ರೇಣುಕಾ ಸ್ವಾಮಿ (Renuka swamy) ಕೊಲೆ ನಡೆದ ಪಟ್ಟಣಗೆರೆ ಶೆಡ್ನಲ್ಲಿ ಎಫ್ಎಸ್ಎಲ್ (FSL) ತನಿಖೆ ವೇಳೆ ಸ್ಥಳದಲ್ಲಿ ಬೇರೆಯವರ ಬ್ಲೆಡ್ ಮಾರ್ಕ್ಗಳು (Blood stains) ಸಿಕ್ಕಿರೋ ಮಾಹಿತಿ ಲಭ್ಯವಾಗಿದೆ.ಇದು ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದು, ಇನ್ನಷ್ಟು ಹಲ್ಲೆ ಪ್ರಕರಣ ತೆರೆದುಕೊಳ್ಳೋ ಸಾಧ್ಯತೆಗಳಿದೆ.
ದರ್ಶನ್ ಮತ್ತು ಗ್ಯಾಂಗ್ನಿಂದ (Darshan & Gang)|ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ, ಎಫ್ ಎಸ್ಎಲ್ ತಂಡ ಪಟ್ಟಣಗೆರೆ ಶೆಡ್ ಗೆ ಸಾಕ್ಷಿಕಲೆ ಹಾಕಲು ಪರಿಶೀಲನೆಗೆ ಹೋಗಿತ್ತು. ಈ ವೇಳೆ ಶೆಡ್ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ಬಿಟ್ಟು ಮೂರರಿಂದ ನಾಲ್ಕು ತಿಂಗಳ ಹಳೆಯ ಬೇರೆಯವರ ಬ್ಲೆಡ್ ಸ್ಟೇನ್ಸ್ ಗಳ ಗುರುತುಗಳು ಪತ್ತೆಯಾಗಿದೆ.
ಆದ್ರೆ ಹಲ್ಲೆಗೊಳಗಾದ ಯಾರು ಸಹ ದೂರು ನೀಡಲು ಮುಂದೆ ಬಂದಿಲ್ಲ. ಈ ಹಿನ್ನಲೆ ಇದೀಗ ಪೊಲೀಸರು ರೇಣುಕಾಸ್ವಾಮಿ ಕೊಲೆ ಕೇಸ್ ನಡುವೆ ಶೆಡ್ ನಲ್ಲಿ ಬೇರೆ ಯಾರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಬಗ್ಗೆಯೂ ಆರೋಪಿಗಳನ್ನ ವಿಚಾರಣೆ ನಡೆಸ್ತಿದ್ದಾರೆ.