ನಟ, ನಿರ್ಮಾಪಕ, ಗೋಪ್ರೇಮಿ ಹಾಗೂ ಸಮಾಜ ಸೇವಕ ಮಹೇಂದ್ರ ಮುನ್ನೋತ್ ಪ್ರತೀಬಾರಿ ಸಾಮಾಜಿಕ ಚಿಂತನೆಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.
ಈಗ ಮತದಾನ ನಮ್ಮೆಲ್ಲರ ಹಕ್ಕು ಮರೆಯದೇಮತದಾನ ಮಾಡಿ ಉತ್ತಮ ನಾಗರೀಕರಾಗಿ ಎನ್ನುವ ಸಂದೇಶವನ್ನು ಹಾಡಿನ ಮೂಲಕ ದೇಶದ ಮತದಾರರಲ್ಲಿ ಮನವಿ ಮಾಡಿದ್ದಾರೆ. ಈ ಗೀತೆಯನ್ನು ಆನಂದ್ ಸಿನಿಮಾಸ್ ಮೂಲಕ ನಿರ್ಮಿಸಿದ್ದಾರೆ ಜೊತೆಗೆ ಎಲ್ಲಾವರ್ಗದ ಜನರನ್ನು ಮತದಾನ ನಮಗೆ ಸಂವಿಧಾನ ಕೊಟ್ಟ ಹಕ್ಕು ಮತ್ತು ಜವಾಬ್ದಾರಿ ಎಂದು ಹಾಡಿನ ಮೂಲಕ ಹೇಳುವ ಸಲುವಾಗಿ ಬಣ್ಣ ಹಚ್ಚಿದ್ದಾರೆ.
ಇನ್ನು ಈ ಗೀತಯನ್ನು ಹರಿಹರನ್ ರವರು ನಿರ್ದೇಶಿಸಿದ್ದಾರೆ.
‘ಓ ಭಾರತ ಮಾತೆಯ ಮಕ್ಕಳೇ ಕೇಳಿ ಕಿವಿ ಮಾತು’ ಈ ಗೀತೆಯನ್ನು ಸಾಹಿತಿ ರೇವಣ್ಣ ನಾಯಕ್, ಸಂಗೀತ ಎ ಟಿ ರವೀಶ್ ,ಸಂಕಲನ ಮುತ್ತುರಾಜ್ ಟಿ, ಗಾಯನ ಅಜಯ್ ವಾರಿಯರ್, ಛಾಯಾಗ್ರಹಣ ನಾಗೇಂದ್ರ ರಂಗಾರಿ, ನಿರ್ದೇಶನ ಹರಿಹರನ್ ಬಿ ಪಿ