• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಓಮಿಕ್ರಾನ್ ಹೆಚ್ಚಳದ ಭೀತಿ : BBMPಯಿಂದ KIA ಸುತ್ತಮುತ್ತಲಿನ ರೆಸಾರ್ಟ್, ಹೋಟೆಲ್ ಮಾಹಿತಿ ಸಂಗ್ರಹ.

ಕರ್ಣ by ಕರ್ಣ
December 22, 2021
in ಕರ್ನಾಟಕ
0
ಬೆಂಗಳೂರಿನಲ್ಲಿ ಕರೋನಾಗೆ ಬಲಿಯಾದವರೆಷ್ಟು? : ಬಿಬಿಎಂಪಿ ಡೆತ್‌ ಆಡಿಟ್ ವರದಿ ಸಿದ್ಧ!
Share on WhatsAppShare on FacebookShare on Telegram
ADVERTISEMENT

ಓಮಿಕ್ರಾನ್ ರೂಪಾಂತರಿಯಿಂದ ಮೂರನೇ ಅಲೆ ಭೀತಿ ದಿನೇ ದಿನೇ ಹೆಚ್ಚಾಗುತ್ತಿದೆ. ಬರುವ  ದಿನಗಳಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಸಂಭವವಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಬಿಬಿಎಂಪಿ ಬೆಂಗಳೂರಿನ ಮಟ್ಟಕ್ಕೆ ನಗರದಲ್ಲಿ ಕೇಸ್ ಹೆಚ್ಚಳವಾಗದಂತೆ ತಡೆಯಲು ಹಲವು ತಂತ್ರವನ್ನು ರೂಪಿಸಿದೆ.

ಹೈ ರಿಸ್ಕ್ ದೇಶಗಳಿಂದ ಬರುವವರ ಮೇಲೆ ಬಿಬಿಎಂಪಿ ಕಣ್ಣು

ಕರೋನಾದ ಹೊಸ ರೂಪಾಂತರಿ ಮೂರನೇ ಅಲೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಈಗಾಗಲೇ ಇಡೀ ರಾಜ್ಯದಲ್ಲಿ 19 ಓಮಿಕ್ರಾನ್ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಪೈಕಿ 10 ಪ್ರಕರಣ ಬೆಂಗಳೂರಿನಲ್ಲೇ ಪತ್ತೆಯಾಗಿದೆ. ಕರ್ನಾಟಕದ ಮಟ್ಟಿಗೆ ಕೊರೋನಾಗೆ ಹೆಚ್ಚು ಅನುಭವಿಸಿದ್ದು ರಾಜಧಾನಿ ಬೆಂಗಳೂರು. ಹೀಗಾಗಿ ಅಕಸ್ಮಾತ್ ಮೂರನೇ ಅಲೆ ಬಂದರೂ ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಹೀಗಾಗಿ ಈಗಿಂದೀಗಲೇ ಬೆಂಗಳೂರಿನಲ್ಲಿ ಬೇಕಾದ ಸಿದ್ಧತೆಗಳನ್ನು ನಡೆಸಲು ಪಾಲಿಕೆ ಶ್ರಮಿಸುತ್ತಿದೆ. ಈ ಹಿನ್ನೆಲೆ ಓಮೈಕ್ರಾನ್ ಪ್ರಕರಣಗಳು ಹೆಚ್ಚಳವಾದರೆ ನಗರಕ್ಕೆ ಇದರಿಂದ ಭಾರಿ ಹೊಡೆತವಾಗಬಾರದು ಎಂಬ ನೆಲೆಗಟ್ಟಿನಲ್ಲಿ ಹೊಸ ತಂತ್ರವನ್ನು ರೂಪಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿರುವ ರೆಸಾರ್ಟ್, ಹೋಟೆಲ್ ಹಾಗೂ ಲಾಡ್ಜ್ ಗಳ ಮಾಹಿತಿಯನ್ನು ಬಿಬಿಎಂಪಿ ಸಂಗ್ರಹಿಸುತ್ತಿದೆ.

ಓಮಿಕ್ರಾನ್ ಹೆಚ್ಚಾದರೆ ಏರ್ಪೋರ್ಟ್ ಸುತ್ತಮುತ್ತಲೇ ಕ್ವಾರಂಟೈನ್

ಈಗಾಗಲೇ ರಾಜ್ಯಕ್ಕೆ ಓಮೈಕ್ರಾನ್ ಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ತೆಗೆದುಕೊಳ್ಳಿ ಎಂದು ಕೇಂದ್ರದಿಂದ ಖಡಕ್ ಸೂಚನೆಯೂ ಬಂದಿದೆ. ಈ ನಡುವೆ ಬೆಂಗಳೂರು ಮಹಾನಗರ ಪಾಲಿಕೆ ಕೂಡ ಫುಲ್ ಅಲರ್ಟ್ ಆಗಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮುತ್ತ ಕಣ್ಗಾವಲು ಸೃಷ್ಟಿಸಲು ಪಾಲಿಕೆ ನಿರ್ಧರಿಸಿದೆ. ದೇವನಹಳ್ಳಿ ಮತ್ತು ಏರ್ಪೋರ್ಟ್ ಸುತ್ತ ಮುತ್ತ ಇರುವ ಹೋಟೆಲ್, ಲಾಡ್ಜ್, ರೆಸಾರ್ಟ್ ಗಳ ಮಾಹಿತಿ ಕಲೆಹಾಕಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಏರ್‌ಪೋರ್ಟ್ ಸುತ್ತಮುತ್ತ ಬರುವ ಎಲ್ಲಾ ರೆಸಾರ್ಟ್, ಹೋಟೆಲ್ ಗಳ ಮಾಹಿತಿ ಸಂಗ್ರಹಿಸಿದ ಬಳಿಕ, ಅಕಸ್ಮಾತ್ ಕೇಸ್ ಹೆಚ್ಚಳವಾದರೆ ನಗರದ ಬದಲು ಏರ್‌ಪೋರ್ಟ್ ಸುತ್ತಮುತ್ತಲೇ ಸೋಂಕಿತರಿಗೆ ಕ್ವಾರಂಟೈನ್ ವ್ಯವಸ್ಥೆ ಏರ್ಪಾಡು ಮಾಡುವ ಲೆಕ್ಕಾಚಾರ ಪಾಲಿಕೆಯದ್ದು.

22 ದಿನಗಳಲ್ಲಿ ನಗರಕ್ಕೆ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರ ಆಗಮನ

ಪ್ರತಿ ದಿನ ನಗರಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 3-4 ಹೈ ರಿಸ್ಕ್ ದೇಶಗಳಿಂದ ವಿಮಾನ ಆಗಮಿಸುತ್ತಿದೆ. ಡಿಸೆಂಬರ್ 1 ರಿಂದ ಡಿಸೆಂಬರ್ 22ರ ವರೆಗೆ WHO ಗುರುತಿಸಿದ ಹೈ ರಿಸ್ಕ್ ದೇಶದಿಂದ ಸರಿ ಸುಮಾರು ಒಂದು ಲಕ್ಷ ಮಂದಿ ಬೆಂಗಳೂರಿಗೆ ಬಂದಿದ್ದಾರೆ. ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಏಕಾಏಕಿ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗಬಹುದು. ಹೀಗೆ ನಗರಕ್ಕೆ ಆಗಮಿಸುವವರಿಗೆ ರಾಜಧಾನಿಗೆ ಎಂಟ್ರಿ ಕೊಡದೆ ಅಲ್ಲೇ ಏರ್ಪೋರ್ಟ್ ಸುತ್ತಮುತ್ತಲೇ ಕ್ವಾರಂಟೈನ್ ವ್ಯವಸ್ಥೆ ಮಾಡಿದರೆ ಉತ್ತಮ ಎಂಬ ನಿರ್ಧಾರ ಪಾಲಿಕೆಯದ್ದು.

ಮತಾಂತರ ನಿಷೇಧ ಮಸೂದೆ ವಿರುದ್ಧ ಭುಗಿಲೆದ್ದ ಆಕ್ರೋಶ : ಬಿಜೆಪಿಗೆ ಬುದ್ಧಿ ಇಲ್ಲ ಎಂದ ಪ್ರತಿಭಟನಾಕಾರರು / Bangaluru
Previous Post

ಮತಾಂತರ ನಿಷೇಧ ಮಸೂದೆ ವಿರುದ್ಧ ಭುಗಿಲೆದ್ದ ಆಕ್ರೋಶ : ಬಿಜೆಪಿಗೆ ಬುದ್ಧಿ ಇಲ್ಲ ಎಂದ ಪ್ರತಿಭಟನಾಕಾರರು

Next Post

ಮತಾಂತರ ನಿಷೇಧ ಮಸೂದೆ ವಿರುದ್ಧ ಭುಗಿಲೆದ್ದ ಆಕ್ರೋಶ : ಬಿಜೆಪಿಗೆ ಬುದ್ಧಿ ಇಲ್ಲ ಎಂದ ಪ್ರತಿಭಟನಾಕಾರರು / Bangaluru

Related Posts

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?
Top Story

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

by ಪ್ರತಿಧ್ವನಿ
April 14, 2026
0

ಬೆಂಗಳೂರು : ಪಂಚಮಸಾಲಿ ಸಮಾಜದ ಎರಡು ಟ್ರಸ್ಟ್ ಸ್ವಂತ ಆಸ್ತಿಯಾಗಿವೆ, ಇದರಿಂದ ಸಮಾಜ ಹಾಗೂ ಜನರಿಂದ ನಂಬಿಕೆಗೆ ಅನರ್ಹವಾಗಿವೆ. ವಚನಾನಂದ ಶ್ರೀಗಳ ಉಚ್ಚಾಟನೆ ಅಷ್ಟೇನೂ ವಿಶೇಷ ಎಂದು...

Read moreDetails
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಆದಿಚುಂಚನಗಿರಿ ಕಟ್ಟು ನಿಟ್ಟಿನ ಭದ್ರತೆ: ಸಿದ್ಧತೆ-ಭದ್ರತೆ ಹೀಗಿದೆ!

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಆದಿಚುಂಚನಗಿರಿ ಕಟ್ಟು ನಿಟ್ಟಿನ ಭದ್ರತೆ: ಸಿದ್ಧತೆ-ಭದ್ರತೆ ಹೀಗಿದೆ!

April 14, 2026
ಮಂತ್ರಾಲಯ ರಾಯರ ಜಪದ ಕಟ್ಟೆ ಸಮೀಪ ಭೂ ವಿವಾದ ತೀವ್ರ; ಸರ್ವೆ ವೇಳೆ ಗಲಾಟೆ

ಮಂತ್ರಾಲಯ ರಾಯರ ಜಪದ ಕಟ್ಟೆ ಸಮೀಪ ಭೂ ವಿವಾದ ತೀವ್ರ; ಸರ್ವೆ ವೇಳೆ ಗಲಾಟೆ

April 14, 2026
Next Post
ಮತಾಂತರ ನಿಷೇಧ ಮಸೂದೆ ವಿರುದ್ಧ ಭುಗಿಲೆದ್ದ ಆಕ್ರೋಶ : ಬಿಜೆಪಿಗೆ ಬುದ್ಧಿ ಇಲ್ಲ ಎಂದ ಪ್ರತಿಭಟನಾಕಾರರು / Bangaluru

ಮತಾಂತರ ನಿಷೇಧ ಮಸೂದೆ ವಿರುದ್ಧ ಭುಗಿಲೆದ್ದ ಆಕ್ರೋಶ : ಬಿಜೆಪಿಗೆ ಬುದ್ಧಿ ಇಲ್ಲ ಎಂದ ಪ್ರತಿಭಟನಾಕಾರರು / Bangaluru

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada