ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂತಿಟ್ಟ (Mass burials) ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್.ಐ.ಟಿ ಟೀಮ್ (SIT) ತನಿಖೆಯನ್ನು ತೀವ್ರಗೊಳಿಸಿದ್ದು, ಇಂದು ತನಿಖೆ ಪ್ರಮುಖ ಘಟ್ಟ ತಲುಪಿದೆ. ನಿನ್ನೆಯಷ್ಟೇ ಅನಾಮಿಕ ದೂರುದಾರರನ್ನು ಹಲವು ಸ್ಥಳಕ್ಕೆ ಕರೆತಂದಿದ್ದ ಅಧಿಕಾರಿಗಳು ಆತ ಗುರುತು ಮಾಡಿದ 13 ಸ್ಥಳಗಳನ್ನು ಮಾರ್ಕಿಂಗ್ ಮಾಡಿದ್ದರು.

ಇಂದು ಎಸ್‌ಐಟಿ ಅಧಿಕಾರಿಗಳು ಶವಗಳನ್ನ ಹೂತಿಟ್ಟ ಸ್ಥಳಗಳಲ್ಲಿ ಉತ್ಖನನ ಆರಂಭಿಸಿದ್ದಾರೆ. ಸುಮಾರು 12 ಕಾರ್ಮಿಕರು ಹಾರೆ, ಗುದ್ದಲಿ, ಬಟ್ಟೆ, ಪ್ಲಾಸ್ಟಿಕ್ ಕವರ್ ಜೊತೆ ಬಂದಿರೋ ಅಧಿಕಾರಿಗಳು ಮಣ್ಣು ಅಗೆಯುವ ಕೆಲಸ ಆರಂಭಿಸಿದ್ದಾರೆ. 13 ಸ್ಥಳಾಗ ಪೈಕಿ ಇಂದು 3-4 ಸ್ಥಳಗಳಲ್ಲಿ ಮಣ್ಣು ಅಗೆದು ಪರಿಶೀಲಸಲಾಗುತ್ತದೆ.

ಈ ನಡುವೆ ಮಳೆ ಆರಂಭವಾಗಿದ್ದು,ಈ ನಡುವೆಯೇ 3 ತಂಡಗಳಾಗಿ ಕಾರ್ಮಿಕರು ಕೆಲಸ ಆರಂಭಿಸಿದ್ದಾರೆ. ದೂರುದಾರ ತೋರಿಸಿರುವ ಕೆಲವು ಸ್ಥಳಗಳಲ್ಲಿ ಈಗಾಗಲೇ ಅಗೆಯುವ ಕೆಲಸ ಆರಂಭವಾಗಿದೆ. ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಈ ವ್ಯಕ್ತಿ ಆರೋಪ ಮಾಡಿರುವಂತೆಯೇ ಆ ಸ್ಥಳಗಳಲ್ಲಿ ಕಳೆಬರ ಸಿಗಲಿದ್ಯಾ ಎಂಬುದನ್ನು ಕಾಡು ನೋಡಬೇಕಿದೆ.