ರಾಜ್ಯದ ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ (Federation of wines merchant association) ನವೆಂಬರ್20 ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌ಗೆ ಕರೆ ಕೊಟ್ಟಿದೆ.ರಾಜ್ಯ ಅಬಕಾರಿ ಇಲಾಖೆ ಅಧಿಕಾರಿಗಳು ವರ್ಗಾವಣೆ, ಪ್ರಮೋಷನ್‌ಗೆ ಸನ್ನದ್ದರಾಗೊರೋದ್ರಿಂದ ಕೋಟಿ ಕೋಟಿ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪವಿದೆ.
ಇದ್ರಿಂದ ನಕಲಿ ಅಂತರಾಜ್ಯ ಮದ್ಯದ ಹಾಳಿ ಹೆಚ್ಚಳವಾಗಿದೆ. ಹೀಗಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಣಕಾಸು ಸಚಿವರಿಗೆ ಮತ್ತು ಅಬಕಾರಿ ಇಲಾಖೆಗೆ ಒತ್ತಾಯಿಸಿ ನವೆಂಬರ್ 20 ರ ವರೆಗು ಗಡುವು ನೀಡಲಾಗಿದೆ.
ಈ ಗಡುವಿನ ನಂತರ ಒಂದು ವೇಳೆ ಬೇಡಿಕೆ ಇಡೇರಿಸಿಲ್ಲ ಅಂದ್ರೆ ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್‌ನಿಂದ ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್ ಮಾಡುವ ಎಚ್ಚರಿಕೆಯನ್ನ ನೀಡಲಾಗಿದೆ.