ನಾನು ಅಂದು ಹೇಳಿದ್ದಕ್ಕೆ ಈಗಲೂ ಬದ್ಧವಾಗಿರುವೆ. ಸಂವಿಧಾನ ಮಾತ್ರ ನನ್ನ ಧರ್ಮ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮುಂಬೈನಲ್ಲಿ ಬುಧವಾರ (ಸೆಪ್ಟೆಂಬರ್ 6) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯಾವ ಧರ್ಮವು ಮನುಷ್ಯರ ಮಧ್ಯೆ ಬೇಧ ಭಾವ ಮೂಡಿಸುತ್ತದೆಯೋ, ಯಾವ ಧರ್ಮ ಸಮಾನತೆಯನ್ನು ಸಾರುವುದಿಲ್ಲವೋ’ ಅದು ನನ್ನ ಪ್ರಕಾರ ಧರ್ಮವೇ ಅಲ್ಲ. ಅವರಿಗೆ ಅವರ ಧರ್ಮವು ಆ ರೀತಿಯಾಗಿ ಇದೆ ಎನಿಸಿದರೆ ಅದು ಅವರ ಧರ್ಮದ ಸಮಸ್ಯೆ. ನನ್ನ ಸಮಸ್ಯೆಯಲ್ಲ” ಎಂದು ಹೇಳಿದರು.
ತಮ್ಮ ವಿರುದ್ಧ ಉತ್ತರಪ್ರದೇಶದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ, ಯಾರು ಏನೇ ಮಾಡಿದರೂ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲಾ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನನ್ನ ಹೇಳಿಕೆ ಅತ್ಯಂತ ಸ್ಪಷ್ಟವಾಗಿದೆ. ನಾನು ಯಾವುದೇ ಒಂದು ಧರ್ಮದ ವಿರುದ್ಧ ಹೇಳಿಕೆ ನೀಡಿಲ್ಲ. ಉತ್ತರ ಪ್ರದೇಶ ಸರ್ಕಾರ ಏನಾದರೂ ಮಾಡಿಕೊಳ್ಳಲಿ. ಕಾನೂನು ಪ್ರಕಿಯೆ ಕ್ರಮಬದ್ಧವಾಗಿ ನಡೆಯುತ್ತದೆ. ನಾವು ಸಂವಿಧಾನ ಬದ್ಧವಾಗಿ ಅದನ್ನು ಎದುರಿಸಲು ಮಾಡಬೇಕಾದ ಎಲ್ಲವನ್ನೂ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.






