• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಸೋಲಿನ ಸರಣಿ ಮುಂದುವರೆಸಿದ ಮುಂಬೈ; ಪ್ಲೇ ಆಫ್ ಹಾದಿ ಬಲು ಕಷ್ಟ

ಪ್ರತಿಧ್ವನಿ by ಪ್ರತಿಧ್ವನಿ
April 27, 2024
in ಕ್ರೀಡೆ
0
ಸೋಲಿನ ಸರಣಿ ಮುಂದುವರೆಸಿದ ಮುಂಬೈ; ಪ್ಲೇ ಆಫ್ ಹಾದಿ ಬಲು ಕಷ್ಟ
Share on WhatsAppShare on FacebookShare on Telegram

ADVERTISEMENT

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಶನಿವಾರ ಮುಂಬೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ಕೊನೆಯವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಗೂ ಡೆಲ್ಲಿ ತಂಡ 10 ರನ್ ಗಳ ಜಯ ಸಾಧಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ ಗಳಲ್ಲಿ ಕೇವಲ 4 ವಿಕೆಟ್‌ ಕಳೆದುಕೊಂಡು 257 ರನ್‌ ಗಳಿಸಿತ್ತು. 258 ರನ್‌ ಗಳ ದೊಡ್ಡ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ 20 ಓವರ್‌ ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 247 ರನ್‌ ಗಳಿಸಿ ಸೋಲೊಪ್ಪಿಕೊಂಡಿದೆ.

ಗೆಲ್ಲಲು ಮುಂಬೈ ಗೆಲುವಿಗೆ 25 ರನ್‌ ಗಳ ಅಗತ್ಯವಿತ್ತು. ಮುಕೇಶ್‌ ಕುಮಾರ್‌ ಬೌಲಿಂಗ್‌ ವೇಳೆ ತಿಲಕ್‌ ವರ್ಮಾ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತದಲ್ಲಿ 2 ರನ್‌ ಕದಿಯಲು ಯತ್ನಿಸಿ ರನೌಟ್ ಗೆ ಬಲಿಯಾದರು. ಹೀಗಾಗಿ ಮುಂಬೈ 247 ರನ್‌ ಗಳಿಸಿತು. ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಮುಂಬೈ ಇಂಡಿಯನ್ಸ್‌ ಆರಂಭದಲ್ಲಿ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು. ರೋಹಿತ್‌ ಶರ್ಮಾ 8 ರನ್‌ ಗಳಿಗೆ ಔಟ್ ಆದರು. ಈ ಬೆನ್ನಲ್ಲೇ 20 ರನ್‌ ಗಳಿಸಿ ಇಶಾನ್‌ ಕಿಶನ್‌ ಸಹ ಔಟ್ ಆದರು. ಸ್ಪೋಟಕ ಬ್ಯಾಟಿಂಗ್‌ ಆರಂಭಿಸಿದ್ದ ಸೂರ್ಯಕುಮಾರ್‌ ಯಾದವ್‌ 13 ಎಸೆತಗಳಲ್ಲಿ 26 ರನ್‌ ಗಳಿಸಿ ಔಟಾದರು.

ಮುಂಬೈ ಪರ ತಿಲಕ್‌ ವರ್ಮಾ 63 ರನ್‌ (32 ಎಸೆತ, 4 ಸಿಕ್ಸರ್‌, 4 ಬೌಂಡರಿ), ಹಾರ್ದಿಕ್‌ ಪಾಂಡ್ಯ 46 ರನ್‌ (24 ಎಸೆತ, 3 ಸಿಕ್ಸರ್‌, 4 ಬೌಂಡರಿ), ಟಿಮ್‌ ಡೇವಿಡ್‌ 37 ರನ್‌ (17 ಎಸೆತ, 3 ಸಿಕ್ಸರ್‌, 4 ಬೌಂಡರಿ), ಸೂರ್ಯಕುಮಾರ್‌ 26 ರನ್‌, ಇಶಾನ್‌ ಕಿಶನ್‌ 20 ರನ್‌, ಗಳಿಸಿದರು. ಡೆಲ್ಲಿ ಪರ ಮುಕೇಶ್‌ ಕುಮಾರ್‌, ರಸಿಖ್‌ ಸಲಾಮ್‌ ತಲಾ 3 ವಿಕೆಟ್‌ ಕಿತ್ತರೆ, ಖಲೀಲ್‌ ಅಹ್ಮದ್‌ 2 ವಿಕೆಟ್‌ ಪಡೆದರು.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಫ್ರೇಸರ್‌ ಮೆಕ್‌ಗಾರ್ಕ್‌ ಹಾಗೂ ಅಭಿಷೇಕ್ ಪೋರೆಲ್ ಆರಂಭದಿಂದಲೇ ಅಬ್ಬರಿಸಿದರು. ಹೀಗಾಗಿ ತಂಡದ ಮೊತ್ತ ವೇಗ ಪಡೆಯಿತು. 2.4 ಓವರ್‌ಗಳಲ್ಲೇ ಡೆಲ್ಲಿ ತಂಡ 50 ರನ್‌ ಗಳಿಸಿತ್ತು. ಆಸ್ಟ್ರೇಲಿಯಾ ಮೂಲದ ಯುವ ಸ್ಪೋಟಕ ಬ್ಯಾಟರ್ ಫ್ರೇಸರ್‌ ಮೆಗಾರ್ಕ್‌ ಸಿಕ್ಸರ್‌, ಬೌಂಡರಿ ಸಿಡಿಸಿ ಗುಡುಗಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಹೀಗಾಗಿ ಡೆಲ್ಲಿ ಪವರ್‌ ಪ್ಲೇ ನಲ್ಲಿ 92 ರನ್ ಕಲೆಹಾಕಿತ್ತು. ಇದು ಐಪಿಎಲ್‌ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪವರ್‌ ಪ್ಲೇನಲ್ಲಿ ಸಿಡಿಸಿದ ಗರಿಷ್ಠ ರನ್ ಇದಾಗಿತ್ತು. ಉಳಿದಂತೆ ಮೆಕ್‌ಗಾರ್ಕ್‌ 84 ರನ್‌ (27 ಎಸೆತ, 11 ಬೌಂಡರಿ, 6 ಸಿಕ್ಸರ್‌), ಟ್ರಿಸ್ಟನ್‌ ಸ್ಟಬ್ಸ್‌ 48 ರನ್‌ (25 ಎಸೆತ, 6 ಬೌಂಡರಿ, 2 ಸಿಕ್ಸರ್‌), ಶಾಯ್‌ಹೋಪ್‌ 41 ರನ್‌ (17 ಎಸೆತ, 5 ಸಿಕ್ಸರ್‌), ರಿಷಭ್‌ ಪಂತ್‌ 29 ರನ್‌, ಅಕ್ಷರ್‌ ಪಟೇಲ್‌ 11 ರನ್‌ ಗಳಿಸಿದರು.

Tags: CricketDelhiIPLMI
Previous Post

ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆ.. ಸಿದ್ದರಾಮಯ್ಯ ಆಕ್ರೋಶ

Next Post

ಸಂದೇಶ್ ಖಾಲಿಯಲ್ಲಿ ಸಿಬಿಐ ದಾಳಿ; ತನಿಖಾ ತಂಡದ ವಿರುದ್ಧವೇ ದೂರು

Related Posts

CCL ಸಮಯದಲ್ಲಿ ತಾನು ಬಳಸಿದ ಕೆಟ್ಟ ಪದದ ಬಗ್ಗೆ ಸುದೀಪ್ ಹೇಳಿದ್ದೇನು
ಕ್ರೀಡೆ

CCL ಸಮಯದಲ್ಲಿ ತಾನು ಬಳಸಿದ ಕೆಟ್ಟ ಪದದ ಬಗ್ಗೆ ಸುದೀಪ್ ಹೇಳಿದ್ದೇನು

by ಪ್ರತಿಧ್ವನಿ
February 8, 2026
0

ಸಿಸಿಎಲ್ ಪಂದ್ಯದ ವೇಳೆ ಕಿಚ್ಚ ಸುದೀಪ್ ಬಳಸಿದ್ದ ಅವಾಚ್ಯ ಪದ ವೈರಲ್ ಆಗಿತ್ತು. ಈ ಕುರಿತು ಸಿಸಿಎಲ್ ಗೆಲುವಿನ ಸುದ್ದಿಗೋಷ್ಠಿಯಲ್ಲಿ ಸುದೀಪ್ ಮಾತನಾಡಿದ್ದಾರೆ. https://youtu.be/cz8M9rbGmYc?si=pJFMwcUa7d8iEGtN ಅದು ಕೋಪದಲ್ಲಿ...

Read moreDetails
ಈ ಗೆಲುವು ಎಲ್ಲಾ ಆಟಗಾರರ ಒಗ್ಗಟ್ಟಿನ ಅಮೋಘ ಪ್ರದರ್ಶನ:  ಐಸಿಸಿ U19 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಹೆಚ್‌ಡಿಕೆ ಶುಭಹಾರೈಕೆ..

ಈ ಗೆಲುವು ಎಲ್ಲಾ ಆಟಗಾರರ ಒಗ್ಗಟ್ಟಿನ ಅಮೋಘ ಪ್ರದರ್ಶನ: ಐಸಿಸಿ U19 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಹೆಚ್‌ಡಿಕೆ ಶುಭಹಾರೈಕೆ..

February 6, 2026
ಕೆಪಿಟಿಸಿಎಲ್ ಥೀಮ್ ಪಾರ್ಕ್ ಕಾಮಗಾರಿ ಶೀಘ್ರದಲ್ಲೇ ಪೂರ್ಣ: ಸಚಿವ ಕೆ.ಜೆ.ಜಾರ್ಜ್

ಕೆಪಿಟಿಸಿಎಲ್ ಥೀಮ್ ಪಾರ್ಕ್ ಕಾಮಗಾರಿ ಶೀಘ್ರದಲ್ಲೇ ಪೂರ್ಣ: ಸಚಿವ ಕೆ.ಜೆ.ಜಾರ್ಜ್

February 6, 2026
ಇಂಗ್ಲೆಂಡ್‌ ಬಗ್ಗು ಬಡೆದ “ಮರಿಹುಲಿಗಳು” : U19 ವಿಶ್ವಕಪ್‌ ಮುಡಿಗೇರಿಸಿಕೊಂಡ ಭಾರತ..

ಇಂಗ್ಲೆಂಡ್‌ ಬಗ್ಗು ಬಡೆದ “ಮರಿಹುಲಿಗಳು” : U19 ವಿಶ್ವಕಪ್‌ ಮುಡಿಗೇರಿಸಿಕೊಂಡ ಭಾರತ..

February 6, 2026
U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

February 6, 2026
Next Post
ಸಂದೇಶ್ ಖಾಲಿಯಲ್ಲಿ ಸಿಬಿಐ ದಾಳಿ; ತನಿಖಾ ತಂಡದ ವಿರುದ್ಧವೇ ದೂರು

ಸಂದೇಶ್ ಖಾಲಿಯಲ್ಲಿ ಸಿಬಿಐ ದಾಳಿ; ತನಿಖಾ ತಂಡದ ವಿರುದ್ಧವೇ ದೂರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada