ಪ್ರಧಾನಿ ನರೇಂದ್ರ ಮೋದಿ ತಿಂಗಳಿಗೊಮ್ಮೆ ನಡೆಸುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾಷಾ ವೈವಿಧ್ಯಮಯತೆ ಬಗ್ಗೆ ಮಾತನಾಡುವ ಸಮಯದಲ್ಲಿ ಕರ್ನಾಟಕ ಮೂಲದ ಬಿದ್ಯಾರ್ಥಿನಿಯನ್ನು ಹಾಡಿ ಹೊಗಳಿದ್ದಾರೆ.
ಇದೇ ತಿಂಗಳು ಪ್ರಕಟವಾದ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಕಲ್ಪನಾ ಎಂಬ ವಿದ್ಯಾರ್ಥಿನಿಯು ಕನ್ನಡ ವಿಷಯದಲ್ಲಿ ಉತ್ತಮ ಅಂಕ ಗಳಿಸಿದ್ದನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಈ ಹುಡುಗಿಯ ವಿಶೇಷತೆ ಏನೆಂದರೆ ಕಳೆದ ಮೂರು ತಿಂಗಳಲ್ಲಿ ಆಕೆ ಕನ್ನಡ ಕಲಿತು 100ಕ್ಕೆ 92 ಅಂಕಗಳನ್ನು ಗಳಿಸಿದ್ದಾರೆ ಎಂದು ಹೇಳಿದ್ದಾರೆ. ಆಕೆಗೆ ಇತ್ತೀಚಿನವರೆಗು ಕನ್ನಡ ತಿಳಿದಿರಲಿಲ್ಲ. ಆದರೆ, ಆಕೆ ಮೂರೇ ತಿಂಗಳಲ್ಲಿ ಕನ್ನಡ ಕಲಿತದ್ದು ಹೆಮ್ಮೆಯ ಸಂಗತಿ ಎಂದಿದ್ದಾರೆ.






