ಭಾಲ್ಕಿ: ಜಮೀನು ಸರ್ವೇ ಮಾಡಲು ರೈತನಿಂದ ಲಂಚ ಪಡೆಯುತ್ತಿದ್ದ ಭೂ ದಾಖಲೆ ಅಧೀಕ್ಷಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಭೂ ದಾಖಲೆ ಅಧೀಕ್ಷಕ ಚಿತ್ತಣ್ಣ ಪಾಟೀಲ, ಜಮೀನಿನ ಸರ್ವೆಗಾಗಿ ತಾಲ್ಲೂಕಿನ ಲಖನಗಾಂವ ಗ್ರಾಮದ ರೈತ ಸಂಜೀವಕುಮಾರ ಚಂದ್ರಕಾಂತ ಎಂಬುವರಿಂದ ಆರೋಪಿ ಚಿತ್ತಣ್ಣ 40 ಸಾವಿರ ರೂ. ಬೇಡಿಕೆ ಇಟ್ಟಿದ್ದ. ಆದರೆ ಇಷ್ಟು ಹಣ ನೀಡಲು ಒಪ್ಪದಿದ್ದ ಕಾರಣಕ್ಕೆ 15 ರೂ. ನೀಡುವಂತೆ ತಿಳಿಸಿದ್ದ.
ಅದರಂತೆ ಪಟ್ಟಣದ ಹೊರವಲಯದ ಡಾಭಾದಲ್ಲಿ ಭಾನುವಾರ ರೈತ ಸಂಜೀವಕುಮಾರ ಅವರಿಂದ 5 ಸಾವಿರ ಮುಂಗಡ ಹಣ ಪಡೆಯುವ ವೇಳೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರ ಭೂ ದಾಖಲೆ ಅಧೀಕ್ಷಕ ಚಿತ್ತಣ್ಣ ಪಾಟೀಲ ಅವರನ್ನ ವಶಕ್ಕೆ ಪಡೆದಿದ್ದಾರೆ.