ ಸರ್ಕಾರ ಪ್ರಧಾನಿ ಮೋದಿ ನಾಯಕತ್ವದಲ್ಲಿ 54 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ದೊರೆತಿದೆ. ಒಂದೂವರೆ ಕೋಟಿ ಜನರಿಗೆ ಆಯುಷ್ಮಾನ್ ಕಾರ್ಡ್ ಲಾಭ ದೊರೆತಿದೆ. 13 ಲಕ್ಷ ಮನೆಗಳ ನಿರ್ಮಾಣ ಮಾಡಲಾಗಿದೆ.

ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ನಾನು ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಜಾರಿಗೆ ತಂದು ರೈತರ ಮಕ್ಕಳಿಗೆ ಕೂಲಿಕಾರರ ಮಕ್ಕಳಿಗೆ ಅನೂಕೂಲ ಕಲ್ಪಿಸಲಾಗಿದೆ. ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ, ಯುವಕರಿಗೆ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಾಂಗ್ರೆಸ್ ನವರು ದೀನ ದಲಿತರನ್ನು ಬಾವಿಯಲ್ಲಿ ಇಟ್ಟು ಚುನಾವಣೆ(election) ಸಂದರ್ಭದಲ್ಲಿ ಮತ ಹಾಕಿಸಿಕೊಂಡು ಮತ್ತೆ ಬಾವಿಯಲ್ಲಿ ಇಡುತ್ತಿದ್ದರು. ನಾವು ಮೀಸಲಾತಿ ಹೆಚ್ಚಳ ಮಾಡಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೇನೆ. ನನಗೆ ಇದಕ್ಕೆ ಬುದ್ದ, ಬಸವಣ್ಣ, ವಾಲ್ಮೀಕಿ, ಕನಕದಾಸರು ಪ್ರೇರಣೆ. ನಮ್ಮ ನೆಚ್ಚಿನ ನಾಯಕ ನರೇಂದ್ರ ಮೋದಿ(narendra modi) ಪ್ರೇರಣೆಯಾಗಿದ್ದಾರೆ. ಕಾಂಗ್ರೆಸ್ ನವರು ನಮ್ಮ ಶಕ್ತಿಯನ್ನು ತಾಕತ್ ಇದ್ದರೆ ತಡೆಯಲಿ ಅಂತ ಸಿಎಂ ಬಸವರಾಜ ಬೊಮ್ಮಾಯಿ(basavaraj bommai) ಸವಾಲು ಹಾಕಿದ್ರು.