ಮಾನಸ ಗಂಗೋತ್ರಿಯ ಆವರಣದಲ್ಲಿ ಸಂಜೆ 6.30ರ ನಂತರ ಹೆಣ್ಣುಮಕ್ಕಳು ಒಂಟಿಯಾಗಿ ತಿರುಗಾಡುವುದನ್ನು ಕೂರುವುದನ್ನು ನಿಷೇಧಿಸಿದ್ದ ಆದೇಸವನ್ನು ಮೈಸೂರು ವಿವಿ ಕುಲಸಚಿವ ಹಿಂಪಡೆದಿದ್ದಾರೆ.
ಮೈಸೂರಿನಲ್ಲಿ ಗ್ಯಾಂಗ್ ರೇಪ್ ಹಿನ್ನೆಲೆ ಕುಕ್ಕರಹಳ್ಳಿ ಕೆರೆ ಮತ್ತು ಮಾನಸಗಂಗೋತ್ರಿ ಆವರಣದಲ್ಲಿ ಕಟ್ಟುನಿಟ್ಟಿನ ಆದೇಶ ವಿಧಿಸಿರುವುದಾಗಿ ಶುಕ್ರವಾರ ಮೈಸೂರು ವಿವಿ ಕುಲಸಚಿವರು ಸುತ್ತೋಲೆವೊಂದನ್ನು ಹೊರಡಿಸಿದ್ದರು. ಈ ಸುತ್ತೋಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಮಹಿಳೆಯರ ಸ್ವಾತಂತ್ರ ಮತ್ತು ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ವಿರೋಧದ ಕೂಗು ಕೇಳಿ ಬಂದಿತ್ತು. ಅನೇಕರು ಈ ಆದೇಶದ ಕುರಿತು ಟೀಕೆ ಮಾಡಿದ್ದರು. ಮದ್ಯಾಹ್ನ ರಾಜ್ಯದ ಸಚಿವ ಅಶ್ವಥ್ನಾರಾಯಣ್ ಕೂಡ ಆದೇಶವನ್ನು ಹಿಂಪಡೆಯಿರಿ ಎಂದು ಹೇಳಿದ್ದರು. ಅನೇಕ ಟೀಕೆ ಟಿಪ್ಪಣಿಗೆ ಗುರುಯಾಗಿದ್ದ ಈ ಆದೇಶವನ್ನು ಈಗ ಮೈಸೂರು ವಿವಿ ಕುಲಸಚಿವರು ಹಿಂಪಡೆದಿದ್ದಾರೆ.

ಮೈಸೂರಿನಲ್ಲಿ ಗ್ಯಾಂಗ್ ರೇಪ್ ಹಿನ್ನೆಲೆ ಕುಕ್ಕರಹಳ್ಳಿ ಕೆರೆ ಮತ್ತು ಮಾನಸಗಂಗೋತ್ರಿ ಆವರಣದಲ್ಲಿ ಕಟ್ಟುನಿಟ್ಟಿನ ಆದೇಶವನ್ನು ಶುಕ್ರವಾರ ಮೈಸೂರು ವಿವಿ ಕುಲಸಚಿವರು ಸುತ್ತೋಲೆವೊಂದನ್ನು ಹೊರಡಿಸಿದ್ದರು.
ಈ ಸುತ್ತೋಲೆಯಲ್ಲಿ, ಸುರಕ್ಷಣಾ ದೃಷ್ಟಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸಂಜೆ 6.30 ರ ನಂತರ ಪ್ರವೇಶ ನಿರ್ಬಂಧ ಮತ್ತು ಮಾನಸ ಗಂಗೋತ್ರಿಯ ಆವರಣದಲ್ಲಿ ಸಂಜೆ 6.30ರ ನಂತರ ಹೆಣ್ಣುಮಕ್ಕಳು ಒಂಟಿಯಾಗಿ ತಿರುಗಾಡುವುದನ್ನು ಕೂರುವುದನ್ನು ನಿಷೇಧಿಸಲಾಗಿದೆ ಹಾಗೂ ವಿವಿ ಭದ್ರತಾ ಸಿಬ್ಬಂದಿಯಿಂದ ಸಂಜೆ 6 ರಿಂದ 9ರವರೆಗೆ ಗಸ್ತು ತಿರಗಲು ವಿವಿ ಕುಲಸಚಿವರು ಆದೇಶಿಸಿದ್ದರು. ಈ ಆದೇಶವನ್ನು ಈಗ ಹಿಂಪಡೆದಿದ್ದಾರೆ.


