ಮುಖದ ಅಂದವನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚು ಕಾಳಜಿಯನ್ನ ವಹಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನ ಸಲೂನ್ಗಳಿಗೆ ಹೋಗಿ ಪೆಡಿಕ್ಯೂರನ್ನ ಮಾಡಿಸ್ತಾರೆ .ಇದರಿಂದ ಕಾಲುಗಳಲ್ಲಿರುವಂತಹ ಡೆಡ್ ಸ್ಕಿನ್ ಅನ್ನ ತೆಗೆದು ಹಾಕುತ್ತದೆ, ಕೊಳೆ ಹೋಗುತ್ತದೆ, ಉಗುರುಗಳ ಒಳಗಿರುವ ಕೊಳೆಯನ್ನ ತೆಗೆದು ಚಂದನವಾದ ಉಗುರು ನಿಮ್ಮದಾಗುತ್ತದೆ ಹಾಗೂ ಕಾಲಲ್ಲಿ ಟಾನ್ ಆಗಿದ್ದರೂ ಕೂಡ ರಿಮೂವ್ ಮಾಡ್ತಾರೆ. ಈ ಪೆಡಿಕ್ಯೂರ್ ಮಾಡಿಸಲು ದುಬಾರಿ ಖರ್ಚು ಮಾಡಬೇಕಾಗುತ್ತದೆ . ಬದಲಿಗೆ ದುಬಾರಿ ಖರ್ಚಿಲ್ಲದೆ ಮನೆಯಲ್ಲೇ ಸಿಂಪಲ್ಲಾಗಿ ಹಾಗೂ ನೀಟಾಗಿ ಪೆಡಿಕ್ಯೂರ್ ಮಾಡಿಕೊಳ್ಳುವುದು ಹೇಗೆ ಅನ್ನೋದನ್ನ ಬಗ್ಗೆ ಇಲ್ಲಿದೆ ಮಾಹಿತಿ.

- ಪಾದಗಳನ್ನು ನೆನೆಸಿ
ಪೆಡಿಕ್ಯೂರ್ ಮಾಡಿಕೊಳ್ಳಲು ಮೊದಲಿಗೆ ಕೆಲವು ನಿಮಿಷಗಳ ಕಾಲ ಪಾದಗಳನ್ನು ನೆನೆಸಬೇಕಾಗುತ್ತದೆ ಹಾಗಾಗಿ ನೀವು ಒಂದು ಬಕೇಟ್ ಉಗುರು ಬೆಚ್ಚ ನೀರಿಗೆ ಬೇಕಿಂಗ್ ಸೋಡಾ ಅಥವಾ ಎಪ್ಸಮ್ ಸಾಲ್ಟ್ ಅನ್ನು ಒಂದು ಟೇಬಲ್ ಸ್ಪೂನ್ ಅಷ್ಟು ಹಾಕಿ..ಹಾಗೂ ಅದರೊಳಗೆ ನಿಮ್ಮ ಕಾಳುಗಳನ್ನ ೫-೧೦ ನಿಮಿಷಗಳ ಕಾಲ ಹಾಗೆಬಿಡಿ.

- ಸ್ಕ್ರಬ್ ರೆಮಿಡೀಸ್
ನಿಮ್ಮ ಪಾದಗಳನ್ನು ಕೆಲವು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿದ ನಂತರ ಸ್ಕ್ರಬ್ ಮಾಡಿಕೊಳ್ಳಲು ಸಿಂಪಲ್ ರೆಮಿಡಿನ ಫಾಲೋ ಮಾಡಿ.
ಸಕ್ಕರೆ ಸ್ಕ್ರಬ್:
ಎರಡು ಟೇಬಲ್ ಸ್ಪೂನ್ ಅಷ್ಟು ಸಕ್ಕರೆಗೆ ಒಂದು ಟೇಬಲ್ ಸ್ಪೂನ್ ಅಷ್ಟು ಆಲಿವ್ ಆಯಿಲ್ ಅನ್ನ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಹಾಗೂ ಅದಕ್ಕೆ ನಿಂಬೆ ರಸ ಬೆರೆಸಿ ನಂತರ ಕಾಲುಗಳಿಗೆ ಸ್ಕ್ರಬ್ ಮಾಡಿಕೊಳ್ಳಿ.
ಉಪ್ಪಿನ ಸ್ಕ್ರಬ್:
ಮೂರು ಟೇಬಲ್ ಸ್ಪೂನ್ ಅಷ್ಟು ಉಪ್ಪು ಒಂದು ಟೇಬಲ್ ಸ್ಪೂನ್ ಅಷ್ಟು ಆಲಿವ್ ಆಯಿಲ್ ಅನ್ನ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಹಾಗೂ ಅದಕ್ಕೆ ನಿಂಬೆ ರಸ ಬೆರೆಸಿ ನಂತರ ಕಾಲುಗಳಿಗೆ ಸ್ಕ್ರಬ್ ಮಾಡಿಕೊಳ್ಳಿ.

- ಡೆಡ್ ಸ್ಕಿನ್ ತೆಗೆಯುವುದು ಹೇಗೆ
ನಿಂಬೆ ರಸ ಮತ್ತು ಆಲಿವ್ ಎಣ್ಣೆ
ಹೊರಪೊರೆಗಳನ್ನು ಮೃದುಗೊಳಿಸಲು ನಿಂಬೆ ರಸ ಮತ್ತು ಆಲಿವ್ ಎಣ್ಣೆಯನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ. ನಂತರ ಪಾದಗಳಿಗೆ ಹಚ್ಚುವುದರಿಂದ ಡೆಡ್ ಸ್ಕಿನ್ ರಿಮೂವ್ ಮಾಡಬಹುದು
ತೆಂಗಿನ ಎಣ್ಣೆ ಮತ್ತು ಸಕ್ಕರೆ
ಹೊರಪೊರೆಗಳನ್ನು ಎಫ್ಫೋಲಿಯೇಟ್ ಮಾಡಲು ಮತ್ತು ತೇವಗೊಳಿಸಲು ತೆಂಗಿನ ಎಣ್ಣೆಯನ್ನು ಸಕ್ಕರೆಯೊಂದಿಗೆ ಮಿಶ್ರಣ ಮಾಡಿ.ಚೆನ್ನಾಗಿ ಅಪ್ಲೈ ಮಾಡಿ.

- ಕೊನೆಯಲ್ಲಿ ನ್ಯಾಚುರಲ್ ಮಾಯಿಶ್ಚರೈಸರ್
ತೆಂಗಿನ ಎಣ್ಣೆ
ತೆಂಗಿನ ಎಣ್ಣೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಪಾದಗಳಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ ಚರ್ಮವನ್ನು ತೇವಗೊಳಿಸಲು ಮತ್ತು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.