ಕೋಲ್ಕತ್ತಾದ(Kolkata) ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಭಗವದ್ಗೀತೆಯ ಸಾಮೂಹಿಕ ಪಠಣದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಇಂದು ಸಂಪೂರ್ಣ ಬ್ರಿಗೇಡ್ ಪೆರೇಡ್ ಮೈದಾನ ಕೇಸರಿ ಮಯವಾಗಿ ಕಾಣಿಸಿದ್ದು, ಅಖಂಡ ಹಿಂದೂ ಸಮಾಜ ಒಂದಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆ.

ʼಪಂಚ ಲಖೋ ಕೊಂಥೇ ಗೀತಾ ಪಠಣʼ (ಐದು ಲಕ್ಷ ಧ್ವನಿಗಳಿಂದ ಗೀತಾ ಪಠಣ) ಎನ್ನುವ ಹೆಸರಿನೊಂದಿಗೆ ವಿವಿಧ ಮಠಗಳು ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳಿಂದ ಆಯ್ಕೆಯಾದ ಸನ್ಯಾಸಿಗಳು ಮತ್ತು ಆಧ್ಯಾತ್ಮಿಕ ನಾಯಕರ ಸಮೂಹವಾದ ಸನಾತನ ಸಂಸ್ಕೃತಿ ಸಂಸದ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಬ್ರಿಗೇಡ್ ಪೆರೇಡ್ ಮೈದಾನ ಕೇಸರಿ ಸಮುದ್ರವಾಗಿ ಕಂಡುಬಂದಿತು.

ಪಶ್ಚಿಮ ಬಂಗಾಳದ ದೀರ್ಘ ಆಧ್ಯಾತ್ಮಿಕ ಪರಂಪರೆಯನ್ನು ಎತ್ತಿ ತೋರಿಸಲು ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ಆಯೋಜಕರ ಹೇಳಿದ್ದಾರೆ. ಇನ್ನು ಇದೇ ಬ್ರಿಗೇಡ್ ಮೈದಾನದಲ್ಲಿ ಬಂಗಾಳದ ರಾಜಕೀಯ ಪಕ್ಷಗಳು ತಮ್ಮ ಬಲವನ್ನು ಪ್ರದರ್ಶಿಸುತ್ತಿವೆ ಆದರೆ ಇಂದು ರಾಜಕೀಯ ಪಕ್ಷಗಳ ಹಣ ಆಯೋಜಿತ ಕಾರ್ಯಕ್ರಮಗಳಿಗೆ ಸೆಡ್ಡು ಹೊಡೆಯುವಂತೆ ಭಗವದ್ಗೀತೆಯ ಸಾಮೂಹಿಕ ಪಠಣಕ್ಕೆ ಹಿಂದೂ ಸಮಾಜ ಹರಿದು ಬಂದಿತು. ಐದು ಲಕ್ಷಕ್ಕೂ ಹೆಚ್ಚು ಜನರು ಭಗವದ್ಗೀತೆಯ ಪಠಿಸುವ ಮೂಲಕ ಆಧ್ಯಾತ್ಮಿಕದ ಶಕ್ತಿಯನ್ನು ಜಗತ್ತಿಗೆ ಪಸರಿಸುವ ಪ್ರಯತ್ನವನ್ನು ಸಂಸ್ಕೃತಿ ಸಂಸದ್ ಮಾಡಿದೆ.











