ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯರಿಗೆ ಇಂದಿನ ದಿನ ಶುಭ ದಿನವಾಗಲಿದ್ದು, ನೀವು ಬಯಸಿದಂತೆ ಉದ್ಯೋಗದಲ್ಲಿ ಅಭಿವೃದ್ಧಿಯಾಗಲಿದೆ. ವೃತ್ತಿ ರಂಗದಲ್ಲಿ ನಿಮಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಧಾನ ಧರ್ಮದ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುವ ನಿಮಗೆ ಉತ್ತಮ ಧನಲಾಭವಾಗಲಿದೆ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ಕುಟುಂಬ ಸೌಖ್ಯ ಹತ್ತಿರದ ಹಿತಶತ್ರುಗಳಿಂದಲೇ ಹಾಳಾಗುವ ಸಾಧ್ಯತೆ ಇದ್ದು, ಸ್ನೇಹ ಹಾಗೂ ಸಂಬಂಧದಲ್ಲಿ ಎಚ್ಚರಿಕೆ ಇರಲಿ.
ವೃಷಭ ರಾಶಿಯ ಈ ದಿನದ ಭವಿಷ್ಯ

ಈ ದಿನ ವೃಷಭ ರಾಶಿಯವರು ಉಳಿತಾಯದ ಬಗ್ಗೆ ಯೋಚಿಸಲೇ ಬೇಕಿದೆ. ಇತ್ತೀಚಿನ ದಿನಗಳಲ್ಲಿ ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತಿದ್ದು, ನಿಮ್ಮ ಹಣದ ವ್ಯಯದ ಬಗ್ಗೆ ನೀವೇ ಕಡಿವಾಣ ಹಾಕಿ. ಸದ್ಯದ ಕೆಲ ದಿನಗಳು ನಿಮ್ಮ ಯೋಜನೆಯಂತೆ ಇರುವುದಿಲ್ಲ ಹೀಗಾಗಿ ನೀವು ಸಲ್ಲದ ಅಪವಾದ ನಿಂದನೆ ಒಳಗಾಗುತ್ತೀರಿ. ಕೆಲವು ಆಪ್ತರ ಜೊತೆ ವೈಮನಸ್ಸು ಉಂಟಾಗುವ ಸಾಧ್ಯತೆಯಿದೆ. ಮಾತಿನಲ್ಲಿ ನಡೆ ನುಡಿಯಲ್ಲಿ ಎಚ್ಚರ ಇರಲಿ.
ಮಿಥುನ ರಾಶಿಯ ಈ ದಿನದ ಭವಿಷ್ಯ

ಮಿಥುನ ರಾಶಿಯವರಿಗೆ ಧಾನ ಧರ್ಮದ ಕಾರ್ಯಗಳು ಮಾಡಲು ಇದು ಸಕಾಲ. ನಿಮ್ಮ ಒಳ್ಳೆಯತನಕ್ಕೆ ಫಲ ಸಿಗುವ ಸಮಯವಿದು. ಉತ್ತಮ ಆಲೋಚನೆಗಳನ್ನು ಮಾಡಿ. ಕುಟುಂಬಸ್ಥರೊಂದಿಗೆ ಸಂತಸದಿಂದ ಸಮಯ ಕಳೆಯುತ್ತೀರಿ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿಯಾಗಲಿದ್ದು, ತೀರ್ಥಕ್ಷೇತ್ರ ದರ್ಶನ ಮಾಡುವಿರಿ
ಕಟಕ ರಾಶಿಯ ಈ ದಿನದ ಭವಿಷ್ಯ

ಕಟಕ ರಾಶಿಯವರು ಇಂದು ದೂರ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ಧನ ನಷ್ಟದ ಸಾಧ್ಯತೆಯಿದ್ದು, ಹೂಡಿಕೆ ವಿಚಾರದಲ್ಲಿ ಎಚ್ಚರಿಕೆ ಇರಲಿ. ಆಪ್ತರಿಂದಲೇ ಕೆಲವು ಸಮಸ್ಯೆಗಳು ಎದುರಾಗಲಿದೆ. ಕುಟುಂಬಸ್ಥರೊಂದಿಗೆ ಪ್ರವಾಸ ಸಾಧ್ಯತೆ. ಮನೆಯಲ್ಲಿ ಖುಷಿಯ ವಾತಾವರಣ ಇರಲಿದ್ದು, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರಿಗೆ ಇತ್ತೀಚಿನ ಕೆಲ ದಿನಗಳಲ್ಲಿ ಯಾವುದೂ ಅಂದುಕೊಂಡತೆ ನಡೆಯುತ್ತಿಲ್ಲ. ಹೀಗಾಗಿ ಇಂದು ಕೂಡ ಕೆಲಸ ಕ್ಷೇತ್ರದಲ್ಲಿ ಎಚ್ಚರಿಗೆಯಿಂದ ಇರುವುದು ಉತ್ತಮ. ಸ್ನೇಹಿತರಿಗಾಗಿ ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಕೌಟುಂಬಿಕವಾಗಿಯೂ ಕೆಲವು ಏರುಪೇರುಗಳಾಗುವ ಸಾಧ್ಯತೆಯಿದ್ದು, ನೆಮ್ಮದಿ ಇರುವುದಿಲ್ಲ. ಇಷ್ಟದ ದೇವರ ಧ್ಯಾನ ಹೆಚ್ಚಿಸಿಕೊಳ್ಳಿ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯವರಿಗೆ ಸದ್ಯ ಗುರುವಿನ ಕೃಪಾಕಟಾಕ್ಷವಿದ್ದು, ಸ್ನೇಹಿತರಿಂದ ಕುಟುಂಬಸ್ಥರಿಂದ ಧನ ಸಹಾಯವಾಗಲಿದೆ. ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಕೆಲ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಹೆಚ್ಚಿದೆ. ಕೆಲವು ನಿರುಪಯುಕ್ತ ಖರ್ಚುಗಳು ಆಗಲಿದೆ. ಕೆಲವು ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಸಿಗುತ್ತದೆ. ಉತ್ತಮರ ಸ್ನೇಹ ಬೆಸೆದುಕೊಳ್ಳುತ್ತದೆ. ಆದರೆ ಮಾತಿನಲ್ಲಿ ನಡೆ ನುಡಿಯಲ್ಲಿ ಎಚ್ಚರ ಇರಲಿ.
ತುಲಾ ರಾಶಿಯ ಈ ದಿನದ ಭವಿಷ್ಯ

ಹಲವು ದಿನಗಳಿಂದ ನಿರೀಕ್ಷಿಸಿದಂತೆ ತುಲಾ ರಾಶಿಯವರು ಇಂದು ಲಸ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೊಸ ಉದ್ಯೋಗ ಅವಕಾಶಗಳು ನಿಮಗೆ ಸಿಗಲಿದ್ದು, ಆಯ್ಕೆಯಲ್ಲಿ ಎಚ್ಚರ ಇರಲಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ನಿಮಗೆ ಇಂದು ನೀವು ಬಯಸಿದ ಕೆಲ ಸೇವೆಗಳು ಇಂದು ಸಿಗಲಿದೆ. ಆಹಾರದಲ್ಲಿ ಎಚ್ಚರಿಗೆ ಇರಲಿ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯ ಜನರಿಗೆ ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಉಂಟಾಗುವ ಸಾಧ್ಯತೆಯಿದ್ದು, ಸ್ಥಿರಾಸ್ತಿ ಮಾರಾಟ ಪ್ರಯತ್ನ ಮಾಡುವಿರಿ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯಲಿದ್ದು, ಉಡುಗೊರೆ ಸಿಗುವ ಸಾಧ್ಯತೆ ಇದೆ. ಅನಾವಶ್ಯಕ ಹೂಡಿಕೆಯನ್ನು ಕಡಿಮೆ ಮಾಡಿ.
ಧನು ರಾಶಿಯ ಈ ದಿನದ ಭವಿಷ್ಯ

ಧನು ರಾಶಿಯವರಿಗೆ ಕೌಟುಂಬಿಕವಾಗಿ ಸಮಯ ಉತ್ತಮವಾಗಿದ್ದರೂ ಕೂಡ ವೃತ್ತಿಯಲ್ಲಿ ಅಭಿವೃದ್ಧಿಗೆ ಇದು ಸಕಾಲವಲ್ಲ. ಉದ್ಯೋಗ ಹಾಗೂ ಉದ್ಯಮ ಎರಡರಲ್ಲೂ ಏರುಪೇರಾಗುವ ಸಾಧ್ಯತೆ ಇದೆ. ಮನೆ ದೇವರ ಹಾಗೂ ಇಷ್ಟದ ದೇವರ ಪ್ರಾರ್ಥನೆ ಮಾಡಿ. ನಿಮ್ಮ ಸಹಾಯ ಮನೋಭಾವದಿಂದ ಈ ದಿನ ನಿಮಗೆ ಕೆಲವು ಗೌರವಗಳು ಸಿಗುವ ಸಾಧ್ಯತೆ ಇದೆ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರು ವಾಹನ ಓಡಿಸುವ ಸಂದರ್ಭದಲ್ಲಿ ಎಚ್ಚರ ವಹಿಸುವುದು ಅಗತ್ಯ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ಲಾಭದ ಸಮಯವಾಗಿದೆ. ಆಪ್ತರೊಂದಿಗೆ ಹಣದ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಕೌಟುಂಬಿಕ ಜೀವನದಲ್ಲಿ ಖುಷಿ ಹೆಚ್ಚಲಿದೆ. ಮನೆಗೆ ಅತಿಥಿಗಳು ಆಗಮಿಸುವ ಸಾಧ್ಯತೆ ಇದೆ. ಮಾನಸಿಕ ಒತ್ತಡ ಇಂದು ಕಡಿಮೆಯಾಗಲಿದೆ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರ ಮೇಲೆ ಶನಿ ದೇವನ ನೇರವಾದ ದೃಷ್ಟಿ ಇರುವುದರಿಂದ ಕೆಲಸ ಕಾರ್ಯಗಳಲ್ಲಿ ವಿಘ್ನವಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿಯೂ ಸ್ವಲ್ಪ ಮಟ್ಟಿನ ನಷ್ಟವಾಗಲಿದ್ದು, ಹಣದ ವ್ಯಯದಲ್ಲಿ ಉದಾರತೆ ಬೇಡ. ಇಂದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ. ಯೋಗ ಧ್ಯಾನಗಳತ್ತ ಹೆಚ್ಚಿನ ಗಮನ ಕೊಡಿ.
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರಿಗೆ ಹಣದ ಹರಿವು ಉತ್ತಮವಾಗಿರಲಿದೆ. ಅನಗತ್ಯ ಖರ್ಚು ತಪ್ಪಿಸಿ. ಅರಿಚಿತರು ಹಾಗೂ ಅನ್ಯರ ಮೇಲೆ ಹೆಚ್ಚಿನ ನಂಬಿಕೆ ಬೇಡ. ನಿಮ್ಮ ಕೆಲಸಗಳಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ದೂರದ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಹೈನುಗಾರಿಗೆ ಹಾಗೂ ವಾಣಿಜ್ಯ ಕೃಷಿ ಮಾಡುವ ರೈತರಿಗೆ ಲಾಭ ಹೆಚ್ಚಲಿದೆ. ಕುಟುಂಬದಲ್ಲಿ ಸಂತಸದ ವಾತಾವಣ ಇರಲಿದೆ.











