ಬಳ್ಳಾರಿ : ಹಾಲಿ ಸರ್ಕಾರವೊಂದು ಜನರ ವಿಶ್ವಾಸ ಕಳೆದುಕೊಂಡರೆ ಅದರ ಪರಿಣಾಮ ಏನಾಗುತ್ತೆ ಅನ್ನೋದು ಇಂದಿನ ಮತ ಎಣಿಕೆ ಕಾರ್ಯದಲ್ಲಿ ಒಂದೊಂದಾಗಿಯೇ ಬಯಲಾಗುತ್ತಿದೆ. ಬಿಜೆಪಿಯ ಗೆಲ್ಲುವ ಕುದುರೆಗಳು ಒಂದೊಂದಾಗಿಯೇ ಹಿನ್ನಡೆ ಸಾಧಿಸುತ್ತಿವೆ. ಇತ್ತ ಸಚಿವ ಬಿ . ಶ್ರೀರಾಮುಲು ಕೂಡ 22 ಸಾವಿರ ಮತಗಳ ಅಂತದಲ್ಲಿ ಹಿನ್ನಡೆ ಸಾಧಿಸಿದ್ದಾರೆ.
ಬಳ್ಳಾರಿ ಗ್ರಾಮೀಣ ಅಭ್ಯರ್ಥಿ ಎನಿಸಿರುವ ಬಿ. ಶ್ರೀರಾಮುಲುಗೆ ಗೆಲುವು ಹಂತ ಹಂತವಾಗಿ ದೂರವಾಗುವಂತೆ ಕಾಣುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಬಿ. ನಾಗೇಂದ್ರ ಮುನ್ನಡೆ ಸಾಧಿಸಿದ್ದಾರೆ.
ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಬಿಜೆಪಿ ಪ್ರಬಲ ನಾಯಕ ಶ್ರೀರಾಮುಲು ಹಿನ್ನಡೆ ಸಾಧಿಸಿರೋದು ಆತಂಕಕ್ಕೆ ಕಾರಣವಾಗಿದೆ. ಇನ್ನೂ ಹಲವು ಸುತ್ತುಗಳ ಮತ ಎಣಿಕೆ ಬಾಕಿ ಇದ್ದು ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆಯಿದೆ.