ಬಾಲಿವುಡ್ ನಟ ಸೈಫ್ ಅಲಿ ಖಾನ್‌ರ (Bollywood actor Saif Ali khan) ಮನೆಗೆ ದುಷ್ಕರ್ಮಿಯೊಬ್ಬ ನುಗ್ಗಿ, ನಟನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಈಗ ರೋಚಕ ತಿರುವು ಸಿಕ್ಕಿದೆ.
ನಟ ಸೈಫ್ ಅಲಿ ಖಾನ್ ಮನೆಯಿಂದ FSL ಸಂಗ್ರಹಿಸಿರುವ ಬೆರಳುಚ್ಚಗಳು, ಆರೋಪಿ ಎಂದು ಬಂಧಿಸಲಾಗಿರುವ ಶರೀಫುಲ್ ಇಸ್ಲಾಂ (Sharif ullah islam) ಬೆರಳಚ್ಚುಗಳಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಪ್ರಕರಣದ ತನಿಖೆಯಲ್ಲಿ ತಿಳಿದುಬಂದಿದೆ.
ಮುಂಬೈ ಪೊಲೀಸರು (Mumbai police) ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಸಿಕ್ಕಿರುವ ಬೆರಳಚ್ಚುಗಳನ್ನು ಸಿಐಡಿಗೆ ಕಳುಹಿಸಿದ್ದರು. ಆದ್ರೆ ವರದಿಯಲ್ಲಿ ಶರೀಫುಲ್ ಇಸ್ಲಾಂ ಅವರ ಬೆರಳಚ್ಚಿಗೆ ಹೊಂದಿಕೆಯಾಗುತ್ತಿಲ್ಲ ಎಂದು ದೃಢಪಟ್ಟಿದೆ.
ಹೀಗಾಗಿ ಈ ಕೃತ್ಯದ ಹಿಂದೆ ಯಾರಿದ್ದಾರೆ.. ಈತ ಯಾರು.. ಅಂದು ಹಲ್ಲೆ ನಡೆದ ವೇಳೆ ಈತ ಒಬ್ಬ ಮಾತ್ರ ಇರಲಿಲ್ಲವಾ..? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವವಾಗಿದೆ.