
ಬೆಂಗಳೂರು:ಬೆಂಗಳೂರಿನ ಅಬಕಾರಿ ಕಚೇರಿಗಳನ್ನು ಪರಿಶೀಲನೆಗೆ ವಾರೆಂಟ್ ಬೆನ್ನಲ್ಲೇ ಲೋಕಾಯುಕ್ತ ದಾಳಿ ಮಾಡಿದ್ದು, ಸರ್ಕಾರಿ ಕಚೇರಿಯಲ್ಲಿ (government office) ಗಾಂಜಾ(,Marijuana) ಲಿಕ್ಕರ್ ಬಾಟಲ್ (Liquor bottle)ಪತ್ತೆಯಾಗಿವೆ. ಯಶವಂತಪುರ, ಬ್ಯಾಟರಾಯನಪುರ ಕಚೇರಿಗಳಲ್ಲಿ ಸಿಗರೇಟ್ನ ತಂಬಾಕು ತೆಗೆದು ಗಾಂಜಾ ತುಂಬಿಟ್ಟಿದ್ದು ಪತ್ತೆಯಾಗಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್, ಉಪಲೋಕಾಯುಕ್ತ ಬಿ.ವೀರಪ್ಪ ಪರಿಶೀಲನೆ (Upalokayukta B. Veerappa )ನಡೆಸಿದ್ದಾರೆ.

ಯಶವಂತಪುರ ಮತ್ತು ಬ್ಯಾಟರಾಯನಪುರ(Yeshavantpur and Batarayanpur) ಅಬಕಾರಿ ಕಚೇರಿಗಳಲ್ಲಿ ಖುದ್ದು ಪರಿಶೀಲನೆಗೆ ಲೋಕಾಯುಕ್ತ ನ್ಯಾಯಮೂರ್ತಿ.ಬಿ.ಎಸ್ ಪಾಟೀಲ್ ಅವರು ಸರ್ಚ್ ವಾರಂಟ್‌ಗಳನ್ನು ಹೊರಡಿಸಿದ್ದರು. ಯಶವಂತಪುರ ಮತ್ತು ಬ್ಯಾಟರಾಯನಪುರ ಅಬಕಾರಿ ಕಚೇರಿಗಳಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಖುದ್ದು ಪರಿಶೀಲನೆಗೆ ವಾರೆಂಟ್ ಹೊರಡಿಸಲಾಗಿತ್ತು. ಅದರಂತೆ ಸಂಜೆ ವೇಳೆ ಯಶವಂತಪುರ ಮತ್ತು ಬ್ಯಾಟರಾಯನಪುರ ಅಬಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಈ ವೇಳೆ ಸರ್ಕಾರಿ ಕಚೇರಿಗಳಲ್ಲೇ ಗಾಂಜಾ ಮತ್ತು ಮದ್ಯದ ಬಾಟಲಿಗಳು ಪತ್ತೆಯಾಗಿವೆ.