ಮಾವಿನ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ,ಪ್ರತಿಯೊಬ್ಬರೂ ಕೂಡ ಬಾಯಿ ಚಪ್ಪರಿಸಿಕೊಂಡು ಈ ಹಣ್ಣನ್ನ ತಿಂತಾರೆ ,ಬೇಸಿಗೆಗಾಲ ಬಂತು ಅಂದ್ರೆ ಮಾವಿನ ಹಣ್ಣು ಗೆ ಕಾಯ್ತಾ ಇರ್ತೀವಿ,ಮಾವಿನ ಕಾಯಿಗೆ ಉಪ್ಪು ಕಾರ ಬೆರೆಸಿ ತಿಂದ್ರೆ ಆಹಾ ಅದ್ರ ರುಚಿನೆ ಬೇರೆ ಲೆವೆಲ್.. ಇನ್ನು ಹಣ್ಣಾದ ಮೇಲೆ ಅಬ್ಬಬ್ಬ ಕೇಳೋದೇ ಬೇಡ ,ಇದರ ರುಚಿಯನ್ನ ನಾವು ವರ್ಣನೆ ಮಾಡಲು ಸಾಧ್ಯವಿಲ್ಲ,ರುಚಿ ಮಾತ್ರ ಅಲ್ಲ ಅದರ ಸುಗಂಧ ಕೂಡ ಅದ್ಭುತ. ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ವಿಧದ ಮಾವಿನ ಹಣ್ಣುಗಳದ್ದೆ ಹವಾ..
![](https://pratidhvani.com/wp-content/uploads/2024/06/IMG_7829.jpeg)
ಹಣ್ಣುಗಳ ರಾಜ ಅಂತಾನೇ ಫೇಮಸ್ ಆಗಿರುವ ಈ ಮಾವಿನ ಹಣ್ಣು ರುಚಿ ಗಮ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು.ಮಾತ್ರವಲ್ಲದೆ ಮಾವಿನ ಹಣ್ಣಿನ ಫೇಸ್ ಪ್ಯಾಕ್ ನಮ್ಮ ತ್ವಜೆಯನ್ನು ಇನ್ನಷ್ಟು ಬೆನಿಫಿಟ್ಸ್ ಇದೆ. ಏನಪ್ಪ ಆ ಪ್ರಯೋಜನಗಳು ಅನ್ನೋದ್ರ ಡೀಟೇಲ್ಸ್ ಹೀಗಿದೆ.
ಮೊಡವೆಗಳಿಗೆ ಒಳ್ಳೆಯ ಮದ್ದು
ಮಾವಿನಹಣ್ಣಿನ ತಿರುಳನ್ನ ಎರಡು ಸ್ಪೂನ್ ಅಷ್ಟು ಮಾವಿನಹಣ್ಣಿನ ತಿರುಳಿಗೆ ಅರ್ಧ ಸ್ಪೂನ್ ಅಷ್ಟು ಅಕ್ಕಿ ಹಿಟ್ಟು ಒಂದು ಸ್ಪೂನ್ ಅಷ್ಟು ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣವನ್ನು ಮಾಡಿ ಈ ಮಿಶ್ರಣವನ್ನು ಮೊಡವೆಗಳಾದ ಜಾಗದಲ್ಲಿ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ಫೇಸ್ ಮಾಸ್ ಮಾಡುವುದರಿಂದ ಮೊಡವೆಗಳು ಬೇಗನೆ ನಿವಾರಣೆ ಆಗುತ್ತದೆ ಹಾಗೂ ಮೊಡವೆಯಿಂದಾದ ಕಲೆಗಳು ಇದ್ದರೆ ಅವು ಕೂಡ ಹೋಗುತ್ತವೆ.
![](https://pratidhvani.com/wp-content/uploads/2024/06/IMG_7828.jpeg)
ತಪ್ಪು ಕಲೆಗಳು
ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಅಂಶ ಇರುವುದರಿಂದ ನಮ್ಮ ತ್ವಜೆಗೆ ತುಂಬಾನೇ ಒಳ್ಳೆಯದು ಇನ್ನು ಮಾವಿನ ಹಣ್ಣಿನ ತಿರುಳು ಎರಡು ಟೇಬಲ್ ಸ್ಪೂನ್ ಅಷ್ಟು ಅದರ ಜೊತೆಗೆ ಸ್ವಲ್ಪ ಬಾದಾಮಿ ಎಣ್ಣೆ ಹಾಗೂ ಒಂದು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪ ಚಿಟಿಕೆ ಅರಿಶಿಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಫೇಸ್ ಪ್ಯಾಕ್ ಹಾಗೆ ಬಳಸಿ ನಂತರ ಅರ್ಧ ಗಂಟೆ ಬಿಟ್ಟು ಚೆನ್ನಾಗಿ ಸ್ಕ್ರಬ್ ಮಾಡಿ ಬೆಚ್ಚಗಿನ ನೀರಿನಿಂದ ಮುಖವನ್ನ ತೊಳೆಯುವುದರಿಂದ ಮುಖದಲ್ಲಿರುವಂತಹ ಕಪ್ಪು ಕಲೆಗಳು ತಕ್ಷಣಕ್ಕೆ ಮಾಯವಾಗುತ್ತವೆ.
![](https://pratidhvani.com/wp-content/uploads/2024/06/IMG_7826.jpeg)
ಆಯ್ಲಿ ಸ್ಕಿನ್
ಒಂದು ಟೇಬಲ್ ಸ್ಪೂನ್ ಅಷ್ಟು ಮಾವಿನಹಣ್ಣಿನ ತಿರುಳು ಅದಕ್ಕೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಅಕ್ಕಿ ಹಿಟ್ಟು, ಅರ್ಧ ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪ ಹಾಗೂ ಒಂದು ಟೇಬಲ್ ಸ್ಪೂನ್ ನಷ್ಟು ಹಾಲನ್ನ ಹಾಕಿ ಚೆನ್ನಾಗಿ ಮಿಶ್ರಣವನ್ನು ಮಾಡಿ ಆ ಪೇಸ್ಟ್ ಅನ್ನ ನಿಮ್ಮ ಮುಖಕ್ಕೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಮುಖವನ್ನ ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಮುಖದಲ್ಲಿ ಇರುವಂತಹ ಆಯಿಲಿನಸ್ ಕಡಿಮೆಯಾಗುತ್ತದೆ ಅದರಲ್ಲೂ ಇದು ಆಯ್ಲಿಫೇಸ್ ಇದ್ದವರಿಗೆ ತುಂಬಾನೇ ಒಳ್ಳೆಯದು ಹಾಗೂ ಡ್ರೈ ಫೇಸ್ ಇದ್ದವರಿಗೂ ಕೂಡ ಉತ್ತಮ.
![](https://pratidhvani.com/wp-content/uploads/2024/06/IMG_7827.jpeg)
ಒಟ್ಟಿನಲ್ಲಿ ಮಾವಿನಹಣ್ಣು ತಿನ್ನಲು ಮಾತ್ರ ರುಚಿಯಿಲ್ಲದೆ ಆರೋಗ್ಯಕ್ಕೂ ಹಾಗೂ ತುಂಬಾನೇ ಒಳ್ಳೆಯದು ಹಾಗಾಗಿ ಮಾವಿನಹಣ್ಣಿನ ಸೀಸನ್ ನಲ್ಲಿ ತಪ್ಪದೇ ತಿನ್ನಿ ಎಂಜಾಯ್ ಮಾಡಿ.