ಬಿಜೆಪಿ ರಾಜ್ಯಾಧ್ಯಕ್ಷ (Bjp state president) ಬದಲಾವಣೆ ಆಗ್ತಾರೆ ಎಂಬ ಕುಮಾರ್ ಬಂಗಾರಪ್ಪ (Kumar bangarappa) ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ,ರಾಜ್ಯಾಧ್ಯಕ್ಷರ ಬದಲಾವಣೆ ಆಡೋ ಹುಡುಗರ ಆಟಾನಾ..? ಕುಮಾರ್ ಬಂಗಾರ ಅವರು ತಿರುಕನ ಕನಸು ಕಾಣುತಿದ್ದಾರೆ ಎಂದು ಎಂ.ಪಿ ರೇಣುಕಾಚಾರ್ಯ (MP renukacharya) ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಧ್ಯಕ್ಷರ ಬದಲಾವಣೆಗೆ ಮಾಡೋಕೆ ರಾಷ್ಟ್ರೀಯ ನಾಯಕರು ಹೇಳಿದ್ರಾ..? ಇವರಿಗೆ ಅಧಿಕಾರ ಕೊಟ್ಟಿದ್ದು ಯಾರು ಅಂತ ಆಕ್ರೋಶ ಹೊರಹಾಕಿದ್ದು,ಕುಮಾರ್ ಬಂಗಾರಪ್ಪ ವಿರುದ್ಧ ದಾವಣಗೆರೆಯಲ್ಲಿ
ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ರಾಜ್ಯಾಧ್ಯಕ್ಷರನ್ನ ಕೆಳಗೆ ಇಳಿಸ್ತಿನಿ ಅನ್ನೋದು ಗೂಳಿ ಕಥೆ, ತಿರುಕನ ಕನಸು. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ವಿಜಯೇಂದ್ರ ಅವರೆ ಅಧ್ಯಕ್ಷರಾಗಿ ಇರ್ತಾರೆ ಅನ್ನೋದು ಅಷ್ಟೇ ಸತ್ಯ.ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಗಳು ಆಗುತ್ತೆ ಅಂತ ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.