ಸಮುದ್ರಕ್ಕೆ ಅಪ್ಪಳಿಸಿದ ರಷ್ಯಾ ವಿಮಾನದಲ್ಲಿದ್ದ ಎಲ್ಲಾ 28 ಜನರು ಸಾವನ್ನಪ್ಪಿದ್ದಾರೆ. ಮಂಗಳವಾರ 28 ಜನರನ್ನು ಹೊತ್ತ ವಿಮಾನ ನಾಪತ್ತೆಯಾಗಿ ಅಪಘಾತಕ್ಕೀಡಾದ ನಂತರ ಯಾರೂ ಬದುಕುಳಿದಿಲ್ಲ ಎಂದು ರಷ್ಯಾ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.
ಸಮುದ್ರಕ್ಕೆ ಅಪ್ಪಳಿಸಿದ ರಷ್ಯಾ ವಿಮಾನದಲ್ಲಿದ್ದ ಎಲ್ಲ 28 ಜನ ಸಾವನ್ನಪ್ಪಿದ್ದಾರೆ. ಮಂಗಳವಾರ 28 ಜನರನ್ನು ಹೊತ್ತ ವಿಮಾನ ನಾಪತ್ತೆಯಾಗಿ ಅಪಘಾತಕ್ಕೀಡಾದ ನಂತರ ಯಾರೂ ಬದುಕುಳಿದಿಲ್ಲ ಎಂದು ರಷ್ಯಾ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಕಾಣೆಯಾದ ವಿಮಾನವನ್ನು ಹುಡುಕಲು ತಂಡಗಳನ್ನು ನಿಯೋಜಿಸಿದ ನಂತರ ವಿಮಾನದ ಅಪಘಾತದ ಸ್ಥಳ ಪತ್ತೆಯಾಗಿದೆ ಎಂದು ರಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ದೃಢಪಡಿಸಿದೆ.
ವಿಮಾನದಲ್ಲಿ 22 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎಂದು ಸಚಿವಾಲಯ ತಿಳಿಸಿದ್ದು, ಮೃತರಲ್ಲಿ ಪಲಾನಾ ಮೇಯರ್ ಓಲ್ಗಾ ಮೊಖಿರೇವಾ ಕೂಡ ಒಬ್ಬರಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೆ, ಕತ್ತಲೆ ಆವರಿಸಿದರಿಂದ ವಿಮಾನ ಹುಡುಕಾಟವನ್ನು ನಿಲ್ಲಿಸಲಾಗಿದೆ ಎಂದು ರಷ್ಯಾದ ರೆಸ್ಕ್ಯೂ ಟೀಮ್ ಸಚಿವಾಲಯದ ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.
ಪೆಟ್ರೋಪವ್ಲೊವಸ್ಕ್‌ನಿಂದ ಕಾಮ್ಚಾಟ್ಸಿಕಿಯಲ್ಲಿರುವ ಪಲಾನಾದೆಡೆ ಪ್ರಯಾಣಿಸುತ್ತಿದ್ದ ವೇಳೆ ಗ್ರಾಮವೊಂದರ ಸಮೀಪ ಈ ವಿಮಾನ ವಾಯು ಸಂಚಾರ ನಿಯಂತ್ರಣ ವಿಭಾಗದ ಜತೆಗಿನ ಸಂಪರ್ಕ ಕಳೆದುಕೊಂಡಿದ್ದು ವಿಮಾನವು ಕೆಳಗಿಳಿಯುವ ಪ್ರಯತ್ನದಲ್ಲಿದ್ದಾಗ ಟ್ರಾಫಿಕ್ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಡಿತಗೊಂಡಿದೆ ಎಂದು ಸಚಿವಾಲಯ ವಿವರಿಸಿದೆ.
ಕಾಣೆಯಾದ ವಿಮಾನದ ಮಾರ್ಗವನ್ನು ಪರಿಶೀಲಿಸಲು ಎರಡು ಹೆಲಿಕಾಪ್ಟರ್‌ಗಳು ಮತ್ತು ವಿಮಾನವನ್ನು ನಿಯೋಜಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವು ಲ್ಯಾಂಡ್ ಆಗಲು ತಯಾರಿ ನಡೆಸುತ್ತಿದ್ದಾಗ ಸಮುದ್ರಕ್ಕೆ ಅಪ್ಪಳಿಸಿದೆ ಎಂದು ವರದಿಗಳು ಹೇಳಿಕೊಂಡಿವೆ, ಆದರೆ ಈ ಕುರಿತು ಸರ್ಕಾರದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ.
ವಿಮಾನವು ಕಮ್ಚಟ್ಕಾ ಏವಿಯೇಷನ್ ಎಂಟರ್‌ಪ್ರೈಸ್‌ಗೆ ಸೇರಿದ್ದು ಈ ವಿಮಾನವು ಅಕ್ಟೋಬರ್ 20, 1982 ರಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ಅದರ ಯೋಗ್ಯತಾ ಪ್ರಮಾಣಪತ್ರವು ಆಗಸ್ಟ್ 30, 2021 ರಂದು ಮುಕ್ತಾಯಗೊಳ್ಳಲಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ.






