ಇಂದು ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ (Action prince druva sarja) ನಟನೆಯ ಬಹುನಿರೀಕ್ಷಿತ ಮಾರ್ಟಿನ್ (Martin) ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದೆ. 3000 ಸ್ಕಿನ್‌ಗಳಲ್ಲಿ ಮಾರ್ಟಿನ್ ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ರಿಲೀಸ್ ಆಗ್ತಾ ಇದೆ. ಎಪಿ ಅರ್ಜುನ್ (AP arjun) ನಿರ್ದೇಶನ, ಉದಯ್ ಕೆ ಮೆಹ್ರಾ (Uday k mehtha) ನಿರ್ಮಾಣದ ಮಾರ್ಟಿನ್ ಕನ್ನಡದ ಬಹು ಕೋಟಿ ವೆಚ್ಚದ ಮೊದಲ ಸಿನಿಮಾ.
ಹೀಗಾಗಿ ಇಂದು ಧೃವ ಸರ್ಜಾ ಮನೆ ಬಳಿ ಗೋವುಗಳಿಗೆ ಬಾಳೆಹಣ್ಣು, ಬೆಲ್ಲ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಈ ಬಳಿಕ ಮನೆಯಿಂದ ಉಮಾ ಮಹೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದು, ನಂತರ ಜಯನಗರ 4th ಬ್ಲಾಕ್ ಗಣೇಶನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನರ್ತಕಿ ಥಿಯೇಟರ್‌ನಲ್ಲಿ (Nartaki theater) ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ಇನ್ನು ಈ ಮಾರ್ಟಿನ್ ಸಿನಿಮಾಗೆ ಸಾಕಷ್ಟು ತೊಂದರೆ ಎದುರಾಗಿದೆ. ಅಭಿಮಾನಿಗಳನ್ನೇ ನಾನು
ನಂಬಿರೋದು. ಆಯುಧ ಪೂಜೆ ದಿನವೇ ಮಾರ್ಟಿನ್ ಬಿಡುಗಡೆಯಾಗಿದೆ. ಸಿನಿಮಾದಲ್ಲೂ ಆಯುಧಗಳ ಅಬ್ಬರ ಜೋರಾಗಿದೆ, ಸಿನಿಮಾದ ಬಗ್ಗೆ ಈಗಾಗಲೇ ಒಳ್ಳೆ ರಿವ್ಯೂ ಸಿಕ್ಕಿದೆ ಅಂತ ಸಂತಸ ವ್ಯಕ್ತಪಡಿಸಿದ್ದಾರೆ