ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವ ಬೇಡಿಕೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು ‘ಕೇರಳಂ’ ಎಂದೇ ಕರೆಯಲಾಗುತ್ತಿದ್ದು, ಈ ಕುರಿತು ಕೇರಳ ವಿಧಾನಸಭೆಯು ಈ ಹಿಂದೆ ನಿರ್ಣಯ ಅಂಗೀಕರಿಸಿತ್ತು.

ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು ‘ಕೇರಳಂ’ ಎಂದೇ ಕರೆಯಲಾಗುತ್ತಿದ್ದು, ಇದೇ ಹೆಸರನ್ನು ಸಂವಿಧಾನದ ಎಂಟನೇ ಅನುಸೂಚಿಯ ಎಲ್ಲಾ ಭಾಷೆಗಳಲ್ಲಿ ಅಳವಡಿಸಲು 2023 ಮತ್ತು 2024ರಲ್ಲಿ ಕೇರಳ ವಿಧಾನಸಭೆಯು ಒಮ್ಮತದ ನಿರ್ಣಯ ಅಂಗೀಕರಿಸಿತ್ತು.ಕೇರಳ ಸರ್ಕಾರದ ದೀರ್ಘಕಾಲದ ಬೇಡಿಕೆಯಂತೆ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಅನುಮದನೆ ನೀಡಿದೆ.

ಕೇರಳಂ ಎಂಬ ಹೆಸರಿನ ಮೂಲದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಐತಿಹಾಸಿಕ ದಾಖಲೆಗಳು ಕ್ರಿ.ಪೂ. 257 ರ ದಿನಾಂಕದ ಚಕ್ರವರ್ತಿ ಅಶೋಕನ ಶಾಸನವು ಕೇರಳಪುತ್ರ ಎಂಬ ಪದವನ್ನು ಉಲ್ಲೇಖಿಸುತ್ತದೆ. ಇನ್ನೊಂದು ನಂಬಿಕೆಯ ಪ್ರಕಾರ ಕೇರಳಂ ಎಂಬ ಪದವು ಕೇರ ಎಂಬ ಪದದಿಂದ ಬಂದಿದೆ, ಇದರ ಅರ್ಥ ತೆಂಗಿನ ಮರ. ರಾಜ್ಯದಲ್ಲಿ ತೆಂಗಿನ ಮರಗಳು ಹೇರಳವಾಗಿರುವುದರಿಂದ, ಇದು ‘ತೆಂಗಿನ ನಾಡು’ ಎಂಬ ಅರ್ಥಕ್ಕೂ ಸಂಬಂಧಿಸಿದೆ.






