ಬೆಂಗಳೂರು ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (Bengaluru international airport) ಎನ್ ಸಿ ಬಿ (NCB) ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಥೈಲ್ಯಾಂಡ್ ನಿಂದ (Thailand) ಬೆಂಗಳೂರಿಗೆ ಬರುತ್ತಿದ್ದ ಐದು ಜನರನ್ನ ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಈ ದಾಳಿಯಲ್ಲಿ ಸುಮಾರು 20 ಕೆ.ಜಿಯಷ್ಟು ಡ್ರಗ್ ತರುತ್ತಿದ್ದ ಆರೋಪಿಗಳನ್ನು ಅಧಿಕಾರಿಗಳು ಖೆಡ್ಡಾಗೆ ಕೆಡವಿದ್ದಾರೆ.ಈ ಐದು ಜನ ಆರೋಪಿಗಳನ್ನ ಡ್ರಗ್ ಸರಬರಾಜು ಮಾಡಲು ಬಳಕೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

25-30 ವರ್ಷದ ಯುವಕರಿಂದ ಈ ಕೃತ್ಯ ನಡೆಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಭಾರತದಲ್ಲಿ ಡ್ರಗ್ ಯಾವುದೇ ಅಪರಾಧವಲ್ಲ ಅಂತಾ ಹೇಳಿ ಆರೋಪಿಗಳನ್ನ ಕಿಡಿಗೇಡಿಗಳು ಕಳುಹಿಸಿದ್ದರು ಎನ್ನಲಾಗಿದೆ.
ಒಂದು ವೇಳೆ ಬಂಧನವಾದ್ರೆ ನಾವು ನಿಮ್ಮನ್ನ ಬಿಡುಗಡೆ ಮಾಡಿಸುತ್ತೆವೆ ಎಂಬ ಆಮಿಷ ಒಡ್ಡಿದ್ದ ಮಾಫಿಯಾ ತಂಡ ಈ ಆರೋಪಿಗಳನ್ನು ಯಾಮಾರಿಸಿ ಡ್ರಗ್ಸ್ ಸರಬರಾಜಿಗೆ ಬಳಸಿಕೊಂಡಿದ್ದಾರೆ. ಸದ್ಯಕ್ಕೆ ಆರೋಪಿಗಳನ್ನ ಬಂಧಿಸಿ ಎನ್ ಸಿ.ಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.