• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸೆಲೆಬ್ರಿಟಿ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್…ಇಂಡಸ್ಟ್ರೀಗೆ ಯುವ ಪ್ರತಿಭೆ ಅಶ್ವಿನ್ ಎಂಟ್ರಿ

ಗೌರಿ ಆರ್ಟ್ಸ್ ಪ್ರೊಡಕ್ಷನ್ ಚೊಚ್ಚಲ ಸಿನಿಮಾಗೆ ಕಿಚ್ಚ ಸಾಥ್...'ಸೆಲೆಬ್ರಿಟಿ'ಯಾಗಿ ಬಂದ ಯುವ ನಾಯಕ ಅಶ್ವಿನ್

ಪ್ರತಿಧ್ವನಿ by ಪ್ರತಿಧ್ವನಿ
March 1, 2026
in ಕರ್ನಾಟಕ, ಸಿನಿಮಾ
0
ಸೆಲೆಬ್ರಿಟಿ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್…ಇಂಡಸ್ಟ್ರೀಗೆ ಯುವ ಪ್ರತಿಭೆ ಅಶ್ವಿನ್ ಎಂಟ್ರಿ
Share on WhatsAppShare on FacebookShare on Telegram
ಸಚಿವ ಸುಧಾಕರ್ ಹಣ ಪಡೆದು ವಿದ್ಯಾರ್ಥಿಗೆ ಕೆಲಸ ಕೊಟ್ಟಿಲ್ಲಾ.! | Kantha Kumar | Dharawad Students Protest |‌

ಕನ್ನಡ ಚಿತ್ರರಂಗಕ್ಕೆ ಸದಾಭಿರುಚಿ ಸಿನಿಮಾ ನೀಡಬೇಕೆಂಬ ಉದ್ದೇಶದಿಂದ ಹುಟ್ಟಿಕೊಂಡಿರುವ ನಿರ್ಮಾಣ ಸಂಸ್ಥೆ ಗೌರಿ ಆರ್ಟ್ಸ್. ‌ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಚಿತ್ರದ ಟೈಟಲ್ ಲಾಂಚ್ ಇವೆಂಟ್ ನಿನ್ನೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಅಂದಹಾಗೇ ಸಿನಿಮಾಗೆ ಸೆಲೆಬ್ರಿಟಿ ಎಂಬ ಟೈಟಲ್ ಇಡಲಾಗಿದೆ.

ADVERTISEMENT

ಟೈಟಲ್ ಲಾಂಚ್ ಬಳಿಕ ಸುದೀಪ್ ಮಾತನಾಡಿ, ನನಗೆ ಟೀಸರ್ ತುಂಬಾ ಇಷ್ಟವಾಯ್ತು. ಟೆಕ್ನಿಕಲ್ ಆಗಿ ಬ್ಯೂಟಿಫುಲ್ ಆಗಿದೆ. ವಿಜಯ್ ಮ್ಯೂಸಿಕ್ ಚೆನ್ನಾಗಿದೆ. ಇವ್ರು ಅರ್ಜುನ್ ಜನ್ಯ ಶಿಷ್ಯ. ಅಂಬಿ ನಿಂಗೆ ವಯಸ್ಸಾಯ್ತು ಚಿತ್ರದ ಮಾತಾಡೋ ತಾರೆಯ ಕಂಡ ಹಾಗೇ ಹಾಡು ಹಾಡಿರುವುದು ಇವರೇ. ಇವ್ರ ವಾಯ್ಸ್ ಬ್ಯೂಟಿಫುಲ್‌ ಆಗಿದೆ. ಟೀಸರ್ ಚೆನ್ನಾಗಿ ತೆಗೆದಿದ್ದಾರೆ. ಹೀರೋ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ನೀವು ಮಾಡಿರುವ ಡ್ಯಾನ್ಸ್ ನಮಗೆ ಮಾಡಲು ಹೇಳಿದರೆ ನಾವು ಭಯಪಡುತ್ತೇವೆ. ನಮಗೆ ಅಷ್ಟೆಲ್ಲಾ ಬರಲ್ಲ. ನಿಮಗೆ ಒಳ್ಳೆ ಕಲೆ ಇದೆ. ನಾನು ಇಲ್ಲಿಗೆ ಬರಲು ಮೂಲ ಕಾರಣ ಮಹೇಶ್ ಅಣ್ಣ. ಬಹಳ ವರ್ಷಗಳ ಪರಿಚಯ. ನನಗೆ ಬಹಳ ಬೇಕಾದ ವ್ಯಕ್ತಿ. ಸೆಲೆಬ್ರೆಟಿ ಸಿನಿಮಾ ಇವತ್ತು ಇಲ್ಲಿ ಲಾಂಚ್ ಆಗಿದೆ. ಒಂದು ಸಿನಿಮಾ ಮಾಡುವುದು ಇಸಿ ಕೆಲಸವಾದರೆ, ಅದು ಬೆಳೆಯಬೇಕು ಎಂದರೆ ಅದಕ್ಕೆ ನಿಮ್ಮ ಸಹಕಾರ ಬೇಕು. ಟೆಕ್ನಿಕಲ್ ಚಿತ್ರ ಎಕ್ಸಿಲೆಂಟ್ ಆಗಿದೆ. ಸಿನಿಮಾದಲ್ಲಿ ಇರುವ ಪ್ರತಿಯೊಬ್ಬರಿಗೂ ಒಳ್ಳೆದಾಗಲಿ ಎಂದರು.

ನಾಯಕ ಅಶ್ವಿನ್ ಮಾತನಾಡಿ, ನಾನು ಇದೇ ಮೊದಲ ಬಾರಿಗೆ ಸುದೀಪ್ ಸರ್ ಎದುರು ಮಾತಾಡ್ತಿದ್ದೇನೆ. ಏನ್ ಮಾತಾಡ್ಬೇಕು ಗೊತ್ತಾಗುತ್ತಿಲ್ಲ. ಅವರಿಗೆ ಧನ್ಯವಾದ. ಚಿಕ್ಕ ವಯಸ್ಸಿನಿಂದ ಕನಸು ಇಟ್ಕೊಂಡು ಬಂದಿದ್ದೇನೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲೆ ಇರಲಿ ಎಂದರು.

ನಮಸ್ಕಾರ ಕರ್ನಾಟಕ ಚೆನ್ನಾಗಿ ಇದ್ದೀರಾ ಎಂದು ಕನ್ನಡದಲ್ಲಿಯೇ ಮಾತು ಶುರು ಮಾಡಿದ ಹಿರಿಯ ನಟಿ ಸಂಗೀತ, ನನಗೆ ತುಂಬಾ ಸಂತೋಷವಾಗ್ತಿದೆ.‌ ನಾನು ಇಷ್ಟು ವರ್ಷವಾದ್ಮೇಲೆ ಸೆಲೆಬ್ರಿಟಿ ಸಿನಿಮಾ ಮೂಲಕ ಕಂಬ್ಯಾಕ್ ಆಗುತ್ತಿದ್ದೇನೆ. ನಿರ್ದೇಶಕ ಕಿರಣ್ ಅವರು, ಮಹೇಶ್ ಸರ್ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು. ಸುದೀಪ್ ಅವರ ಅಭಿಮಾನಿ ನಾನು. ಹೀರೋ ತುಂಬಾ ಹಾರ್ಡ್ ವರ್ಕ್ ಮಾಡ್ತಾರೆ.‌ ಈ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದರು.

ಸೆಲೆಬ್ರಿಟಿ ಸಿನಿಮಾವನ್ನು ಗೌರಿ ಆರ್ಟ್ಸ್ ಬ್ಯಾನರ್ ನಡಿ ಜೆಡಿಎಸ್ ನಾಯಕ ಸಾರಾ ಮಹೇಶ್ ಹಾಗೂ ಸುಷ್ಮಾ ಅಶ್ವಿನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಯುವ ನಟ ಅಶ್ವಿನ್ ನಾಯಕನಾಗಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಹಾರ್ಡ್ ವರ್ಕ್ ಮಾಡಿ ಅಶ್ವಿನ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ ಅನ್ನೋದು ಟೈಟಲ್ ಟೀಸರ್ ನೋಡಿದ್ರೆ ಗೊತ್ತಾಗುತ್ತದೆ. ಡ್ಯಾನ್ಸ್, ಫೈಟಿಂಗ್ ನಲ್ಲಿಯೂ ಅಶ್ವಿನ್ ಧೂಳ್ ಎಬ್ಬಿಸಿದ್ದಾರೆ.

ಕಿರಣ್ ವಿಶ್ವನಾಥ್ ಸೆಲೆಬ್ರಿಟಿ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ನಾಯಕಿಯಾಗಿ ನಟಿ ಪ್ರಿಯಾಂಕಾ ಆಚಾರ್ ಅಭಿನಯಿಸುತ್ತಿದ್ದು, ಯಾರೇ ನೀನು ಚೆಲುವೆ ಖ್ಯಾತಿಯ ಸಂಗೀತ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಆಗುತ್ತಿದ್ದಾರೆ. ಒಂದೊಳ್ಳೆ ತಂಡ, ಒಂದು ಅದ್ಭುತ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದೆ. ಈ ಚಿತ್ರವನ್ನು ಸುರೇಶ್ ಬಾಬು ಸಿಬಿ ಪ್ರೆಸೆಂಟ್ ಮಾಡುತ್ತಿದ್ದಾರೆ.

ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ರವಿ ವರ್ಮಾ ಸಾಹಸ ನಿರ್ದೇಶನ, ಗುಣ ಕಲಾ ನಿರ್ದೇಶನ, ಅನಿರುದ್ಧ್ ಶಾಸ್ತ್ರೀ ಸಾಹಿತ್ಯ ಹಾಡುಗಳಿಗಿದೆ. ಜಾನಿ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಸಾಂಗ್ಸ್ ಮೂಡಿ ಬರಲಿದೆ.

Tags: chandu kannada movie kiccha sudeepchandu kiccha sudeep moviekiccha sudeep 46 moviekiccha sudeep all moviekiccha sudeep hindi moviekiccha sudeep kannada moviekiccha sudeep kannada movie sceneskiccha sudeep kannada movieskiccha sudeep kannada new moviekiccha sudeep moviekiccha sudeep movieskiccha sudeep movies kannadakiccha sudeep new kannada moviekiccha sudeep new kannada movieskiccha sudeep new moviekiccha sudeep old movieskiccha sudeep tamil movies
Previous Post

ಮಹಾರಾಷ್ಟ್ರದಲ್ಲಿ ಭೀಕರ ಸ್ಫೋಟ: 15 ಮಂದಿ ದಾರುಣ ಸಾ**

Next Post

ಮರೆಯಾಗುತ್ತಿರುವ ಸಾಂಸ್ಥಿಕ ಮೌಲ್ಯಗಳು

Related Posts

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..
Top Story

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

by ಪ್ರತಿಧ್ವನಿ
March 3, 2026
0

ಬೆಂಗಳೂರು : ನಗರದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಜೀವನಹಳ್ಳಿಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಇಂಧನ ಸಚಿವ ಕೆ.ಜೆ. ಜಾಋಜ್ ಜನರ ಸಮಸ್ಯೆಗಳನ್ನು ಆಲಿಸಿದರು. ಕ್ಷೇತ್ರದಲ್ಲಿ ಕೈಗೊಂಡಿರುವ...

Read moreDetails
ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ: ನಂತರ ಆದದ್ದೇನು ?

ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ: ನಂತರ ಆದದ್ದೇನು ?

March 3, 2026
ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

March 3, 2026
“ನನ್ನ, ಡಿಕೆಶಿ ಸಂಬಂಧ ಹಾಲು-ಜೇನಿನಂತಿದೆ, ಹುಳಿ ಹಿಂಡಿದ್ರೆ ನಿಮ್ಮ ಹುಳಿ ಮುಗಿಯುತ್ತೆ, ಹೊರತು ನಮ್ಮ ಸಂಬಂಧಕ್ಕೆ ಏನೂ ಆಗಲ್ಲಾ”

“ನನ್ನ, ಡಿಕೆಶಿ ಸಂಬಂಧ ಹಾಲು-ಜೇನಿನಂತಿದೆ, ಹುಳಿ ಹಿಂಡಿದ್ರೆ ನಿಮ್ಮ ಹುಳಿ ಮುಗಿಯುತ್ತೆ, ಹೊರತು ನಮ್ಮ ಸಂಬಂಧಕ್ಕೆ ಏನೂ ಆಗಲ್ಲಾ”

March 3, 2026
ಕುಮಾರಸ್ವಾಮಿ ಷಡ್ಯಂತ್ರದಿಂದ ಪ್ರಜ್ವ‌ಲ್‌ನನ್ನು ಜೈಲಿಗೆ ಹಾಕಿಸಿದ್ದಾರೆ : ಕದಲೂರು ಉದಯ್ ಸ್ಫೋಟಕ ಆರೋಪ..!

ಕುಮಾರಸ್ವಾಮಿ ಷಡ್ಯಂತ್ರದಿಂದ ಪ್ರಜ್ವ‌ಲ್‌ನನ್ನು ಜೈಲಿಗೆ ಹಾಕಿಸಿದ್ದಾರೆ : ಕದಲೂರು ಉದಯ್ ಸ್ಫೋಟಕ ಆರೋಪ..!

March 3, 2026
Next Post
ಮರೆಯಾಗುತ್ತಿರುವ ಸಾಂಸ್ಥಿಕ ಮೌಲ್ಯಗಳು

ಮರೆಯಾಗುತ್ತಿರುವ ಸಾಂಸ್ಥಿಕ ಮೌಲ್ಯಗಳು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada