• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕೋರ್ಟ್‌ನ ಅಧಿಕೃತ ಇಮೇಲ್‌ಗಳಲ್ಲಿ ಮೋದಿ ಭಾವಚಿತ್ರ: ಸುಪ್ರೀಂ ಕೋರ್ಟ್ ತರಾಟೆಯನಂತರ ಕೈಬಿಟ್ಟ NIC!

Any Mind by Any Mind
September 25, 2021
in ದೇಶ
0
ಕೋರ್ಟ್‌ನ ಅಧಿಕೃತ ಇಮೇಲ್‌ಗಳಲ್ಲಿ ಮೋದಿ ಭಾವಚಿತ್ರ: ಸುಪ್ರೀಂ ಕೋರ್ಟ್ ತರಾಟೆಯನಂತರ ಕೈಬಿಟ್ಟ NIC!
Share on WhatsAppShare on FacebookShare on Telegram

ಸುಪ್ರೀಂ ಕೋರ್ಟ್ ಆಕ್ಷೇಪಣೆಯ ನಂತರ ಸರ್ವೋಚ್ಚ ನ್ಯಾಯಾಲಯದ ಅಧಿಕೃತ ಇಮೇಲ್‌ಗಳ ಕೆಳ ಅಂಚಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಮತ್ತು ‘ಸಬ್ಕಾ ಸಾಥ್,  ಸಬ್ಕಾ ವಿಕಾಸ್’ ಎಂಬ ಘೋಷಣೆ ಇರುವ  ಜಾಹೀರಾತು ಬ್ಯಾನರ್‌ಗಳನ್ನು ರಾಷ್ಟ್ರೀಯ ಮಾಹಿತಿ ಕೇಂದ್ರವು (NIC) ತೆಗೆದು ಹಾಕಿದೆ.

ADVERTISEMENT

ಆಗಸ್ಟ್ 15,2021 ವೇಳೆಗೆ ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷಗಳಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ “ಆಜಾದ್ ಕಾ ಅಮೃತ್  ಮಹೋತ್ಸವ್” ಮತ್ತು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ಘೋಷಣೆ ಇರುವ ಜಾಹಿರಾತು ಬ್ಯಾನರ್ ಅನ್ನು ಎಲ್ಲಾ ಕಡೆ ಹಾಕಿತ್ತು. ಈ ಬ್ಯಾನರ್ ಅನ್ನು ಸುಪ್ರೀಂಕೋರ್ಟ್ ನ ಅಧಿಕೃತ ಇಮೇಲ್‌ಗಳ ಕೆಳ ಅಂಚಿನಲ್ಲಿ ಕೂಡ ಹಾಕಿದ್ದು ಸರ್ವೋಚ್ಚ ನ್ಯಾಯಾಲಯದ ಕಣ್ಣು ಕೆಂಪಾಗಿಸಿದೆ.

ಹೌದು, ಸುಪ್ರೀಂಕೋರ್ಟ್ಗೆ ಇಮೇಲ್ ಸೇವೆಯನ್ನು ಒದಗಿಸುವ ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಮೋದಿ ಭಾವಚಿತ್ರ ಮತ್ತು ಘೋಷನೆ ಇರುವ ಬ್ಯಾನರ್ ಒಂದನ್ನು ಇಮೇಲ್ ಅಂಚಿನಲ್ಲಿ ಹಾಕಲಾಗಿತ್ತು. ಈ ಕುರಿತು ಪ್ರಶ್ನೆ ಎತ್ತಿರುವ ಸುಪ್ರೀಂಕೋರ್ಟ್ ತಕ್ಷಣವೇ ಈ ಚಿತ್ರವನ್ನು ತೆಗೆದು ಹಾಕಿ ಎಂದು ಆದೇಶಿಸಿದೆ. ಬದಲಾಗಿ ಭಾರತದ ಸರ್ವೋಚ್ಚ ನ್ಯಾಯಾಲಯದ ಭಾವಚಿತ್ರವನ್ನು ಸೂಚಿಸಿದೆ.

ಸುಪ್ರೀಂಕೋರ್ಟ್ ವಕೀಲರ ಅಡ್ವೊಕೇಟ್ಸ್- ಅನ್- ರೆಕಾರ್ಡ್- ಅಸೋಸಿಯೇಶನ್ ವಾಟ್ಸ್ ಆಪ್ ಗ್ರೂಪಿನಲ್ಲಿ ಮೋದಿ ಇರುವಂತಹ ಜಾಹೀರಾತು ಹರಿದಾಡಿದೆ. ಈ ಕುರಿತು ಒರ್ವ ವಕೀಲ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದ್ದು, ಸರ್, ನಾನು ಪ್ರಧಾನ ಮಂತ್ರಿ ಇರುವ ಜಾಹಿರಾತಿನ ಒಂದು ಸ್ಕ್ರೀನ್ ಶಾಟ್ ಅನ್ನು ನಮ್ಮ ವಕೀಲರ ವಾಟ್ಸ್ ಆಪ್ ಗ್ರೂಪ್‌ನಿಂದ ಪಡೆದುಕೊಂಡಿದ್ದೇನೆ, ಸುಪ್ರೀಂಕೋರ್ಟ್ ಒಂದು independent organ ಇದು ಸರ್ಕಾರದ ಭಾಗವಲ್ಲ ಆದರಿಂದ ಈ ಕುರಿತು ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದರು.

ತಕ್ಷಣವೇ ಉತ್ತರಿಸಿದ ಸುಪ್ರೀಂಕೋರ್ಟ್ ನ ಪ್ರಧಾನ ಕಾರ್ಯದರ್ಶಿ ಸಂಜೀವ್ ಎಸ್ ಕಲ್ಗಾಂವ್ಕರ್, ಇಂತಹ ಘಟನೆಗಳ ಬಗ್ಗೆ ಇನ್ನೂ ತಿಳಿದಿಲ್ಲ ಎಂದು ಹೇಳಿದ್ದರು.  ಅಡ್ವೊಕೇಟ್ಸ್- ಅನ್- ರೆಕಾರ್ಡ್- ಅಸೋಸಿಯೇಶನ್ ಕಾರ್ಯದರ್ಶಿ ಜೋಸೆಫ್ ಅವರು, ವಕೀಲರಿಂದ ಈ ತರಹದ ಔಪಚಾರಿಕ ದೂರ ಬಂದ ನಂತರ ಕ್ರಮ ಯೋಜಿಸಲಾಗುವುದು ಎಂದು ಹೇಳಿದ್ದರು.

ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅರ್ಹವಾದ ವಕೀಲರು ಅಡ್ವೊಕೇಟ್ಸ್-ಆನ್-ರೆಕಾರ್ಡ್ (AoR) ಮಾತ್ರ ಪ್ರಕರಣ ದಾಖಲಿಸಬಹುದು. ರಿಜಿಸ್ಟ್ರಿ ನ್ಯಾಯಾಲಯದ ಬ್ಯಾಕ್-ಎಂಡ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ  ಮತ್ತು ಪ್ರಕರಣಗಳ ಸ್ಥಿತಿಯ ಕುರಿತು AoR ಗಳೊಂದಿಗೆ ಸಂವಹನ ನಡೆಸುತ್ತದೆ.

ಇಮೇಲ್‌ಗಳಲ್ಲಿನ ಜಾಹೀರಾತುಗಳ ಬಗ್ಗೆ ಹಿರಿಯ ವಕೀಲ ಚಂದರ್ ಉದಯ್ ಸಿಂಗ್ ಕೇಳಿದಾಗ, ಇದು “ಅತ್ಯಂತ ಆಕ್ಷೇಪಾರ್ಹ” ಎಂದು ವಿವರಿಸಿದ್ದಾರೆ. “ಸುಪ್ರೀಂ ಕೋರ್ಟ್ ಮತ್ತು ಭಾರತದ ಎಲ್ಲಾ ಇತರ ನ್ಯಾಯಾಲಯಗಳು  ಸರ್ಕಾರಿ ಕಚೇರಿಗಳಲ್ಲ ಮತ್ತು ಸರ್ಕಾರದ ಪ್ರಚಾರ ಯಂತ್ರವಾಗಿ ಬಳಸಲು ಉದ್ದೇಶಿಸಿಲ್ಲ” ಎಂದು ಸಿಂಗ್ ಹೇಳಿದ್ದಾರೆ.

ಈ ಬಗೆಗಿನ ವಿವರಣಾ ಪ್ರಕಟಣೆಯಲ್ಲಿ ಸುಪ್ರೀಂ ಕೋರ್ಟ್, “ಭಾರತದ ಸುಪ್ರೀಂ ಕೋರ್ಟ್ನ ಅಧಿಕೃತ ಇಮೇಲ್ಗಳ ಕೆಳಅಂಚಿನಲ್ಲಿ ನ್ಯಾಯಾಂಗದ ಕಾರ್ಯಕ್ಕೆ  ಯಾವುದೇ ರೀತಿಯಲ್ಲಿಯೂ  ಸಂಬಂಧಪಡದ ಚಿತ್ರವೊಂದನ್ನು ಅಳವಡಿಸಲಾಗಿರುವುದನ್ನು ಸುಪ್ರೀಂ ಕೋರ್ಟ್ ರೆಜಿಸ್ಟ್ರಿಗೆ ನಿನ್ನೆ ತಡ ಸಂಜೆ ಗಮನಕ್ಕೆ ತರಲಾಯಿತು. ಸುಪ್ರೀಂ ಕೋರ್ಟ್ನಿಂದ ಕಳುಹಿಸಲಾಗುವ ಇಮೇಲ್ಗಳಿಂದ ಆ ಚಿತ್ರವನ್ನು ಕೈಬಿಡುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಇಮೇಲ್ ಸೇವೆಯನ್ನು ಒದಗಿಸುವ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ನಿರ್ದೇಶಿಸಲಾಯಿತು,” ಎಂದು ಮಾಹಿತಿ ನೀಡಿದೆ.

ಇದಲ್ಲದೆ ಇಮೇಲ್ಗಳಲ್ಲಿ ಸುಪ್ರೀಂ ಕೋರ್ಟ್ನ ಚಿತ್ರವನ್ನು ಬಳಸುವಂತೆಯೂ ಸಹ ಸರ್ವೋಚ್ಚ ನ್ಯಾಯಾಲಯ ಎನ್ಐಸಿಗೆ ಸೂಚನೆ ನೀಡಿದ್ದು ಅದರ ಪಾಲನೆಯನ್ನು ಮಾಡಲಾಗಿದೆ.

Tags: BJPCongress PartyNICಕೋವಿಡ್-19ನರೇಂದ್ರ ಮೋದಿಬಿಜೆಪಿರಾಷ್ಟ್ರೀಯ ಮಾಹಿತಿ ಕೇಂದ್ರಸುಪ್ರೀಂ ಕೋರ್ಟ್
Previous Post

ಫ್ರಾನ್ಸ್‌ನ ಐವರು ಸಚಿವರ ಫೋನ್‌ಗಳಲ್ಲಿ ಪೆಗಾಸಸ್‌ ಕುರುಹು ಪತ್ತೆ

Next Post

ರಮಣ ಅವರು CJI ಆಗಿ ಅಧಿಕಾರ ವಹಿಸಿಕೊಂಡ ನಂತರ ನ್ಯಾಯಾಂಗದ ಬುನಾದಿಯು ಭದ್ರಗೊಂಡಿದೆ: ಸಿಜೆ ಡಾ. ಎಸ್ ಮುರಳೀಧರ್

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
ರಮಣ ಅವರು CJI ಆಗಿ ಅಧಿಕಾರ ವಹಿಸಿಕೊಂಡ ನಂತರ ನ್ಯಾಯಾಂಗದ ಬುನಾದಿಯು ಭದ್ರಗೊಂಡಿದೆ: ಸಿಜೆ ಡಾ. ಎಸ್ ಮುರಳೀಧರ್

ರಮಣ ಅವರು CJI ಆಗಿ ಅಧಿಕಾರ ವಹಿಸಿಕೊಂಡ ನಂತರ ನ್ಯಾಯಾಂಗದ ಬುನಾದಿಯು ಭದ್ರಗೊಂಡಿದೆ: ಸಿಜೆ ಡಾ. ಎಸ್ ಮುರಳೀಧರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada