ಕಳೆದ ಬುಧವಾರ ಬೆಳಕಿಗೆ ಬಂದ ಮೈಸೂರು ಗ್ಯಾಂಗ್ ರೇಪ್ ಪ್ರಕರಣವನ್ನು ಒಂದು ಬಸ್ ಟಿಕೆಟ್ ಸಾಕ್ಷಿಯಾಗಿ ಇಟ್ಟುಕೊಂಡು ಮೈಸೂರು ಪೋಲಿಸರು ಯಶಸ್ವಿಯಾಗಿ ಪ್ರಕರಣವನ್ನು ಬೇಧಿಸಿದ್ದಾರೆ!
ಆಗಸ್ಟ್ 24ಕ್ಕು ಸಂಜೆ ಮೈಸೂರಿನ ಕಾಲೇಜೊಂದರಲ್ಲಿ ಓದುತ್ತಿದ್ದ ಯುವತಿ ತನ್ನ ಗೆಳಯನ ಜೊತೆ ಚಾಮುಂಡಿ ಬೆಟ್ಟದ ತಪ್ಪಲಿಗೆ ತೆರಳಿದ್ದಾರೆ. ಅವರಿದ್ದ ಜಾಗಕ್ಕೆ ಐದಾರು ಜನರ ಪುಂಡರ ಗುಂಪೊಂದು ಯುವತಿ ಮತ್ತವಳ ಗೆಳೆಯನಿಗೆ ದುಡ್ಡು ಕೊಡುವುದಾಗಿ ಪೀಡಿಸಿದ್ದಾರೆ. ಯಾವಾಗ ಇಬ್ಬರೂ ದುಡ್ಡು ಕೊಡಲು ನಿರಾಕರಿಸಿದರೊ ಯುವಕನನ್ನು ತಳಿಸಿ ಯುವತಿಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.
ಸುಮಾರು ಗಂಟೆಗಳ ಕಾಲ ನಂತರ ಆಸ್ಪತ್ರೆಗೆ ತೆರಳಿದ ಅವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈಗಲೂ ಚಿಕಿತ್ಸೆ ನಡೆಯುತ್ತಲೇ ಇದೆ. ಬುಧವಾರ ಮದ್ಯಾಹ್ನ ಈ ಪ್ರಕರಣ ಬೆಳಕಿಗೆ ಬಂದ ನಂತರ ಪೋಲಿಸರು ಅತ್ಯಾಚಾರಕ್ಕೆ ಒಳಗಾದ ಯುವತಿಯ ಸ್ನೇಹಿತನ ಹೇಳಿಕೆಯನ್ನು ಪಡೆದಿದ್ದಾರೆ. ಆತ ಕೊಟ್ಟ ಮಾಹಿತಿಯ ಮೇರೆಗೆ ಸ್ಥಳ ಮಹಜರಿಗೆ ಎಂದು ತೆರಳಿದ ಪೋಲಿಸರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಷ್ಟು ವಸ್ತುಗಳು ಸಿಗುತ್ತವೆ. ಮತ್ತು ಸೆಲ್ಪೋನ್ ನೆಟ್ವರ್ಕ್ ಡೇಟಾವನ್ನು ಕಲೆಹಾಕಲು ಆದೇಶಿಸುತ್ತಾರೆ.

ಪೋಲಿಸರಿಗೆ ಸಿಕ್ಕಂತ ವಸ್ತುಗಳೆಂದರೆ ಬಸ್ ನಲ್ಲಿ ಪ್ರಯಾಣಿಸಿದ ಟಿಕೆಟ್ಗಳು, ಕುಡಿದು ಬಿಸಾಡಿದ ಬಾಟಲಿಗಳು ಮತ್ತು ಸೆಲ್ಪೋನ್ ನೆಟ್ವರ್ಕ್ ಡೇಟಾ ಇದನ್ನೆ ತನಿಖೆಯ ಮುಖ್ಯಭಾಗವನ್ನಗಿ ಮಾಡಿಕೊಂಡ ಮೈಸೂರು ಪೋಲಿಸರು ಕಾಮುಕರ ಜಾಡು ಹಿಡಿದು ಹೊರಟರು.
ಈಗೆ ಹೊರಟ ಪೋಲಿಸರಿಗೆ, ತಮಿಳುನಾಡಿನ ತಾಲ್ವಾಡಿಯಿಂದ ಕರ್ನಾಟಕ ಚಾಮರಾಜನಗರಕ್ಕೆ ಬಂದ ಬಸ್ ಟಿಕೆಟ್ ಜಾಡು ಹಿಡಿದು ಹೊರಟ ಅವರಿಗೆ, ಮುಂದಿನ ಹಂತವು ಪೋಲಿಸ್ ಮೊಬೈಲ್ ಟವರ್‌ಗಳಿಂದ ಕರೆ ವಿವರದ ದಾಖಲೆಯನ್ನು ಪರಿಶೀಲಿಸಿ ತನಿಖೆಯನ್ಮು ಮುಂದುವರಿಸುವುದಾಗಿತ್ತು, ಇದು ಕರೆ ಮಾಡಿದಾಗ ವ್ಯಕ್ತಿಯ ಸ್ಥಳದ ಸುಳಿವು ನೀಡುತ್ತದೆ.
ಪೊಲೀಸರು ಎರಡು ಮೊಬೈಲ್ ಟವರ್‌ಗಳಿಂದ ಒಂದು ಸಂಖ್ಯೆಯನ್ನು ಹೊಂದಿಸಬಹುದು – ಅವುಗಳಲ್ಲಿ ಒಂದು ಅಪರಾಧದ ಸ್ಥಳಕ್ಕೆ ಹತ್ತಿರದಲ್ಲಿದ್ದರೆ ಮತ್ತು ಇನ್ನೊಂದು ಚಾಮರಾಜನಗರ ಮತ್ತು ತಾಳವಾಡಿ ಮಾರ್ಗದಲ್ಲಿ ಇದೆ. ಮೂಲಗಳ ಪ್ರಕಾರ ಇದು ಶಂಕಿತರನ್ನು ಪತ್ತೆ ಮಾಡಲು ಸಹಾಯ ಮಾಡಿತು. ಆದಾಗ್ಯೂ, ಮಹಾನಿರ್ದೇಶಕರು ಮತ್ತು ಪೊಲೀಸ್ ಇನ್ಸ್‌ಪೆಕ್ಟರ್-ಜನರಲ್ ಪ್ರವೀಣ್ ಸೂದ್ ಅವರು ಸುಳಿವುಗಳ ಸ್ವರೂಪವನ್ನು ವಿವರಿಸಲಿಲ್ಲ ಆದರೆ “ವೈಜ್ಞಾನಿಕ ಮತ್ತು ತಾಂತ್ರಿಕ ಸಾಕ್ಷ್ಯಗಳ” ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.



