ರಘು ತಾಯಿ ಮಂಜುಳಮ್ಮ ಅಂತ್ಯಕ್ರಿಯೆ ಮುಕ್ತಾಯವಾಗಿದೆ. ಕೊನೆಯದಾಗಿ ತಾಯಿಯ ಮುಖ ನೋಡಲಾಗದೇ ಜೈಲಿನಲ್ಲಿ ನರಳಾಡ್ತಿರೋ ಆರೋಪಿ ರಾಘವೇಂದ್ರ ನರಳಾಡಿದ್ದಾನೆ ಎನ್ನಲಾಗಿದೆ.ನಿಮ್ಮ ತಾಯಿ ಮಂಜುಳಮ್ಮ ಅಂತ್ಯಕ್ರಿಯೆ ಮುಗಿದಿದೆ ಎಂದು ಜೈಲಾಧಿಕಾರಿ ರಘುಗೆ ತಿಳಿಸಿದ್ದಾರೆ.
ತಾಯಿಯ ಅಂತ್ಯಕ್ರಿಯೆಗೆ ಹಾಜರಾಗಲು ಕೋರ್ಟ್ ಅನುಮತಿ ನೀಡುವ ಮೊದಲೇ, ಕುಟುಂಬಸ್ಥರು ತಾಯಿ ಮಂಜುಳಮ್ಮ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಹೀಗಾಗಿ ನಾನು ಹೋಗಲ್ಲ ಅಂತ ಆರೋಪಿ ರಾಘವೇಂದ್ರ ಹೇಳಿದ್ದಾನೆ.
ಹೀಗಾಗಿ ಹೋಗಲ್ಲ ಅಂದಿರೋದನ್ನ ರೈಟಿಂಗ್ಸ್ ಮೂಲಕ ಬರೆಸಿಕೊಂಡಿರೋ ಜೈಲಾಧಿಕಾರಿಗಳು, ಡಾಕ್ಯುಮೆಂಟ್ ಮಾಡಿದ್ದಾರೆ. ಕೊಲೆ ಕೇಸ್ ನಲ್ಲಿ ಜೈಲಿನಲ್ಲಿರುವ ಆರೋಪಿ ರಘು ಗೆ ತಾಯಿಯ ಮುಖ ನೋಡಲು ಕೋರ್ಟ್ ಅವಕಾಶ ಕೊಟ್ಟರೂ, ವಿಧಿ ಅವಕಾಶ ಕೊಟ್ಟಿಲ್ಲ.