251 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಒಟ್ಟು 987 ಉದ್ಯೋಗಾಕಾಂಕ್ಷಿಗಳಿಂದ ನೋಂದಣಿ
ಕಲಘಟಗಿ (ಧಾರವಾಡ ಜಿಲ್ಲೆ) ಜನವರಿ 18: ಇಲ್ಲಿನ ಜನತಾ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳ ಅಭೂತಪೂರ್ವವಾಗಿ ಯಶಸ್ವಿಯಾಯಿತು.
ಒಟ್ಟು 987 ಅಭ್ಯರ್ಥಿಗಳು ಈ ಮೇಳದಲ್ಲಿ ಉದ್ಯೋಗ ಕೋರಿ ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ ಅಂತಿಮ ಹಂತಕ್ಕೆ 1027 ಮಂದಿ ಆಯ್ಕೆಗೊಂಡಿದ್ದಾರೆ. (ಕೆಲವು ಅಭ್ಯರ್ಥಿಗಳು ಹಲವು ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ) ಒಟ್ಟು 251 ಮಂದಿಗೆ ನೇಮಕಾತಿ ಪತ್ರವನ್ನು ನೀಡಲಾಗಿದೆ. ಮೇಳದ ಇನ್ನೂ ಒಂದು ವಿಶೇಷ ಎಂದರೆ 43 ವಿಕಲಚೇತನರು ಭಾಗವಹಿಸಿದ್ದು.
50 ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿದ್ದವು. 4000
ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಮೇಳದಲ್ಲಿದ್ದವು. ಎಸ್‌ಎಸ್‌ಎಲ್‌ಸಿ, ಪಿಯು, ಪದವಿ, ಡಿಪ್ಲೊಮಾ, ಪ್ಯಾರಾಮೆಡಿಕಲ್, ಫಾರ್ಮಸಿ, ಸ್ನಾತಕೋತ್ತರ ಪದವೀಧರರು, ವಿಶೇಷ ಚೇತನರು ಹಾಗೂ ತೃತೀಯ ಲಿಂಗಿಗಳು ಭಾಗವಹಿಸಿದ್ದರು.
ಚಾಲನೆ ನೀಡಿದ ಸಚಿವ ಲಾಡ್
ಮೇಳದ ರೂವಾರಿ, ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಧನ್ಯವಾದ ತಿಳಿಸಿದ ಅಭ್ಯರ್ಥಿಗಳು
ಇಂತಹ ಉದ್ಯೋಗ ಮೇಳದಿಂದ ಸಾಕಷ್ಟು ಪ್ರಯೋಜನವಾಯಿತು. ಉದ್ಯೋಗ ಅರಸುವ ಅಭ್ಯರ್ಥಿಗಳಿಗೆ ಕಂಪನಿಗಳೇ ನಮ್ಮ ಬಳಿ ಬಂದು ಕೆಲಸ ನೀಡುವುದು ಅತ್ಯಂತ ಖುಷಿ ನೀಡುವ ಸಂಗತಿ. ಸಂತೋಷ್ ಲಾಡ್ ಅವರಿಗೆ ಧನ್ಯವಾದಗಳು ಎಂದು ಉದ್ಯೋಗ ಪಡೆದುಕೊಂಡ ಅಭ್ಯರ್ಥಿಯೊಬ್ಬರು ಹೇಳಿದರು.