• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹಾಡಿನಲ್ಲೇ ಮೋಡಿ ಮಾಡಿದ “ಲಾಫಿಂಗ್ ಬುದ್ಧ”

ಪ್ರತಿಧ್ವನಿ by ಪ್ರತಿಧ್ವನಿ
August 8, 2024
in Top Story, ಇದೀಗ, ಕರ್ನಾಟಕ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ, ಭರತ್ ರಾಜ್ ನಿರ್ದೇಶನ ಹಾಗೂ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ “ಲಾಫಿಂಗ್ ಬುದ್ಧ” ಚಿತ್ರಕ್ಕಾಗಿ ಕೆ.ಕಲ್ಯಾಣ್ ಬರೆದಿರುವ “ಎಂಥಾ ಚಂದಾನೇ” ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ವಿಷ್ಣು ವಿಜಯ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆಯ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ADVERTISEMENT

ನನ್ನ ಅಭಿನಯದ “ಹೀರೋ” ಚಿತ್ರವನ್ನು ನಿರ್ದೇಶಿಸಿದ್ದ ಭರತ್ ರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರು ಈ ಚಿತ್ರದ ಕಥೆ ಹೇಳಿದಾಗ ಮನಸ್ಸಿಗೆ ಹತ್ತಿರವಾಯಿತು. ಪ್ರಮೋದ್ ಶೆಟ್ಟಿ ಅವರನ್ನೇ ಈ ಚಿತ್ರದ ನಾಯಕನನ್ನಾಗಿ ನಾನು ಹಾಗೂ ನಿರ್ದೇಶಕರು ಆಯ್ಕೆ ಮಾಡಿದ್ದೆ‌ವು. ಈಗ ನನ್ನಿಷ್ಟದ ಸಾಹಿತಿಗಳಲ್ಲಿ ಒಬ್ಬರಾದ ಕಲ್ಯಾಣ್ ಅವರು ಬರೆದಿರುವ ಹಾಡು ಬಿಡುಗಡೆಯಾಗಿದೆ. ಆಗಸ್ಟ್ 15 ರಂದು ಟ್ರೇಲರ್ ಬಿಡುಗಡೆಯಾಗಲಿದೆ. ಆಗಸ್ಟ್ 30 ರಂದು ಚಿತ್ರ ತೆರೆಗೆ ಬರಲಿದೆ‌ ಎಂದು ನಿರ್ಮಾಪಕ ರಿಷಭ್ ಶೆಟ್ಟಿ ತಿಳಿಸಿದರು.

ಪೊಲೀಸ್ ಅವರ ಕುಟುಂಬ ಹಾಗು ಅವರ ಭಾವನೆಗಳ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಪೇದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತೇಜು ಬೆಳವಾಡಿ ಸತ್ಯವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಗಂತ್ ಮಂಚಾಲೆ ಅವರ ಪಾತ್ರ ಬಿಡುಗಡೆಯ ತನಕ ಗೌಪ್ಯವಾಗಿರುತ್ತದೆ. ಭದ್ರಾವತಿ ಹಾಗೂ ಸುತ್ತಮುತ್ತಲ್ಲಿನ ಸ್ಥಳದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ‌. ಕೆ.ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಅವರ ಸಂಕಲನ‌ ಈ ಚಿತ್ರಕ್ಕಿದೆ. ಚೀನಾ ದೇಶದಲ್ಲಿ ‘ಬುಡೈ’ ಎಂಬುವನ್ನು ಒಂದು ಚೀಲದಲ್ಲಿ ಮಕ್ಕಳಿಗೆ ಬೇಕಾದ ಸಿಹಿ ಪದಾರ್ಥಗಳನ್ನು ತುಂಬಿಕೊಂಡು, ಮಕ್ಕಳನ್ನು ಹಾಗೂ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ. ನಮ್ಮ ಚಿತ್ರದ ನಾಯಕ ಗೋವರ್ಧನ ಪಾತ್ರವು ಸಹ ಇದೇ ರೀತಿ. ಹಾಗಾಗಿ “ಲಾಫಿಂಗ್ ಬುದ್ಧ” ಶೀರ್ಷಿಕೆ ಇಟ್ಟಿರುವುದಾಗಿ ನಿರ್ದೇಶಕ ಭರತ್ ರಾಜ್ ತಿಳಿಸಿದರು.

ರಿಷಭ್ ಹಾಗೂ ಭರತ್ ರಾಜ್ ಈ ಚಿತ್ರದ ನಾಯಕ ನಾನೇ ಎಂದಾಗ ನನಗೆ ಆಶ್ಚರ್ಯವಾಯಿತು. ನಂತರ ಕಥೆ ಕೇಳಿ ಈ ಇಷ್ಟವಾಯಿತು. ಈ ಚಿತ್ರಕ್ಕಾಗಿ ನಾನು ತೂಕ ಹೆಚ್ಚಿಸಿಕೊಳ್ಳಬೇಕಾಯಿತು. ನಾನು ದಪ್ಪ ಆದ ತಕ್ಷಣ ಚಿತ್ರೀಕರಣ ಆರಂಭವಾಯಿತು. ಈ ಚಿತ್ರದ ನಂತರ ಇಪ್ಪತ್ಮೂರು ಕೆ‌ಜಿ ತೂಕ ಇಳಿಸಿಕೊಂಡಿದ್ದೇನೆ ಎಂದು ಪ್ರಮೋದ್ ಶೆಟ್ಟಿ ತಿಳಿಸಿದರು.

ರಿಷಭ್ ಶೆಟ್ಟಿ ಅವರು ಮಾಡಬೇಕಿದ್ದ ಪಾತ್ರವನ್ನು ನಾನು ಮಾಡಿದ್ದೇನೆ. ಆದರೆ ಪಾತ್ರದ ಬಗ್ಗೆ ಹೇಳುವ ಹಾಗಿಲ್ಲ ಎಂದರು ದಿಗಂತ್.

ಸತ್ಯವತಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿ ತೇಜು ಬೆಳವಾಡಿ ಹೇಳಿದರು. ನಿವೃತ್ತ ಪೊಲೀಸ್ ಅಧಿಕಾರಿ ಉಮೇಶ್ ಅವರು ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದರು. ಹಾಡಿನ ಬಗ್ಗೆ ಕೆ.ಕಲ್ಯಾಣ್ ಮಾತನಾಡಿದರು. ಚಿತ್ರದ ವಿತರಕರಾದ ಕೆ‌.ಆರ್.ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಪತ್ರಿಕಾಗೋಷ್ಠಿಲ್ಲಿದ್ದರು.

Tags: diganthKannada movieLaughing BuddaRishab Shettysandalwood
Previous Post

ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ಸಂವಿಧಾನಬಾಹಿರ: ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಹತ್ವದ ತೀರ್ಪು

Next Post

ಚನ್ನಪಟ್ಟಣ ಕ್ಷೇತ್ರದ ಬಡವರ ನಿವೇಶನಕ್ಕಾಗಿ 120 ಎಕರೆ ಜಮೀನು ಗುರುತು: ಡಿ.ಕೆ. ಶಿವಕುಮಾರ್

Related Posts

ಶಬರಿಮಲೆ ಪ್ರವೇಶ ವಿಚಾರ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ
Top Story

ಆರ್ ಎಸ್ ಎಸ್ ವಿರುದ್ಧ  ಖರ್ಗೆ ದ್ವೇಷ ಭಾಷಣ ಆರೋಪ: ಬಿಜೆಪಿ ದೂರು

by ಪ್ರತಿಧ್ವನಿ
April 7, 2026
0

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅಸ್ಸಾಂ ಬಿಜೆಪಿ ಪೊಲೀಸರು ಹಾಗೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.ಅಸ್ಸಾಂ...

Read moreDetails
ಶಬರಿಮಲೆ ಪ್ರವೇಶ ವಿಚಾರ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ

ಶಬರಿಮಲೆ ಪ್ರವೇಶ ವಿಚಾರ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ

April 7, 2026
ಶಿವರಾಜ್‌ಕುಮಾರ್ ಮದುವೆ ಗಾಸಿಪ್‌ಗೆ ಸುಧಾರಾಣಿ ಟಾಂಗ್

ಶಿವರಾಜ್‌ಕುಮಾರ್ ಮದುವೆ ಗಾಸಿಪ್‌ಗೆ ಸುಧಾರಾಣಿ ಟಾಂಗ್

April 7, 2026
ರಾಜ್ಯಪಾಲರ ವಿರುದ್ಧ ಟೀಕೆ: “ಕನ್ನಡ ವಿರೋಧಿ ಧೋರಣೆ ಬಿಡಲಿ, ರಾಜೀನಾಮೆ ನೀಡಲಿ” ಒತ್ತಾಯ

ರಾಜ್ಯಪಾಲರ ವಿರುದ್ಧ ಟೀಕೆ: “ಕನ್ನಡ ವಿರೋಧಿ ಧೋರಣೆ ಬಿಡಲಿ, ರಾಜೀನಾಮೆ ನೀಡಲಿ” ಒತ್ತಾಯ

April 6, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
Next Post
ಚನ್ನಪಟ್ಟಣ ಕ್ಷೇತ್ರದ ಬಡವರ ನಿವೇಶನಕ್ಕಾಗಿ 120 ಎಕರೆ ಜಮೀನು ಗುರುತು: ಡಿ.ಕೆ. ಶಿವಕುಮಾರ್

ಚನ್ನಪಟ್ಟಣ ಕ್ಷೇತ್ರದ ಬಡವರ ನಿವೇಶನಕ್ಕಾಗಿ 120 ಎಕರೆ ಜಮೀನು ಗುರುತು: ಡಿ.ಕೆ. ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada